Vijayapura: ಚಿಕ್ಕ ಮಕ್ಕಳ ದೊಡ್ಡ ಪ್ರತಿಭೆ! ಹಲವು ವಿಸ್ಮಯ ಬಿಚ್ಚಿಟ್ಟ ವಿದ್ಯಾರ್ಥಿಗಳು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಸ್ತು ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜೊತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಯ್ತು.

  • News18 Kannada
  • 3-MIN READ
  • Last Updated :
  • Bijapur, India
  • Share this:

    ವಿಜ್ಞಾನ ಸಂಬಂಧಿತ ಹತ್ತಾರು ಮಾದರಿಗಳು. ಅದೆಲ್ಲಕ್ಕೂ ಅದರದ್ದೇ ಆದ ವಿವರಣೆ ನೀಡ್ತಿರೋ ಪುಟ್ಟ ಪುಟ್ಟ ಮಕ್ಕಳು. ಕುತೂಹಲದಿಂದ ಇದೆಲ್ಲವನ್ನೂ ಗಮನಿಸುತ್ತಿರೋ ಗಣ್ಯರು, ಗ್ರಾಮಸ್ಥರು. ಸಮಾಜದಲ್ಲಿನ ಮೌಢ್ಯತೆ ದೂರ ಮಾಡೋ ಸಲುವಾಗಿ ನಡೆದ ಈ ವಿಜ್ಞಾನ ಪ್ರದರ್ಶನ ನೋಡೋಣ ಬನ್ನಿ. ವಿದ್ಯುತ್ಕಾಂತೀಯ ಕ್ರೇನ್, ರಕ್ತ ಶುದ್ಧೀಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ನೀರಿನ ಮಟ್ಟ ಸೂಚಕ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ, ದೂರದರ್ಶಕ ಹೀಗೆ ನಾನಾ ಬಗೆಯ ಮಾದರಿಗಳನ್ನ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಹತ್ತಾರು ಮಾಡೆಲ್​ಗಳ ಮೂಲಕ ವಿಜ್ಞಾನ ಬೋಧನೆ (Science Teaching) ನೀಡಲು ವೇದಿಕೆಯಾಗಿದ್ದು ವಿಜಯಪುರದ (Vijayapura News) ತಿಕೋಟಾದ ಸ್ವಾಮಿ ವಿವೇಕಾನಂದ ಮಾಡೆಲ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ.


    ಮೌಢ್ಯವನ್ನು ದೂರ ಮಾಡಲು, ವಿಜ್ಞಾನದ ಉಪಯೋಗ ಅದೆಷ್ಟು ಮುಖ್ಯ ಅನ್ನೋದನ್ನ ಸಾರ್ವಜನಿಕರಿಗೆ ತಿಳಿಸೋ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಸ್ತು ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜೊತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಯ್ತು.


    ಇದನ್ನೂ ಓದಿ:ಗದಗದಲ್ಲಿ ಸಿಂಹ ಘರ್ಜನೆ! 1,070 ಕಿ ಮೀ ದೂರದಿಂದ ಶಿವ-ಗಂಗಾ ಆಗಮನ!


    ಭೂಮಂಡಲದ ವಿಸ್ಮಯಗಳ ಅನಾವರಣ
    ಹಲವು ಬಗೆಯ ಪ್ರಾತ್ಯಕ್ಷಿಕೆಗಳು ಸಾರ್ವಜನಿಕರಿಗೆ ಭೂಮಂಡಲದ ವಿಸ್ಮಯಗಳನ್ನ ಕಣ್ಣಿಗೆ ಕಟ್ಟುವಂತೆ ತಿಳಿಸಿಕೊಟ್ಟವು. ವಿಜ್ಞಾನ ಮಾದರಿಗಳ ಜೊತೆಗೆ ಅವುಗಳ ಮಾಹಿತಿಗಳನ್ನು ಅದನ್ನ ತಯಾರಿಸಿದ ಪುಟ್ಟ ಮಕ್ಕಳೇ ನೀಡಿದರು. ವಿಜ್ಞಾನದಿಂದ ಅಜ್ಞಾನ ಹೋಗಲಾಡಿಸಬಹುದು ಅನ್ನೋದನ್ನ ತಿಳಿ ಹೇಳಿದರು. ಸಾರ್ವಜನಿಕರು ಕೂಡಾ ಮಾಹಿತಿಯನ್ನು ಕುತೂಹಲದಿಂದ ಕೇಳಿ ಪಡೆದುಕೊಂಡರು.


    ಇದನ್ನೂ ಓದಿ:ಜಗತ್ತಿನಲ್ಲಿ ಶಾಂತಿ ನೆಲೆಸೋಕೆ 8ನೇ ಕ್ಲಾಸ್ ಬಾಲಕಿಯ ಯಕ್ಷ ಪ್ರಯತ್ನ!


    ಒಟ್ಟಿನಲ್ಲಿ ಶಾಲೆಯ ಮೂಲಕವೇ ಅಜ್ಞಾನವನ್ನ ತೊಡೆದು ಹಾಕಲು ಮಕ್ಕಳನ್ನ ಮುಂದಿಟ್ಟುಕೊಂಡು ವಿಶಿಷ್ಟ ವೇದಿಕೆ ಕಲ್ಪಿಸಿದ್ದು ವಿಶೇಷವಾಗಿತ್ತು.

    Published by:ಗುರುಗಣೇಶ ಡಬ್ಗುಳಿ
    First published: