• Home
  • »
  • News
  • »
  • vijayapura
  • »
  • Special Bus: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಿಂದ ಡಿಸೆಂಬರ್ 24 ರವರೆಗೆ ವಿಶೇಷ ಬಸ್ ಸೌಲಭ್ಯ

Special Bus: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಿಂದ ಡಿಸೆಂಬರ್ 24 ರವರೆಗೆ ವಿಶೇಷ ಬಸ್ ಸೌಲಭ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಿಗೆ ಬಸ್ ಕಾರ್ಯಾಚರಣೆ ನಡೆಸಲಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಡಿಸೆಂಬರ್ 18 ರಿಂದ ಡಿಸೆಂಬರ್ 24ರವರೆಗೆ ನಡೆಯುವ ಶ್ರೀ ಯಲ್ಲಮ್ಮದೇವಿ ಜಾತ್ರೆಯ (Yallamma Devo Fair) ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (Kalyan Karnataka) ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯ ವ್ಯವಸ್ಥೆ (Special Bus)  ಕಲ್ಪಿಸಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ (Vijayapura News) ವಿಭಾಗದ ಹಲವಾರು ತಾಲೂಕುಗಳಿಂದ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಿದೆ.


    ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಿಗೆ ಬಸ್ ಕಾರ್ಯಾಚರಣೆ ನಡೆಸಲಿದೆ.


    ಪ್ರಯಾಣಿಕರು ಅನುಕೂಲ ಪಡೆಯಲು ಮನವಿ
    ವಿಜಯಪುರ ಜಿಲ್ಲೆಯಲ್ಲಿ ಕೊಕಟನೂರ ಯಲ್ಲಮ್ಮದೇವಿಯ ಸಾವಿರಾರು ಭಕ್ತರಿದ್ದಾರೆ. ಈ ಭಕ್ತರು ಜಾತ್ರೆಗೆ ಆಗಮಿಸಲು ಹೆಚ್ಚಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಪ್ರತಿವರ್ಷದಂತೆ ಈ ವರ್ಷ ಸಹ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸರ್ಕಾರಿ ಬಸ್ ವ್ಯವಸ್ಥೆಯನ್ನ ಮಾಡಲಾಗಿದೆ. ಈ ಸೌಲಭ್ಯದ ಪ್ರಯೋಜನವನ್ನ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.


    ಇದನ್ನೂ ಓದಿ: Veerabhadreshwara Fair: ವೀರಭದ್ರೇಶ್ವರ ದೇವರಿಗೆ ಸಂಭ್ರಮದ ಜಾತ್ರೆ, ತೇರು ಎಳೆಯೋಕೆ ಸಹಸ್ರಾರು ಜನ!


    ಡಿಸೆಂಬರ್ 19ಕ್ಕೆ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವ; ಇಲ್ಲಿದೆ ವಿವರ
    ವಿಜಯಪುರ ನಗರದ ಹೊರ ಭಾಗದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ (Karnataka State Akkamahadevi Women's University) 13 ಮತ್ತು 14 ನೇ ಘಟಿಕೋತ್ಸವ ಇದೆ ತಿಂಗಳು ಡಿಸೆಂಬರ್ 19 ರಂದು ನಡೆಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿದೆ.


    ಇದನ್ನೂ ಓದಿ: Jalebi Recipe: ಚಳಿಗಾಲಕ್ಕೆ ರುಚಿರುಚಿ ಜಿಲೇಬಿ ಸವಿಯಿರಿ; ಇಲ್ಲಿದೆ ಸುಲಭ ರೆಸಿಪಿ


    ಡಿಸೆಂಬರ್ 19 ರ ಮಧ್ಯಾಹ್ನ 12 ಗಂಟೆಗೆ ವಿಶ್ವ ವಿದ್ಯಾಲಯದ ಜ್ಞಾನಶಕ್ತಿ ಆವರಣದ ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ಈ ಘಟಿಕೋತ್ಸವ (Convocation) ಕಾರ್ಯಕ್ರಮ ನಡೆಯಲಿದೆ.


    ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗಿ
    ರಾಜ್ಯಪಾಲ ಮತ್ತು ಮಹಿಳಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗಿಯಾಗಿ ಈ ಘಟಿಕೋತ್ಸವದ ಅಧ್ಯಕ್ಷತೆಯನ್ನ ವಹಿಸಿಕೊಳ್ಳಲಿದ್ದಾರೆ.


    ವರದಿ : ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು