• Home
 • »
 • News
 • »
 • vijayapura
 • »
 • Siddeshwar Swamiji: ದಾಸೋಹಿಗೆ ಅಕ್ಕಿಯ ನಮನ! ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ

Siddeshwar Swamiji: ದಾಸೋಹಿಗೆ ಅಕ್ಕಿಯ ನಮನ! ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಭಕ್ತರಂತೂ ಅಕ್ಕಿಯ ಮೂಲಕ ಮೂಡಿಬಂದ ಸಿದ್ದೇಶ್ವರ ಸ್ವಾಮೀಜಿಗಳನ್ನು ಕಂಡು ನಮಿಸುತ್ತಿದ್ದಾರೆ. ಭಕ್ತಿ ಭಾವದಿಂದ ಗೌರವಿಸುತ್ತಿದ್ದಾರೆ.

 • Share this:

  ವಿಜಯಪುರ: ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಎಂಟು ದಿನಗಳಾಗಿವೆ. ಆದ್ರೆ ಭಕ್ತರ ಕಣ ಕಣದಲ್ಲೂ ಸ್ವಾಮೀಜಿಗಳು (Siddeshwar Swamiji) ಆವರಿಸಿಕೊಂಡಿದ್ದಾರೆ. ಪ್ರತಿಯೊಂದರಲ್ಲಿ ಸ್ವಾಮೀಜಿಗಳನ್ನು ಕಾಣುವ ಭಕ್ತರು ಇದೀಗ ಅನ್ನದಾಸೋಹಿಗೆ ಅಕ್ಕಿ ಕಾಳಿನಿಂದ ಚೆಂದದ ರೂಪ ನೀಡಿದ್ದಾರೆ. ಬರೋಬ್ಬರಿ 50 ಕೆಜಿ ಅಕ್ಕಿಯನ್ನು ಬಳಸಿ ಸಿದ್ಧೇಶ್ವರ ಸ್ವಾಮೀಜಿಗೆ ಕಲಾವಿದರು ತಮ್ಮ ನಮನ ಸಲ್ಲಿಸಿದ್ದಾರೆ.


  ಹೌದು, ಪ್ರವಚನದ ಮೂಜಲಕ ಪ್ರಪಂಚದಾದ್ಯಂತ ಜ್ಞಾನ ಸುಧೆಯನ್ನ ಹರಡಿದ ಮಹಾನ ಸಂತ ಸಿದ್ದೇಶ್ವರ ಶ್ರೀಗಳಿಗೆ ಕಲಾವಿದರು ಸೇರಿಕೊಂಡು ತಮ್ಮ ಕಲೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅನ್ನದಾಸೋಹಿ, ಜ್ಞಾನದಾಸೋಹಿ ಸಂತನಿಗೆ ಅಕ್ಕಿ ಕಾಳುಗಳಿಂದ ರಚಿಸಿದ ಅದ್ಭುತ ಚಿತ್ರದ ಮೂಲಕ ಗೌರವ ಸಲ್ಲಿಸಿದ್ದಾರೆ.


  50 ಕೆಜೆ ಅಕ್ಕಿಯಲ್ಲಿ ಕಲೆ!
  ವಿಜಯಪುರದ ಶಹಾಪೇಟೆಯಲ್ಲಿರುವ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ 50 ಕೆಜಿಯಷ್ಟು ಅಕ್ಕಿಯನ್ನು ಬಳಸಿ ಸುಂದರವಾದ ರೂಪದಲ್ಲಿ ಶ್ರೀಗಳ ಚಿತ್ರವನ್ನು ಬಿಡಿಸಿದ್ದಾರೆ. 15*12 ಅಳತೆಯಲ್ಲಿ ಅಕ್ಕಿಯನ್ನು ಹಸಿರು, ಹಳದಿ ಬಣ್ಣ ಬಳಿದು ಒಂದು ರೀತಿ ಆ ಬಣ್ಣದಲ್ಲಿ ಪ್ರೇಮ್ ರೀತಿಯಲ್ಲಿ ಸಿದ್ಧಪಡಿಸಿ ಅಕ್ಕಿಯಲ್ಲಿ ಶ್ರೀಗಳ ಭಾವಚಿತ್ರವನ್ನು ರೂಪಿಸಿದ್ದಾರೆ. ರಂಗೋಲಿ ರಚನೆಯಲ್ಲಿ ಹೆಸರು ಮಾಡಿರುವ ತುಕಾರಾಂ ಬೇನೂರ ಹಾಗೂ ಸೃಜನಶೀಲ ಕಲಾಕೃತಿಗಳ ರಚನೆಗೆ ಹೆಸರಾಗಿರುವ ಉದಯ ಗುಜರಿ ಅವರು ಈ ಮಹತ್ವದ ಕಾರ್ಯ ಕೈಗೊಂಡಿದ್ದಾರೆ.


  ಇದನ್ನೂ ಓದಿ: Sitamata Temple: ಲವಕುಶರ ಜನ್ಮಸ್ಥಾನ, ಸೀತಾಮಾತೆಯ ದೇಗುಲವಿರುವ ತಾಣವಿದು


  ಜನರಂತೂ ಅಕ್ಕಿಯ ಮೂಲಕ ಮೂಡಿಬಂದ ಸಿದ್ದೇಶ್ವರ ಸ್ವಾಮೀಜಿಗಳನ್ನು ಕಂಡು ನಮಿಸುತ್ತಿದ್ದಾರೆ. ಭಕ್ತಿ ಭಾವದಿಂದ ಗೌರವಿಸುತ್ತಿದ್ದಾರೆ. ಕೆಲವರಂತೂ ಅನ್ನದಾಸೋಹಿಯ ಅಕ್ಕಿಯ ಭಾವಚಿತ್ರ ಕಂಡು ಭಾವುಕರಾಗುತ್ತಿದ್ದಾರೆ. ಶ್ರೀಗಳ ಅಗಲಿಕೆಯ ದುಃಖ ವಿಜಯಪುರ ಜಿಲ್ಲೆಯ ಜನರಿಂದ ಇನ್ನೂ ದೂರವಾಗಿಲ್ಲ ಅನ್ನೋದಕ್ಕೆ ಇದೆಲ್ಲವೂ ಸಾಕ್ಷಿ ನುಡಿಯುತ್ತಿದೆ.  ಇದನ್ನೂ ಓದಿ: Badami: ಭಕ್ತ ಸಾಗರದ ನಡುವೆ ಬನಶಂಕರಿಯ ತಾಯಿಯ ಅದ್ದೂರಿ ರಥೋತ್ಸವ!


  ಈ ಮಧ್ಯೆ ಕಲಾವಿದರ ಕೈಚಳಕದ ಮೂಲಕ ಮೂಡಿ ಬಂದ ಸಿದ್ದೇಶ್ವರ ಸ್ವಾಮೀಜಿಗಳ ಅಕ್ಕಿಯ ಭಾವಚಿತ್ರ ಶ್ರೀಗಳ ಅನುಯಾಯಿಗಳ ಮೆಚ್ಚುಗೆ ಗಳಿಸಿದೆ. ಸದಾ ಬರುತ್ತಿದ್ದ ಭಕ್ತರಿಗೆ ದಾಸೋಹದ ಮೂಲಕ ಹೆಸರಾಗಿದ್ದ ಶ್ರೀಗಳಿಗೆ ಅಕ್ಕಿಯ ಮೂಲಕವೇ ನಮಿಸುವ ಇರಾದೆ ಕಲಾವಿದರದ್ದು. ಹೀಗೆ ಸ್ವಾಮೀಜಿಗಳನ್ನ ಪ್ರತಿಯೊಂದು ಕಣದಲ್ಲೂ ಅವರ ಅನುಯಾಯಿಗಳು ಕಾಣುತ್ತಿರುವುದು ವಿಶೇಷವೇ ಆಗಿದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: