ವಿಜಯಪುರ: ಟಗರು.. ಟಗರು.. ಟಗರು! ಹೀಗೆ ಡಿಚ್ಚಿ ಹೊಡೆಯುತ್ತಾ ಜಿದ್ದಿಗೆ ಇಳಿಯಿತು ನೋಡಿ ಟಗರು. ನೋಡುಗರ ಕಣ್ಣಿಗೆ ಹಬ್ಬವಾದ್ರೆ ಮೇಷಗಳ ಗುಂಪಿಗೆ ಮೈ ನಡುಗಿಸೋ ಯುದ್ಧ! (Ram Fighting ಗುಮ್ಮುತ್ತಾ ನುಗ್ಗಿ ಬಂದು ಮಾಡಿದ ಫೈಟ್ ಅಂತೂ ಮೈ ರೋಮಾಂಚನಗೊಳಿಸಿತ್ತು. ನೋಡುಗರನ್ನ ತುದಿಗಾಲಲ್ಲಿ ನಿಲ್ಲಿಸಿತ್ತು.
ಟಗರು ಕಾಳಗ
ಹೌದು, ಈ ರೀತಿಯ ಜಿದ್ದಾಜಿದ್ದಿಯ ಟಗರು ಕಾಳಗಕ್ಕೆ ವೇದಿಕೆಯಾಯ್ತು ನೋಡಿ ವಿಜಯಪುರ ಜಿಲ್ಲೆಯ ಬೇನಾಳ ಆರ್.ಎಸ್. ಗ್ರಾಮದ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಟಗರಿನ ಕಾಳಗ. ಸುತ್ತಲೂ ನೆರೆದಿದ್ದ ಸಾವಿರಾರು ಪ್ರೇಕ್ಷಕರ ನಡುವೆ ಮೈದಾನಕ್ಕಿಳಿದ ಟಗರುಗಳು ಒಂದಕ್ಕೊಂಡು ಡಿಚ್ಚಿ ಹೊಡೆಯುತ್ತಾ ಮೈ ನವಿರೇಳಿಸುವಂತೆ ಸೆಣಸಾಟ ನಡೆಸಿದವು. ನೆರೆದಿದ್ದ ಜನರೆಲ್ಲ ಖುಷಿಪಡುತ್ತಾ, ಶಿಳ್ಳೆ ಹೊಡೆಯುತ್ತಾ ಟಗರು ಕಾಳಗವನ್ನ ಎಂಜಾಯ್ ಮಾಡಿದ್ರು.
ನೆರೆಯ ರಾಜ್ಯದಿಂದಲೂ ಟಗರು
ಒಂದೊಂದು ಟಗರು ಕೂಡಾ ಬಲಿಷ್ಠ, ಬಲಾಢ್ಯವಾಗಿದ್ದವು. ಅಂಗಣಕ್ಕೆ ಇಳಿಯುತ್ತಲೇ ಅಟ್ಟಹಾಸ ಮೆರೆದವು. ತನ್ನ ಮಾಲೀಕ ತನ್ನ ಮೇಲಿಟ್ಟ ನಿರೀಕ್ಷೆಯನ್ನ ಹುಸಿ ಮಾಡ್ದೇ ಗುಮ್ಮಿದವು. ಹೀಗೆ ಎರಡು ದಿನಗಳ ಕಾಲ ನಡೆದ ಟಗರು ಕಾಳಗದಲ್ಲಿ ಸುಮಾರು 300ಕ್ಕೂ ಅಧಿಕ ಟಗರುಗಳು ಪಾಲ್ಗೊಂಡಿದ್ದವು. ರಾಜ್ಯದ ನಾನಾ ಭಾಗಗಳಿಂದ ಅಲ್ದೇ ನೆರೆಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ರಾಜ್ಯದ ಟಗರುಗಳು ಕೂಡಾ ವಿಜಯಪುರದ ಈ ಮೈದಾನದಲ್ಲಿ ಸೆಣಸಾಟ ನಡೆಸಿದವು.
ಗೆದ್ದ ಟಗರಿಗೆ ಬುಲೆಟ್!
ಮುಕ್ತ ಟಗರಿನ ಕಾಳಗಕ್ಕೆ ಭಾರೀ ಪೈಪೋಟಿ ಕಂಡುಬಂತು. ಅಂತಿಮವಾಗಿ ದಾವಣಗೆರೆಯ ಅಣ್ಣ ತಮ್ಮ ಪುಣ್ಯಕೋಟಿ ಮೊದಲ ಬಹುಮಾನ 3 ಲಕ್ಷ ರೂ ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಗೆದ್ದುಕೊಂಡಿತು.
ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!
ಇನ್ನುಳಿದಂತೆ ಎರಡು ಬೈಕ್ಗಳನ್ನು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಟಗರುಗಳು ಪಡೆದುಕೊಂಡವು. 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲಿನ ವಿಭಾಗದ ಟಗರಿನ ಕಾಳಗವೂ ಪ್ರತ್ಯೇಕವಾಗಿ ನಡೆಯಿತು. ವಿಜೇತರಿಗೆ ನಗದು ರೂಪದ ಬಹುಮಾನ ನೀಡಲಾಯಿತು.
ಇದನ್ನೂ ಓದಿ: Vijayapura: ದೇವರ ಸನ್ನಿಧಿಯಲ್ಲಿ ಚಪ್ಪಲಿ ಸೇವೆ! ಒಂದು ಪೈಸೆಯನ್ನೂ ಪಡೆಯದ ಗೆಳೆಯರ ಬಳಗ
ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರ ಮಟ್ಟದ ಟಗರು ಕಾಳಗ ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಟಗರು ಮಾಲಕರ ಸಂತಸವನ್ನೂ ಇಮ್ಮಡಿಗೊಳಿಸಿತ್ತು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ