ವಿಜಯಪುರ: ಚಡಚಣ ಪಟ್ಟಣದ ಆರಾಧ್ಯದೈವ ಸಂಗಮೇಶ್ವರ ಜಾತ್ರೆಯು (Sangameshwar Jatra) ಜನವರಿ 21 ರಿಂದ 27 ರವರೆಗೆ ಅದ್ದೂರಿಯಾಗಿ ಏಳು ದಿನಗಳ ಕಾಲ ವಿಜೃಂಭನೆಯಿಂದ ಸಂಗಮೇಶ್ವರ ಜಾತ್ರೆ ನಡೆಯಲಿದೆ. ಈ ವೈಭವೋಪೇತ ಜಾತ್ರೆಯ ಕುರಿತು ಸಮಗ್ರ ವಿವರ ಇಲ್ಲಿದೆ ನೋಡಿ.
ಜನವರಿ 21 ರಂದು ನಸುಕಿನ ಜಾವ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ನಂದೀಶನಿಗೆ ಎಣ್ಣೆ ಮಜಲು ಪೂಜೆ, 7 ಗಂಟೆಗೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ ನಂದಿ ಧ್ವಜವು ವಿವಿಧ ವಾದ್ಯಮೇಳಗಳೊಂದಿಗೆ ದೇವಸ್ಥಾನಕ್ಕೆ ತಲುಪಲಿದೆ. ನಂತರ ಬೆಳಗ್ಗೆ 7 ಗಂಟೆಗೆ ದೇವರ ನುಡಿ ಕಾರ್ಯಕ್ರಮ ನಡೆಯಲಿದೆ.
ಜಲಸಂಪನ್ಮೂಲ ಸಚಿವರಿಂದ ಚಾಲನೆ
ಜನವರಿ 22 ರಂದು ಮಧ್ಯಾಹ್ನ 3 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ನಂದಿ ಧ್ವಜವು ಹಾಗೂ ಸದರ ಬಾಸಿಂಗ ಉತ್ಸವಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ.
ಅತ್ಯಾಕರ್ಷಕ ಸಿಡಿಮದ್ದು ಸುಡುವ ಕಾರ್ಯಕ್ರಮ
ಅಂದು ರಾತ್ರಿ 9 ಗಂಟೆಗೆ ಸಂಗಮೇಶ್ವರ ದೇವಸ್ಥಾನದ ಪಕ್ಕದ ಎತ್ತರದ ಜಾಗದಲ್ಲಿ ಅತ್ಯಾಕರ್ಷಕ ಸಿಡಿಮದ್ದು ಸುಡುವ ಕಾರ್ಯಕ್ರಮ ಕೂಡ ನಡೆಯಲಿದೆ.
ಇದನ್ನೂ ಓದಿ: Vijayapura: ಹೆಲಿಕಾಪ್ಟರ್ನಲ್ಲಿ ವಿಜಯಪುರ ಸುತ್ತಿ! ಆಕಾಶದಿಂದ ಹೀಗೆ ಕಾಣುತ್ತೆ ನೋಡಿ ಗೋಲ್ ಗುಂಬಜ್
ರಾಷ್ಟ್ರಮಟ್ಟದ ಕುಸ್ತಿಪಟುಗಳಿಂದ ಜಂಗಿ ನಿಕಾಲಿ ಕುಸ್ತಿ
ಜನವರಿ 23 ರಂದು ಮಧ್ಯಾಹ್ನ 2 ಗಂಟೆಗೆ ರಾಷ್ಟ್ರಮಟ್ಟದ ಕುಸ್ತಿಪಟುಗಳಿಂದ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿದೆ. ಈ ಕುಸ್ತಿ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟದ ಹೆಸರಾಂತ ಕುಸ್ತಿಪಟುಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್ಶೀಟ್ ರಕ್ಷಣೆ
27ರ ಶುಕ್ರವಾರ ಸಂಜೆ 7 ಗಂಟೆಗೆ ಸಂಗಮೇಶ್ವರ ದೇವಸ್ಥಾನದಿಂದ ನಂದಿ ಧ್ವಜವು ಮರಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಮರಳಲಿದೆ. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ. ಅಲ್ಲದೆ, ನಾಟಕ, ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ