ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತರುವ ಬೆನ್ನಲ್ಲೇ ವಿಜಯಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆಯುತ್ತಿದೆ. ಚೀನಾದಲ್ಲಿ (Covid-19) ಹುಟ್ಟಿಕೊಂಡ ಈ ಮಹಾಮಾರಿ ಬಗ್ಗೆ ಕಾಲಜ್ಞಾನಿಯೊಬ್ಬರು 300 ವರ್ಷಗಳ ಹಿಂದೆಯೇ ಬರೆದು ಇರಿಸಿದ್ದರು. ವಿಜಯಪುರದಲ್ಲಿ (Vijayapura News) ವಾಸವಿದ್ದ ಕಾಲಜ್ಞಾನಿ ಸದಾಶಿವ ಅಜ್ಜನ (Sadashiva Ajja) ಪವಾಡ ತಿಳಿದಿರುವ ಜನರು ಇಲ್ಲಿಗೆ ಬಂದು ನೈವೇದ್ಯ ಅರ್ಪಿಸಿ ದರ್ಶನ ಪಡೆಯುತ್ತಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಎಂಬ ಗ್ರಾಮದಲ್ಲಿ ಈ ಮಠ ಇದೆ. ಹಾಗಾಗಿ ಇದನ್ನು ಬಬಲಾದಿ ಮಠ ಎಂದು ಕರೆಯಲಾಗುತ್ತದೆ. ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವಮೂರ್ತಿ ಮಹಾಪುರುಷರು ಇಲ್ಲಿಯೇ ಲಿಂಗೈಕ್ಯರಾದ ಹಿನ್ನೆಲೆ ಮಠ ನಿರ್ಮಾಣ ಮಾಡಲಾಗಿದೆ. ಪ್ರತಿ ಶಿವರಾತ್ರಿ ದಿನ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ನಡೆಯುತ್ತದೆ.
ಇದನ್ನೂ ಓದಿ: Charaga Habba: ಉತ್ತರ ಕರ್ನಾಟಕದ ಈ ಹಬ್ಬಕ್ಕಿದೆಯಂತೆ ಮಹಾಭಾರತದ ಲಿಂಕ್!
ಮದ್ಯ ನೈವೇದ್ಯ!
ಕೊರೊನಾ ನಾಲ್ಕನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆ ಮಠಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಏರಿಕೆ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಠದ ಸಿಬ್ಬಂದಿ ಹೇಳುತ್ತಿದ್ದಾರೆ. ಕೈಯಲ್ಲಿ ಮದ್ಯ ಹಿಡಿದು ಸರದಿ ಸಾಲಿನಲ್ಲಿ ನಿಂತು ಅಜ್ಜನ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Vijayapura: ಮನೆಯ ಹಿರಿಯರಿಗೆ ಜೀವ ತರಿಸುವ ಬೆಚ್ಚಗಿನ ಕೌದಿ! ಚಳಿಗಾಲದಲ್ಲಿ ಇದು ಬಾರೀ ಬೆಸ್ಟ್
ಬಾಯಿಗೆ ಜಾಳಿಗೆ ಬರುತ್ತೆ ಅನ್ನೋ ಭವಿಷ್ಯ!
ಸದಾಶಿವ ಮಠದ ಅರ್ಚಕರು ಪ್ರತಿವರ್ಷ ಭವಿಷ್ಯ ನುಡಿಯುತ್ತಾರೆ. ಮುನ್ನೂರು ವರ್ಷಗಳ ಹಿಂದೆಯೇ ಬಾಯಿಗೆ ಜಾಳಿಗೆ ಬರುತ್ತೆ ಎಂದು ತಾಮ್ರದ ಹಾಳೆಯಲ್ಲಿ ಬರೆಯಲಾಗಿತ್ತು. ಇದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ