Real Bahubali Vijayapura: ಈ ಬಾಲಕ ರಿಯಲ್ ಬಾಹುಬಲಿ! ತಾಕತ್ತಿಗೆ ಬೆಚ್ಚಿಬೀಳುವಿರಿ!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬಸವೇಶ್ವರ ಜಾತ್ರೆಯು ಸಂಭ್ರಮದಿಂದ ನಡೀತಿದೆ. ಜಾತ್ರಾ ಮಹೋತ್ಸವ ನಿಮಿತ್ತ ತಾಲೀಮು ಪ್ರದರ್ಶನ ಗಮನಸೆಳೆಯುತ್ತಿದ್ದು, ರಿಯಲ್ ಬಾಹುಬಲಿಗಳೇ ಕಣ್ಣ ಮುಂದೆ ಕಾಣುವಂತಾಗಿದೆ.

ಅಬ್ಬಬ್ಬಾ ಬಾಲಕನೇ!

"ಅಬ್ಬಬ್ಬಾ ಬಾಲಕನೇ!"

 • Share this:
  ವಿಜಯಪುರ: ನೀವೆಲ್ಲ ಬಾಹುಬಲಿ ಸಿನಿಮಾ ನೋಡಿದ್ದೀರಿ. ಆದ್ರೆ ನಿಜ ಜೀವನದ ಬಾಹುಬಲಿ ನೋಡಿದ್ದೀರಾ? ನೋಡಿಲ್ಲ ಅಂದ್ರೆ ಒಮ್ಮೆ ಈ ಸ್ಟೋರಿ ನೋಡಿ. ವಿಜಯಪುರ ಜಿಲ್ಲೆಯ (Vijayapura) ಬಸವನ ಬಾಗೇವಾಡಿ ಪಟ್ಟಣದಲ್ಲಿ (Basavana Bagewadi) ಬಸವೇಶ್ವರ ಜಾತ್ರೆ  (Basava Festival) ವಿಜೃಂಭಣೆಯಿಂದ ನಡೀತಿದೆ.  ಬಸವ ಜಾತ್ರೆಯ ಅಂಗವಾಗಿ ಭಾರ ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದ್ಲೂ ಭಾರ ಎತ್ತುವ ಸ್ಪರ್ಧಿಗಳು ಭಾಗಿಯಾಗಿದ್ರು.

  ರಿಯಲ್ ಬಾಹುಬಲಿ!
  ಬಸವನ ಬಾಗೇವಾಡಿ ತಾಲೂಕಿನ ಬಾಲಕನೋರ್ವ 75 ಕೆಜಿ ಭಾರದ ಚೀಲ ಹೊತ್ತು ಸಾಹಸವನ್ನೇ ಮಾಡಿದ್ದ. ಕಟ್ಟಿಗೆಯ ಮೇಲೆ ನಿಂತು ಮಾಡಿದ ತಾಲೀಮು ಪ್ರದರ್ಶನಕ್ಕೆ ಜನ ಬೆಕ್ಕಸ ಬೆರಗಾದ್ರು.

  ಇದನ್ನೂ ಓದಿ: Helava Community: ನಿಮ್ಮ ಅಜ್ಜ, ಮುತ್ತಜ್ಜ ಅವರಜ್ಜನ ಕಥೇನೂ ಹೇಳ್ತಾರೆ ಈ ಹೆಳವರು! ಯಾರಿವರು?

  ಹಿರಿಯರ ವಿಭಾಗದಲ್ಲಿ 285 ಕಿಲೋ ಮರಳಿನ ಮೂಟೆ ಎತ್ತುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಸಿದಪ್ಪ ಶಕ್ತಿ ಪ್ರದರ್ಶನ ಮಾಡಿದರು. ಜಾತ್ರೆ ನಿಮಿತ್ತ ನಡೆದ ಸ್ಪರ್ಧೆ ನೋಡಲು ಸಾವಿರಾರು ಸಂಖ್ಯೆಯ ಜನ ಜಮಾಯಿಸಿದ್ರು.

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ಒಟ್ಟಿನಲ್ಲಿ ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದ್ಲೂ ಭಾರ ಎತ್ತುವ ಸ್ಪರ್ಧಿಗಳು ಭಾಗಿಯಾಗಿ ಭರ್ಜರಿ ಸಂಭ್ರಮ ಅನುಭವಿಸಿದರು.
  Published by:guruganesh bhat
  First published: