ವಿಜಯಪುರ ಜಿಲ್ಲೆಯ ಬಡ ನೇಕಾರರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಬಡ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯಪುರ ಜಿಲ್ಲೆಯ (Vijayapura) ಕೈಮಗ್ಗ ಗಣತಿ/ನೇಕಾರ ಸಮ್ಮಾನದಡಿ ಮತ್ತು ವಿದ್ಯುತ್ ಮಗ್ಗ ನೇಕಾರರ ಗಣತಿಯಲ್ಲಿ ಗುರುತಿಸಿರುವ ಎಲ್ಲಾ ನೇಕಾರರು ತಮ್ಮ ಮಕ್ಕಳ ವಿದ್ಯಾರ್ಥಿ ವೇತನ (Scholarships For Students) ಹಾಗೂ ಸರ್ಕಾರದ ಇತರೆ ಸೌಲಭ್ಯಗಳ ಕುರಿತು ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ (Karnataka One) ಮೂಲಕ ಸೇವಾಸಿಂಧು (Seva Sindhu) ತಂತ್ರಾಂಶದಲ್ಲಿ ಡಿಸೆಂಬರ್ ತಿಂಗಳಲ್ಲಿ ದಿನಾಂಕ 10 ರೊಳಗೆ ನೋಂದಾಯಿಸಿಕೊಳ್ಳಬೇಕಿದೆ.
ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಜನ ಬಡ ನೇಕಾರ ಕುಟುಂಬಗಳಿದ್ದು, ಅವರ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Emotional Story: 8 ರೂಪಾಯಿ 36 ಪೈಸೆಗೆ 205 ಕೆಜಿ ಈರುಳ್ಳಿ ಮಾರಾಟ ಮಾಡಿದ ಗದಗದ ರೈತ!
ಅರ್ಜಿ ಸಲ್ಲಿಸಲು ಇದೆಯೇ ವಯೋಮಿತಿ?
ಅರ್ಜಿದಾರರಿಗೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಅರ್ಜಿ ಅಲ್ಲಿಸುವವರು ಸೂಕ್ತ ದಾಖಲೆಗಳ ಮೂಲಕ ಅರ್ಜಿಯನ್ನ ಸಲ್ಲಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: Hitler Faced Bug: ಗದಗದಲ್ಲಿ ಹಿಟ್ಲರ್ ಮುಖದ ಅಪರೂಪದ ಕೀಟ ಪತ್ತೆ!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಶಿಕಾರಖಾನಾ, ಸ್ಟೇಷನ್ ಬ್ಯಾಕ್ ರೋಡ್, ವಿಜಯಪುರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08352-251268 ಅಥವಾ 9902561441
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ