ಬಾಗಲಕೋಟೆ: ದೇವಾಲಯಗಳ ತೊಟ್ಟಿಲು ಎಂದೇ ಹೆಸರಾದ ಬಾಗಲಕೋಟೆ (Bagalakote News) ಜಿಲ್ಲೆಯ ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬನಶಂಕರಿ ದೇವಸ್ಥಾನ, ಮಹಾಕೂಟ ದೇವಸ್ಥಾನ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳು. ಇವುಗಳ ವಾಸ್ತುಶಿಲ್ಪ ವೈಭವದ ನಡುವೆ ಶಿರೂರು ಪಟ್ಟಣದ ಸಿದ್ಧೇಶ್ವರ ದೇವಸ್ಥಾನವು ಒಂದು. ಅಂದಿನ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕೆತ್ತನೆಯಾದ ಈ ದೇವಸ್ಥಾನ (Temple) ಶಿಲ್ಪಕಲಾ ಸೌಂದರ್ಯವನ್ನ ಹೊಂದಿದ್ದು, ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿದೆ. ಇದೇ ತಿಂಗಳ ಡಿಸೆಂಬರ್ 8 ರಂದು 5 ದಿನಗಳ ಕಾಲ ಸಿದ್ಧೇಶ್ವರ ಜಾತ್ರೆ ವಿಜೃಂಭನೆಯಿಂದ ನಡೆಯಲಿದೆ.
ಡಿಸೆಂಬರ್ 6 ರಂದು ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ 52ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಂಚಪ್ಪನ ಪೇಟೆ ಯುವಕರಿಂದ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗವನ್ನ ಏರ್ಪಡಿಸಲಾಗಿದೆ.
ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ
ಡಿಸೆಂಬರ್ 7 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ 2009 ಮತ್ತು 2010ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಶಾಲಾ ಆವರಣದಲ್ಲಿ ನಡೆಯಲಿದೆ.
ಇದನ್ನೂ ಓದಿ: Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ
ಡಿಸೆಂಬರ್ 8 ಗುರುವಾರ ಸಂಜೆ 5.00 ಗಂಟೆಗೆ ಶ್ರೀ ಸಿದ್ಧೇಶ್ವರ ರಥೋತ್ಸವ, ಡಿಸೆಂಬರ್ 9 ರಂದು ಶುಕ್ರವಾರ ಬೆಳಗ್ಗೆ ಬೆಳ್ಳಿಮೂರ್ತಿಯ ಉತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮತ್ತು ಸಂಜೆ 7.00 ಗಂಟೆಗೆ ‘ಮಹಾತಪಸ್ವಿ’ ಹೇಮರಡ್ಡಿ ಮಲ್ಲಮ್ಮ ಪುರಾಣ ಪ್ರವಚನದ ಮಹಾಮಂಗಲ ಕಾರ್ಯಕ್ರಮ ಡಿಸೆಂಬರ್ 10 ರಂದು ಶನಿವಾರ ಬೆಳಗ್ಗೆ 7-15ಕ್ಕೆ ಲಿಂ.ಮ.ನಿ.ಪ್ರ. ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ರಾತ್ರಿ 8.00 ಘಂಟೆಗೆ ಪುಣ್ಯಸ್ಮರಣೋತ್ಸವ ಜರುಗಲಿದೆ.
ಇದನ್ನು ಓದಿ: Vijayapura: ಬಿಂಗಿಗಳಿಗೆ ಊಟ ಬಡಿಸಲು ಫುಲ್ ರಶ್! ಯಾರು ಈ ವಿಶೇಷ ವ್ರತಧಾರಿಗಳು?
ಜಾತ್ರೆಯ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆಗಳನ್ನ ಆಯೋಜಿಸಲಾಗಿದೆ. ಸಂಕ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಪುಟ್ಟ ಬಂಡಿ ಓಟದ ಸ್ಪರ್ಧೆ, ಜಂಗಿ ಕುಸ್ತಿ ಸ್ಪರ್ಧೆಗಳು ಸೇರಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ ಎಂದು ಮೂಲಗಳು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ