ವಿಜಯಪುರ: ಭಜನೆ, ಸಂಕೀರ್ತನೆ, ಕೈಯ್ಯಲ್ಲಿ ಕೇಸರಿ ಧ್ವಜ, ಹೆಜ್ಜೆ ಹಾಕುತ್ತಾ ಸಾಗಿರುವ ಹಿರಿ ಕಿರಿಯರು. ಹೀಗೆ ಇವರೆಲ್ಲರೂ ಹೊರಟಿದ್ದು ಅದ್ಯಾವುದೋ ಪ್ರಚಾರ (Siddharoodha Jatra Padayatra) ಕಾರ್ಯಕ್ಕಲ್ಲ, ಬದಲಿಗೆ ದೇವರ ಸಂಪ್ರೀತಿಗೆ. ಅದೂ ಬೇರೆ ಒಂದೆರಡು ಕಿಲೋ ಮೀಟರ್ ದೂರದ ನಡಿಗೆಯೂ ಅಲ್ಲ. ಹೌದು, ಮೂವರಿಂದ ಆರಂಭವಾದ ಪಾದಯಾತ್ರೆಯೊಂದು (Siddharoodha Padayatra) ಇಂದು ನೂರಾರು ಭಕ್ತರು (Siddaroodha Devotees) ಸೇರಿಕೊಂಡಿದ್ದಾರೆ. ಹಾಗಿದ್ರೆ ಇವರ ಪಯಣ ಎಲ್ಲಿಗೆ? ಇವರ ಉದ್ದೇಶವಾದ್ರೂ ಏನು ಅಂತೀರಾ? ಹೇಳ್ತೀವಿ ನೋಡಿ.
ಯೆಸ್, ಇದು ವಿಜಯಪುರ ಜಿಲ್ಲೆಯ ಪ್ರಮುಖ ಹೆದ್ದಾರಿಯಲ್ಲಿ ಕಂಡುಬಂದ ದೃಶ್ಯ. ಹೀಗೆ ಭಜನೆ, ಸಂಕೀರ್ತನೆ, ಯುವಕರ ಕುಣಿತದೊಂದಿಗೆ ಇವರೆಲ್ಲ ಹೊರಟಿರುವುದು ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿಗಳ ಜಾತ್ರಾ ಮಹೋತ್ಸವಕ್ಕೆ.
30 ವರ್ಷಗಳ ಹಿಂದೆ ಮೂವರಿಂದ ಆರಂಭ!
ಅಂದಹಾಗೆ ಮಹಿಳೆಯರು, ಪುರುಷರು, ಹಿರಿಯರು ಇವರೆಲ್ಲ ಹೊರಟು ಬಂದಿದ್ದು ಕಲಬುರಗಿಯ ಆಳಂದ ಪಟ್ಟಣದಿಂದ. ಹಾಗಂತ ಹುಬ್ಬಳ್ಳಿಗೆ ಸಾರಿಗೆ ವ್ಯವಸ್ಥೆ ಇಲ್ಲ ಅಂತೇನಿಲ್ಲ. ಆದ್ರೆ ದೇವರ ಸಂಪ್ರೀತಿಗಾಗಿ ಇವರು ತಾವೇ ಸ್ವಇಚ್ಛೆಯಿಂದ ಹರಕೆ ಹೊತ್ತು ನಡೆಯುತ್ತಾರೆ. ಮೂವತ್ತು ವರುಷಗಳ ಹಿಂದೆ ಮೂವರಿಂದ ಆರಂಭವಾದ ಈ ಪಾದಯಾತ್ರೆಗೆ ಈಗೀಗ ನೂರರಿಂದ ಇನ್ನೂರು ಮಂದಿ ಸೇರಿಕೊಳ್ಳುತ್ತಾರೆ.
ಇದನ್ನೂ ಓದಿ: Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!
ಇವರೆಲ್ಲ ಸುಮಾರು 400 ಕಿಲೋ ಮೀಟರ್ನ ಈ ಪಯಣವನ್ನ ಪ್ರತಿದಿನ 35 ಕಿಲೋ ಮೀಟರ್ನಂತೆ ಕ್ರಮಿಸಿ ತಮ್ಮ ಗುರಿಯತ್ತ ಸಾಗುತ್ತಾರೆ. ದಾರಿಯುದ್ದಕ್ಕೂ ಭಜನೆ, ಕೀರ್ತನೆ, ಸಂಗೀತ, ಜಯಘೋಷಗಳೊಂದಿಗೆ ಸಾಗುತ್ತಾರೆ. ದಿನಕ್ಕೆ ಎರಡು ಬಾರಿ ಯಾತ್ರೆಯಲ್ಲಿ ಸಿದ್ಧಾರೂಢರ ಭಾವಚಿತ್ರಕ್ಕೆ ವಿಶೇಷ ಪೂಜೆ ಜರುಗುತ್ತದೆ. ಇವರಿಗೆ ರಸ್ತೆಯುದ್ದಕ್ಕೂ ಇತರ ಸಿದ್ಧಾರೂಢರ ಸ್ವಾಮೀಜಿಗಳ ಭಕ್ತರು ಆಯಾಯ ಪ್ರದೇಶಗಳಲ್ಲಿ ನೀರು, ಮಜ್ಜಿಗೆ, ಪಾನಕ, ಊಟದ ವ್ಯವಸ್ಥೆ ಕಲ್ಪಿಸುತ್ತಾರೆ.
ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!
ಹೀಗೆ ನಡೆದು ಸಾಗುವ ಭಕ್ತರೆಲ್ಲರೂ ಬಹುತೇಕ ಕೂಲಿ ಕಾರ್ಮಿಕರೇ ಆಗಿದ್ದಾರೆ. ಆದರೆ ಒಂದು ತಿಂಗಳ ಕಾಲ ನಡೆದು ಸಿದ್ದಾರೂಢ ಸ್ವಾಮೀಜಿಗಳ ಜಾತ್ರೆಗೆ ಸಾಗುತ್ತಾರೆ. ಹೀಗೆ ದೇವರ ಮುಂದೆ ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುವುದರ ಜೊತೆಗೆ ಹರಕೆಯನ್ನ ಈಡೇರಿಸಿಕೊಳ್ಳುತ್ತಾರೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ