• Home
  • »
  • News
  • »
  • vijayapura
  • »
  • Vijayapura: ಬಾಲಕನ ನೆರವಿಗೆ ನಿಂತ ಅಪ್ಪು ಫ್ಯಾನ್ಸ್; ಇವರು ಭೀಮಾತೀರದ ಹೃದಯವಂತರು!

Vijayapura: ಬಾಲಕನ ನೆರವಿಗೆ ನಿಂತ ಅಪ್ಪು ಫ್ಯಾನ್ಸ್; ಇವರು ಭೀಮಾತೀರದ ಹೃದಯವಂತರು!

ಅಪ್ಪು ಅಭಿಮಾನಿಗಳಿಂದ ನೆರವು ಪಡೆದ ಬಾಲಕ

"ಅಪ್ಪು ಅಭಿಮಾನಿಗಳಿಂದ ನೆರವು ಪಡೆದ ಬಾಲಕ"

ಭೀಮಾತೀರದಲ್ಲಿ ಗುಂಡಿನ ಮೊರೆತ ಸಾಮಾನ್ಯ. ಹಾಗಂತ ಇಲ್ಲಿ ಹೃದಯವಂತರೇ ಇಲ್ಲ ಅಂತಲ್ಲ. ಇಲ್ಲಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಾಲಕನ ಅನಾರೋಗ್ಯಕ್ಕೆ ನೆರವು ಆಗುವ ಮೂಲಕ ಮಾನವೀಯತೆ ಸದ್ದು ಮಾಡುವಂತೆ ಮಾಡಿದ್ದಾರೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಭೀಮಾತೀರ (Bheemateera) ಅಂದ್ರೆ ಮೊದ್ಲು ನೆನಪಾಗೋದೇ ಅಲ್ಲಿನ ಕುಖ್ಯಾತ ಹಂತಕರು. ಆದ್ರೆ ಇದೇ ಭೀಮಾತೀರದಲ್ಲಿ ಈಗ ಒಂದೊಳ್ಳೆ ಕೆಲಸ ನಡೀತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Power Star Puneeth Rajkumar) ಅಭಿಮಾನಿಗಳು (Fans) ಸೇರಿ ನೆಚ್ಚಿನ ನಟನ ಹೆಸರು ಉಳಿಯುವಂತ ಅದ್ಭುತ ಕೆಲಸವೊಂದನ್ನು ಮಾಡಿದ್ದಾರೆ. ಇದನ್ನ ನೋಡಿದ್ರೆ ನೀವೂ ಇವ್ರಿಗೆ ಭೇಷ್ ಅಂತೀರಾ..


    ಕಿಡ್ನಿ ವೈಫಲ್ಯಗೊಂಡ ಬಾಲಕ


    ದಯಾನಂದ ಮತ್ತು ವಾಲಿ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನಿವಾಸಿಗಳು. ಇವರ ಮಗ ಈರಣ್ಣ ವಾಲಿ ಹುಟ್ಟುವಾಗ ದೇಹದಲ್ಲಿ ಒಂದೇ ಕಿಡ್ನಿಯನ್ನ ಹೊಂದಿದ್ದನು. ಒಂದೇ ಕಿಡ್ನಿ ಇದ್ದರು ಸಹ ಆರಂಭದಲ್ಲಿ ಈ ಬಾಲಕ ಎಲ್ಲರಂತೆ ಚೆನ್ನಾಗಿದ್ದ, ನಿತ್ಯ ಶಾಲೆಗೂ ಸಹ ಹೋಗಿ ಓಡಾಡಿಕೊಂಡಿದ್ದ. 8 ವರ್ಷದವನಿದ್ದಾಗ ಈ ಬಾಲಕನ ಇನ್ನೊಂದು ಕಿಡ್ನಿ ಸಹ ಸರಿಯಾಗಿ ಬೆಳವಣಿಗೆಯಾಗದೆ ವೈಫಲ್ಯ ಕಂಡಿದೆ. ಈ ಪುಟ್ಟ ಬಾಲಕನನ್ನ ಉಳಿಸಿಕೊಳ್ಳಲು ಈತನ ತಂದೆ ತಾಯಿ ಸಾಕಷ್ಟು ಆಸ್ಪತ್ರೆಗೆ ಅಲೆದರೂ ಪ್ರಯೋಜನವಾಗಿಲ್ಲ.


    ಕಿಡ್ನಿ ಕಸಿ ಮಾಡಲು 25 ಲಕ್ಷ!


    ಸದ್ಯ ಈ ಬಾಲಕ ಬದುಕಿ ಬಾಳಬೇಕಾದ್ರೆ ಕೇವಲ ಒಂದೇ ತಿಂಗಳಲ್ಲಿ ಮೂತ್ರಪಿಂಡ ಕಸಿ (Kidney transplant) ಮಾಡಬೇಕಾಗಿದೆ. ಇಷ್ಟು ಕಷ್ಟಗಳು ಸಾಲದು ಎನ್ನುವಂತೆ ಇತ್ತೀಚೆಗೆ ಅನಾರೋಗ್ಯದಿಂದ ಈತನ ತಂದೆ ಕೂಡಾ ಕೊನೆಯುಸಿರೆಳೆದಿದ್ದಾರೆ. ಈತನಿಗೆ ಕಿಡ್ನಿ ಕಸಿ ಮಾಡ್ಭೇಕು ಅಂದ್ರೆ ಸುಮಾರು 25 ಲಕ್ಷ ರೂಪಾಯಿ ಬೇಕಾಗುತ್ತೆ ಅಂತ ವೈದ್ಯರೇ ಹೇಳಿದ್ದಾರೆ. ಆದ್ರೆ ಕಡುಬಡವರಾದ ಈ ಕುಟುಂಬದ ಬಳಿ ಹಣವೇ ಇಲ್ಲ.


    ನೆರವಿಗೆ ಬಂದ ಅಪ್ಪು ಫ್ಯಾನ್ಸ್


    ಈ ಬಾಲಕನ ಪರಿಸ್ಥಿತಿಯನ್ನ ನೋಡಿ ಪುನೀತ್ ರಾಜ್ ಕುಮಾರ್ ಅಭಿಮಾನಿ ತಂಡವೊಂದು ಈರಣ್ಣನ ಬೆನ್ನಿಗೆ ನಿಂತಿದೆ. ದೊಡ್ಮನೆಯ ಕೊನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಈ ಬಾಲಕನ ಸಹಾಯಕ್ಕೆ ನಿಲ್ಲತಿದ್ದರೇನೋ? ಅಪ್ಪು ಅವರಿಂದ ಪ್ರೇರಿತರಾದ ಈ ಯುವಕರು ಇಂದು ಅಪ್ಪು ಅವರಿಲ್ಲದಿದ್ದರೂ ಅವರ ಕೆಲಸವನ್ನ ಮುನ್ನೆಡೆಸಿದ್ದಾರೆಂದರೆ ತಪ್ಪಾಗಲಾರದು.


    ಹಣ ಸಂಗ್ರಹಕ್ಕೆ ಅವಿರತ ಅಲೆದಾಟ!


    ಸದ್ಯ ಭೀಮಾತೀರದ ಈ ಯುವಕರ ತಂಡ ನೊಂದ ಈ ಯುವಕನ ಬಾಳಿಗೆ ಬೆಳಕಾಗುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಧನಸಹಾಯ ಮಾಡಲು ಫೇಸ್ಬುಕ್, ವಾಟ್ಸಾಪ್, ಸಾಮಾಜಿಕ ಜಾಲತಾಣ, ಶಾಲಾ - ಕಾಲೇಜು ಸೇರಿ ಹಲವೆಡೆ ಭೇಟಿ ನೀಡಿ ಆ ಯುವಕನ ಚಿಕಿತ್ಸೆಗೆ ಹಣ ಸಂಗ್ರಹಿಸುತ್ತಿದ್ದಾರೆ.


    ನೀವು ಸಹ ಧನಸಹಾಯ ಮಾಡಬಹುದು


    • ಅಶ್ವಿನಿ ದಯಾನಂದ ವಾಲಿ

    • ಕೆನರಾ ಬ್ಯಾಂಕ್ ಚಡಚಣ ಬ್ರ್ಯಾಂಚ್ ವಿಜಯಪುರ ಜಿಲ್ಲೆ

    • ಅಕೌಂಟ್ ನಂಬರ್ 110084273887

    • IFC CNRBOO10813

    • MICR ಕೋಡ್ 586015011

    • ಹೆಚ್ಚಿನ ಮಾಹಿತಿಗೆ ಅವರ ಮೊಬೈಲ್ ನಂಬರ್ - ಅಶ್ವಿನಿ ದಯಾನಂದ ವಾಲಿ 916362964900

    First published: