• Home
  • »
  • News
  • »
  • vijayapura
  • »
  • Siddheshwar Jatre: ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬಿಳಿ ಬಟ್ಟೆಯನ್ನೇ ಧರಿಸೋದೇಕೆ?

Siddheshwar Jatre: ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬಿಳಿ ಬಟ್ಟೆಯನ್ನೇ ಧರಿಸೋದೇಕೆ?

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನೂರಾರು ವರ್ಷಗಳ ಹಿಂದೆ ಸಿದ್ದರಾಮೇಶ್ವರ ಭಕ್ತರು ತೊಡುತ್ತಿದ್ದ ನಿಲುವಂಗಿಯೇ ಇಂದಿಗೂ ಇಲ್ಲಿ ಸಾಂಸ್ಕೃತಿಕ ಧಿರಿಸು.

  • Share this:

    ವಿಜಯಪುರ: ಮೈಸೂರು ದಸರಾದಂತೆ ಕಣ್ಮನ ಸೆಳೆಯೋ ಸಿದ್ದರಾಮೇಶ್ವರನ ಜಾತ್ರೆ. ಸಾವಿರಾರು ಭಕ್ತರ ನಡುವೆಯೂ ಗಮನ ಸೆಳೆಯೋ ಶ್ವೇತ ವಸ್ತ್ರಧಾರಿಗಳ ಗುಂಪು. ನಂದಿ ಕೋಲು ಮೆರವಣಿಗೆಯಲ್ಲಿ ಹೀಗೆ ಸಾಂಪ್ರದಾಯಿಕ ನಿಲುವಂಗಿ ತೊಟ್ಟವರದ್ದೇ ಪಾರುಪತ್ಯ ಕಾಣಬಹುದಾಗಿದೆ. ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ಹೀಗೆ ತೊಡುವ ನಿಲುವಂಗಿಗೂ ಶತಮಾನದ ಇತಿಹಾಸವಿದೆ ಅಂದ್ರೆ ನೀವ್ ನಂಬ್ತೀರಾ? ಯೆಸ್, ಅದುವೇ ನೋಡಿ ಸಿದ್ದರಾಮೇಶ್ವರ ಜಾತ್ರೆಯ (Siddheshwar Jatra) ನಂದಿಕೋಲು ಮೆರವಣಿಗೆ ಸ್ಪೆಷಲ್.


    ಈ ಸಿದ್ದರಾಮೇಶ್ವರ ಜಾತ್ರೆಯಲ್ಲಿ ನಂದಿಕೋಲುಗಳನ್ನ ಹಿಡಿಯುವವರು ತೊಟ್ಟುಕೊಳ್ಳುವ ಬಿಳಿ ಬಣ್ಣದ ಉಡುಪಿಗೆ ಶತಮಾನದ ಇತಿಹಾಸವಿದೆ. ನೂರಾರು ವರ್ಷಗಳ ಹಿಂದೆ ಸಿದ್ದರಾಮೇಶ್ವರ ಭಕ್ತರು ತೊಡುತ್ತಿದ್ದ ನಿಲುವಂಗಿಯೇ ಇಂದಿಗೂ ಇಲ್ಲಿ ಸಾಂಸ್ಕೃತಿಕ ಧಿರಿಸು. ಆಧುನಿಕ ಕಾಲದ ಶರ್ಟ್ ಬಟನ್ ಆಗಲಿ, ಪಾಲಿಸ್ಟರ್ ಬಟ್ಟೆಯಾಗಲಿ, ಫ್ಯಾಶನಿಕ್ ಹೊಲಿಗೆಯಾಗಲಿ ಈ ಉಡುಪಿಗೆ ಇರುವುದಿಲ್ಲ.


    ನಿಲುವಂಗಿ ಧರಿಸಿದವರು ಮಾತ್ರ ನಂದಿಕೋಲು ಹಿಡಿಯಬಹುದು!
    ಹಳೆ ಕಾಲದಂತೆಯೇ ಕಸಿ ಇರುವ ನಿಲುವಂಗಿಗಳನ್ನಷ್ಟೇ ಬಳಸುತ್ತಾರೆ. ಶತಮಾನಗಳ ಹಿಂದೆ ಸಿದ್ದರಾಮೇಶ್ವರ ಜಾತ್ರೆ ಆರಂಭಗೊಂಡಾಗ ಜನರು ತೊಡುತ್ತಿದ್ದ ವೇಷಭೂಷಣಗಳನ್ನೇ ಇಂದಿಗೂ ವಿಜಯಪುರದ ಜನ ತೊಡುತ್ತಿರುವುದು ಈ ಜಾತ್ರೆಯ ವಿಶೇಷ. ವಿಶೇಷವಾಗಿ ನಿಲುವಂಗಿ ತೊಟ್ಟವರು ಮಾತ್ರ ನಂದಿಕೋಲನ್ನ ಹಿಡಿದು ಸಾಗುವುದು ಇಲ್ಲಿನ ಪದ್ಧತಿಯಾಗಿದೆ.




    ವಿಜಯಪುರ ನಗರದ ಹಳೆ ಓಣಿಗಳಾದ ಜಾಡರ ಓಣಿ, ಅಡಕಿಗಲ್ಲಿ, ಮಠಪತಿ ಗಲ್ಲಿ ಹೀಗೆ ಒಟ್ಟು ಏಳು ಓಣಿಗಳಿಂದ ನಂದಿಕೋಲು ಸೇರುವುದು ಸಂಪ್ರದಾಯವಾಗಿದೆ. ದೇವಸ್ಥಾನದ ಆವರಣದಲ್ಲಿ 7 ನಂದಿಕೋಲುಗಳನ್ನ ಇಟ್ಟು ಪೂಜೆ ನೆರವೇರಿಸಲಾಗುತ್ತೆ.


    ಇದನ್ನೂ ಓದಿ: Siddheshwar Temple: ವಿಜಯಪುರದ ಸಿದ್ದೇಶ್ವರ ಜಾತ್ರೆಯ ವೈಭವ ಹೀಗಿತ್ತು ನೋಡಿ


    ನಂದಿಕೋಲುಗಳ ಮೆರವಣಿಗೆ
    ಬಳಿಕ ದೇಗುಲದ ಎದುರು ಸಿದ್ದರಾಮೇಶ್ವರನ ಮೂರ್ತಿಗೆ ಪೂಜೆ ಮತ್ತು ಪಲ್ಲಕ್ಕಿ ಸೇವೆ ಜರುಗುತ್ತೆ. ಇದಾದ ಬಳಿಕ ಸಕಲ ವಾದ್ಯ ವೈಭವದೊಂದಿಗೆ ನಗರದ ಪ್ರಮುಖಬೀದಿ ಬೀದಿಗಳಲ್ಲಿ ನಂದಿಕೋಲುಗಳ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ನಂದಿಕೋಲುಗಳನ್ನ ಹಿಡಿದುಕೊಳ್ಳುವವರು ಮಾತ್ರ ನಿಲುವಂಗಿ ತೊಟ್ಟವರಷ್ಟೇ.


    ಇದನ್ನೂ ಓದಿ: Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್​ಶೀಟ್ ರಕ್ಷಣೆ


    ಐದು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಿಂದಲೂ ಸಿದ್ದರಾಮೇಶ್ವರ ದೇವರ ಭಕ್ತರು ಆಗಮಿಸುತ್ತಾರೆ. ನಂದಿಕೋಲು ಮೆರವಣಿಗೆಗಂತೂ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಒಟ್ಟಿನಲ್ಲಿ ಇಂದಿಗೂ ತನ್ನ ಹಳೆಯ ಸಂಪ್ರದಾಯದೊಂದಿಗೆ ನಡೆಯುವ ಈ ಮೆರವಣಿಗೆ ನಿಜಕ್ಕೂ ವಿಶೇಷವೇ ಸರಿ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: