• Home
  • »
  • News
  • »
  • vijayapura
  • »
  • Sitamata Temple: ಲವಕುಶರ ಜನ್ಮಸ್ಥಾನ, ಸೀತಾಮಾತೆಯ ದೇಗುಲವಿರುವ ತಾಣವಿದು

Sitamata Temple: ಲವಕುಶರ ಜನ್ಮಸ್ಥಾನ, ಸೀತಾಮಾತೆಯ ದೇಗುಲವಿರುವ ತಾಣವಿದು

X
ಸೀತಾಮಾತೆ ದೇವಸ್ಥಾನ

"ಸೀತಾಮಾತೆ ದೇವಸ್ಥಾನ"

ಶ್ರೀರಾಮ, ಸೀತಾಮಾತೆ ಜೊತೆಯಾಗಿ ನೆಲೆ ನಿಂತಿರುವ ದೇಗುಲ, ಮಂದಿರಗಳನ್ನು ನೋಡಿದ್ದೇವೆ. ಆದರೆ, ಇಲ್ಲಿ ಮಾತ್ರ ಸೀತಾಮಾತೆಯಷ್ಟೇ ದಿನಂಪ್ರತಿ ಪೂಜೆ ಪಡೆಯುತ್ತಿದ್ದಾಳೆ. ಇದರ ಹಿಂದೆ ಒಂದು ಪುರಾಣವೂ ಇದೆ.

  • News18 Kannada
  • 4-MIN READ
  • Last Updated :
  • Bagalkot, India
  • Share this:

    ಬಾಗಲಕೋಟೆ: ವಾಲ್ಮೀಕಿ ಆಶ್ರಮ, ಸೀತಾಮಾತೆಯ ಪ್ರಸೂತಿ ಗೃಹ, ಇನ್ನೊಂದೆಡೆ ತೂಗು ಹಾಕಲಾದ ಮಕ್ಕಳ ತೊಟ್ಟಿಲು, ಲವ ಕುಶರು ಸ್ನಾನ ಮಾಡುತ್ತಿದ್ದ ಹೊಂಡ. ಹೀಗೆ ಇಲ್ಲಿ ಏನೇ ಇದ್ದರೂ ಅದೆಲ್ಲವೂ ರಾಮಾಯಾಣದ ಜೊತೆಗೆ ತಳುಕು ಹಾಕಿಕೊಂಡಿದೆ. ಅದ್ರಲ್ಲೂ ಸೀತಾಮಾತೆ ಹಾಗೂ ಲವಕುಶರ ಜೀವನ ಚರಿತ್ರೆಯನ್ನ ಹೇಳುವ ಜಾಗವಿದು. ಹೌದು, ನೀವೆಲ್ಲ ಒಂದು ಬಾರಿ ಬಾಗಲಕೋಟೆಯ ಸೀತೆಮನೆ ಗ್ರಾಮಕ್ಕೆ ಬರಲೇಬೇಕು. ಇಲ್ಲಿ ದೇಶದ ಏಕೈಕ ಸೀತಾಮಾತೆಯದ್ದು ಎನ್ನಲಾದ ದೇಗುಲವಿದೆ. ಮಾತ್ರವಲ್ಲದೇ ಸೀತೆಯ ಜೀವನದ ಪ್ರಮುಖ ಘಟ್ಟವೊಂದು ಇಲ್ಲೇ ಘಟಿಸಿತ್ತು ಎಂಬ ನಂಬಿಕೆಯೂ ಇದೆ.


    ನಿಜ, ಸೀತೆಯು ತನ್ನಿಬ್ಬರು ಅವಳಿ ಕಂದಮ್ಮಗಳಿಗೆ ಜನ್ಮ ನೀಡಿದ ಸ್ಥಳ, ಅವರನ್ನು ಸ್ನಾನ ಮಾಡಿಸಲು ಮಾಡಿದ್ದ ಬಾವಿಯನ್ನ ಇಲ್ಲಿ ಕಣ್ತುಂಬಿಕೊಳ್ಳಬಹುದುರಾಮಾಯಣ ಕಾಲದಲ್ಲಿ ಸ್ಥಳಕ್ಕೆ ದಟ್ಟ ಅರಣ್ಯವೆಂದು ಕರೆಯಲಾಗುತ್ತಿತ್ತು, ಇಲ್ಲಿಗೆ ವಾಲ್ಮೀಕಿ ಮಹರ್ಷಿಗಳು ಕೂಡಾ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಹಾಗಾಗಿ ಇಲ್ಲೊಂದು ವಾಲ್ಮೀಕಿ ಆಶ್ರಮ ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಸೀತಾಮಾತೆಯ ಪ್ರಸೂತಿ ಗೃಹ ಇಲ್ಲಿದ್ದು, ಸೀತಾಮಾತೆಯು ಇಲ್ಲಿಯೇ ಲವ ಕುಶರಿಗೆ ಜನ್ಮ ನೀಡಿದ್ದಾಗಿ ಹೇಳಲಾಗುತ್ತದೆ. ಅದರ ಪಕ್ಕದಲ್ಲೇ ಲವ ಕುಶರನ್ನು ಸ್ನಾನ ಮಾಡಿಸುತ್ತಿದ್ದ ಹೊಂಡವನ್ನೂ ಇಲ್ಲಿ ನೋಡಬಹುದಾಗಿದೆ.


    ಸೀತಾಮಾತೆಯ ಬಾವಿ ಇಲ್ಲಿದೆ

    ವಿಶೇಷ ಅಂದ್ರೆ ಲವಕುಶರನ್ನು ಸ್ನಾನ ಮಾಡಿಸುತ್ತಿದ್ದ ಹೊಂಡದ ನೀರು ಬತ್ತಿ ಹೋದ ಉದಾಹರಣೆ ಇಲ್ಲವಂತೆ. ಇನ್ನು ದೇವಸ್ಥಾನದ ಬಲ ಭಾಗಕ್ಕೆ ಒಂದು ಬಾವಿ ಇದ್ದು ಸೀತಾಮಾತೆ ಸ್ನಾನ ಮಾಡಲು ಬಳಸುತ್ತಿದ್ದರು ಅನ್ನೋ ಐತಿಹ್ಯವಿದೆ. ಸೀತಾಮಾತೆ ನೆಲೆಸಿದ ಪ್ರದೇಶದಲ್ಲಿ ಸೀತಾಮಾತೆ ಮಂದಿರವಿದೆ.


    ಸೀತೆಯ ಉದ್ಭವ ಮೂರ್ತಿ


    ಇಲ್ಲಿ ಮುಖ್ಯವಾಗಿ ಸೀತೆಯ ಎರಡು ಮೂರ್ತಿಗಳಿದ್ದು ಚಿಕ್ಕ ಮೂರ್ತಿ ಉದ್ಬವ ಮೂರ್ತಿಯಾಗಿದೆ. ಇದನ್ನ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ, ಬದಲಾಗಿ ಮಂದಿರವೇ ಅಲುಗಾಡಿತ್ತು ಅನ್ನೋ ಮಾತಿದೆ. ಕಾರಣದಿಂದಾಗಿ ಎರಡು ಮೂರ್ತಿಗಳನ್ನ ಮಾಡಿ ಇಲ್ಲಿ ನಿತ್ಯ ಪೂಜೆಗಳನ್ನ ಮಾಡಲಾಗುತ್ತದೆ.


    ತೊಟ್ಟಿಲು ಹರಕೆ

    ದೇವಸ್ಥಾನಕ್ಕೆ ಬಂದು ವಿವಾಹಿತ ಮಹಿಳೆಯರು ತೊಟ್ಟಿಲು ಕಟ್ಟಿ ಹೋದರೆ ಮಕ್ಕಳಾಗುತ್ತದೆ ಅನ್ನೋ ನಂಬಿಕೆ ಭಾಗದವರದ್ದು. ಹೀಗೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಸೀತಾಮಾತೆಯ ದೇವಸ್ಥಾನ ಮತ್ತು ರಾಮಾಯಣಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಜನ ನಂಬುತ್ತಾರೆ. ಮಾತ್ರವಲ್ಲದೇ ದೇಶದ ಏಕೈಕ ಸೀತಾಮಾತೆಯ ದೇಗುಲ ಅನ್ನೋ ಹೆಗ್ಗಳಿಕೆಯೂ ದೇವಸ್ಥಾನಕ್ಕಿದೆ.


    ವರದಿ - ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:Precilla Olivia Dias
    First published: