• Home
  • »
  • News
  • »
  • vijayapura
  • »
  • Vijayapura Viral Video: ರಣರೋಚಕ ಟಗರು ಕಾಳಗ! ನೋಡ್ತಿದ್ರೆ ಮೈ ಝುಮ್ಮೆನ್ನುತ್ತೆ!

Vijayapura Viral Video: ರಣರೋಚಕ ಟಗರು ಕಾಳಗ! ನೋಡ್ತಿದ್ರೆ ಮೈ ಝುಮ್ಮೆನ್ನುತ್ತೆ!

X
ಟಗರಿನ ಕಾಳಗ ಇಲ್ನೋಡಿ

"ಟಗರಿನ ಕಾಳಗ ಇಲ್ನೋಡಿ"

ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಟಗರುಗಳು ಸ್ಪರ್ಧಿಸಿ ರೋಚಕತೆ ಹೆಚ್ಚಿಸಿದ್ದವು.

  • Share this:

    ವಿಜಯಪುರ: ಅಬ್ಬಬ್ಬಾ! ಎಂಥಾ ಕಾದಾಟವದು! ಟಗರು ಟಗರುಗಳು ಹೀಗೆ ಗುದ್ದಾಡ್ತಿದ್ರೆ ನೋಡೋವ್ರ ಮೈ ನವಿರೇಳುತ್ತೆ! ಜೀವ ಝಲ್ ಅನ್ನುತ್ತೆ! ಮುಖಾಮುಖಿ ಡಿಕ್ಕಿ ಹೊಡೆಯುತ್ತಿರೋ ಟಗರುಗಳು, ಟಗರುಗಳನ್ನು ನಿಯಂತ್ರಿಸುತ್ತಿರೋ ಮಾಲೀಕರು, ಸಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿರೋ ಜನರು. ಈ ದೃಶ್ಯ ಕಂಡುಬಂದಿದ್ದು ವಿಜಯಪುರದ ನಿಡಗುಂದಿಯ ಮಣಗೂರ ಪುನರ್ವಸತಿ ಕೇಂದ್ರದಲ್ಲಿ. ರೈತರಿಗೆ ಬಿಡುವಿನ ಸಮಯದಲ್ಲಿ ಮನರಂಜನೆಯ ನೀಡೋ ಉದ್ದೇಶಕ್ಕೆ ಟಗರು ಕಾಳಗ ಆಯೋಜಿಸಲಾಗಿತ್ತು.


    ಇದನ್ನೂ ಓದಿ: Mysuru Dasara: ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಇಲ್ಲಿದೆ ನೋಡಿ!


    ವಿಜಯಪುರದ ಕೆಲ ರೈತರು ಸ್ಪರ್ಧೆಗಾಗಿಯೇ ಟಗರುಗಳನ್ನು ಖರೀದಿಸ್ತಾರೆ. ಇನ್ನು ಕೆಲವರು ಸಾಕಿ ಮಾರಾಟ ಮಾಡಲು ಟಗರುಗಳನ್ನು ಖರೀದಿಸ್ತಾರೆ. ಈ ಎಲ್ಲ ಟಗರುಗಳು ಒಂದೇ ಆವರಣದಲ್ಲಿ ಮೇಳೈಸಿ ಸ್ಪರ್ಧಿಸಿದ್ವು. ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಟಗರುಗಳು ಸ್ಪರ್ಧಿಸಿ ರೋಚಕತೆ ಹೆಚ್ಚಿಸಿದ್ದವು.


    ಇದನ್ನೂ ಓದಿ: Mysuru Dasara: ಆಕಾಶದಿಂದ ನೋಡಿ ಮೈಸೂರು ದಸರಾ!


    ಎತ್ತಿನ ಗಾಡಿ ಓಟದ ಸ್ಪರ್ಧೆ, ಹಾಲು ಹಲ್ಲಿನ ಟಗರಿನ ಕಾಳಗ, ಎರಡು ಹಲ್ಲಿನ ಟಗರಿನ ಕಾಳಗ, ನಾಲ್ಕು ಹಲ್ಲಿನ ಟಗರಿನ ಕಾಳಗ, ಆರು ಹಲ್ಲಿನ ಟಗರಿನ ಕಾಳಗ, ಎಂಟು ಹಲ್ಲಿನ ಟಗರಿನ ಕಾಳಗದ ಸ್ಪರ್ಧೆ ರೋಚಕ ಅನಿಸುವಂತಿತ್ತು. ನಿಡಗುಂದಿಯ ಈ ಟಗರಿನ ಕಾಳಗ ಮತ್ತೊಂದು ಟಗರಿನ ಕಾಳಗ ಯಾವಾಗ ಬರುತ್ತಪ್ಪಾಅನ್ನೋ ನಿರೀಕ್ಷೇನ ಹುಟ್ಟುಹಾಕ್ತು.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: