• Home
 • »
 • News
 • »
 • vijayapura
 • »
 • Siddheshwar Temple: ವಿಜಯಪುರದ ಸಿದ್ದೇಶ್ವರ ಜಾತ್ರೆಯ ವೈಭವ ಹೀಗಿತ್ತು ನೋಡಿ

Siddheshwar Temple: ವಿಜಯಪುರದ ಸಿದ್ದೇಶ್ವರ ಜಾತ್ರೆಯ ವೈಭವ ಹೀಗಿತ್ತು ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಟ್ಟಿನಲ್ಲಿ ಸಿದ್ಧೇಶ್ವರ ಶ್ರೀಗಳ ಲಿಂಗೈಕ್ಯರಾದ ಕೆಲವೇ ದಿನಗಳ ಅಂತರದಲ್ಲಿ ಸಿದ್ದೇಶ್ವರ ಜಾತ್ರೆ ನಡೆದಿದ್ದು, ಸರಳ ರೀತಿಯ ಸಡಗರ ಸಂಭ್ರಮ ಕಾಣಲು ಸಾಧ್ಯವಾಯಿತು.

 • Share this:

  ವಿಜಯಪುರ: ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ದೇವರ ಮೂರ್ತಿ, ಗರ್ಭ ಗುಡಿ ಹೊರಗೂ ಪುಷ್ಪಾಲಂಕಾರ. ಇದೆಲ್ಲರ ನಡುವೆ ಭಕ್ತಿಯಿಂದ ಕೈ ಎತ್ತಿ ಮುಗಿಯುತ್ತಿರುವ ಭಕ್ತರು. ಎಷ್ಟೇ ಸರಳ ಜಾತ್ರೆ ಅಂದ್ರೂ ವಿಜಯಪುರದ (Vijayapura News)  ಇತಿಹಾಸ ಪ್ರಸಿದ್ಧ ಸಿದ್ಧೇಶ್ವರ ಜಾತ್ರೆ ಸಡಗರ (Siddheshwar Temple Fair) ಸಂಭ್ರಮದಿಂದ ನಡೆಯಿತು.


  ಹೌದು, ವಿಜಯಪುರ ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ಜಾತ್ರೆ ಸಡಗರದಿಂದ ಧಾರ್ಮಿಕ ಭಕ್ತಿ ಭಾವಗಳೊಂದಿಗೆ ನಡೆಯಿತು. ಬೆಳಗ್ಗೆ ಶ್ರೀ ಸಿದ್ದೇಶ್ವರ ದೇವರ ಬೆಳ್ಳಿ ಮೂರ್ತಿಗೆ ಬಗೆ ಬಗೆಯ ಹೂವುಗಳಿಂದ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಗರ್ಭಗುಡಿ ಪ್ರವೇಶಕ್ಕೂ ನಾನಾ ರೀತಿಯ ಹೂಗಳಿಂದ ಶೃಂಗರಿಸಲಾಗಿತ್ತು. ಬೆಳಗ್ಗೆಯಿಂದಲೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.


  ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಆಡಂಬರಕ್ಕೆ ತಡೆ
  ಇತ್ತೀಚೆಗಷ್ಟೇ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಆಡಂಬರಕ್ಕೆ ಅವಕಾಶವನ್ನ ನೀಡದೆ ಸರಳವಾಗಿ ಆಚರಿಸಲಾಯಿತು. ಶ್ರೀಗಳ ಗೌರವಾರ್ಥವಾಗಿ ಜಾತ್ರೆಯನ್ನ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟಿನ ಅಂಗಡಿಗಳಿಗೆ ಅವಕಾಶವಿರಲಿಲ್ಲ. ಮನರಂಜನೆ ಕಾರ್ಯಕ್ರಮಗಳು, ಕುಸ್ತಿ ಪಂದ್ಯವಾವಳಿ, ಭಾರ ಎತ್ತುವ ಸ್ಪರ್ಧೆಗಳು ಹಾಗೂ ಉತ್ತರ ಕರ್ನಾಟದಲ್ಲಿಯೇ ಜಾನುವಾರಗಳ ಬೃಹತ್ ಜಾತ್ರೆಯನ್ನೂ ಕೂಡ ರದ್ದುಪಡಿಸಲಾಗಿತ್ತು. ಆದರೆ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಿರಲಿಲ್ಲ.


  ಶ್ರೀ ಸಿದ್ಧರಾಮೇಶ್ವರನ ಯೋಗದಂಡಕ್ಕೆ ಅಕ್ಷತೆ
  ತಲೆತಲಾಂತರದಿಂದ ನಡೆದುಕೊಂಡು ಬಂದಂತಹ ಸಂಪ್ರದಾಯಂತೆ ಜಾತ್ರೆ ಮತ್ತು ಸಂಕ್ರಾಂತಿಯ ಭೋಗಿ ಕಾರ್ಯಕ್ರಮ ನಡೆಯಿತು. ಮಂತ್ರದಂಡದೊಂದಿಗೆ ಶ್ರೀ ಸಿದ್ಧರಾಮೇಶ್ವರನ ಯೋಗದಂಡಕ್ಕೆ ಅಕ್ಷತೆ ಹಾಗೂ ವಿಧಿ ವಿಧಾನಗಳೊಂದಿಗೆ ಚರಿತ್ರೆ ಓದುವ ಕಾರ್ಯಕ್ರಮ ನಡೆಯಿತು. ಅಲ್ಲದೇ, ನಂದಿ ಧ್ವಜಗಳ ಉತ್ಸವ ಕೂಡ ನಡೆಯಿತು.
  ಇದನ್ನೂ ಓದಿ: Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!


  ಭಕ್ತರು ತಯಾರಿಸಿ ತಂದ ಖಾದ್ಯವನ್ನು ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ತಂದು ದೇವರಿಗೆ ನೈವೇದ್ಯ ಸಮರ್ಪಿಸಿ ಕೃತಾರ್ಥರಾದರು. ನಡೆದಾಡಿದ ದೇವರು ಸ್ವಾಮಿ ಸಿದ್ಧೇಶ್ವರರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.


  ಇದನ್ನೂ ಓದಿ: Bagalkot: 36ನೇ ಶರಣ ಮೇಳದ ವೈಭವ, ವಿಶೇಷತೆಗಳಿವು!


  ಒಟ್ಟಿನಲ್ಲಿ ಸಿದ್ಧೇಶ್ವರ ಶ್ರೀಗಳ ಲಿಂಗೈಕ್ಯರಾದ ಕೆಲವೇ ದಿನಗಳ ಅಂತರದಲ್ಲಿ ಸಿದ್ದೇಶ್ವರ ಜಾತ್ರೆ ನಡೆದಿದ್ದು, ಸರಳ ರೀತಿಯ ಸಡಗರ ಸಂಭ್ರಮ ಕಾಣಲು ಸಾಧ್ಯವಾಯಿತು. ಭಕ್ತರಂತೂ ಜಾತ್ರಾ ಸಂಭ್ರಮದ ನಡುವೆಯೂ ಸರಳ ಸಜ್ಜನಿಕೆಯ ಸಂತ, ಜ್ಞಾನ ದಾಸೋಹಿ ಸ್ವಾಮೀಜಿಗಳನ್ನ ನೆನಪಿಸಲು ಮರೆಯಲಿಲ್ಲ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: