• Home
  • »
  • News
  • »
  • vijayapura
  • »
  • Police Training: ನೀವೂ ಪೊಲೀಸ್ ಆಗ್ಬೇಕೇ? ಇಲ್ಲಿ ಸಿಗುತ್ತೆ ಉಚಿತ ತರಬೇತಿ

Police Training: ನೀವೂ ಪೊಲೀಸ್ ಆಗ್ಬೇಕೇ? ಇಲ್ಲಿ ಸಿಗುತ್ತೆ ಉಚಿತ ತರಬೇತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸ್ ಇಲಾಖೆ ಸೇರಬೇಕೆನ್ನುವ ಆಸೆ ನಿಮಗಿದೆಯೇ? ಹಾಗಾದರೆ ನಿಮಗೆಂದೇ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತಿದೆ. ಎಲ್ಲಿ, ಏನು, ಎತ್ತ? ವಿವರಕ್ಕಾಗಿ ಮುಂದೆ ಓದಿ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ  ಜಿಲ್ಲೆಯ (Vijayapura News) ಯುವಕ ಯುವತಿಯರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ.  ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮದಡಿ ಪೊಲೀಸ್ ಕಾನ್ಸ್​ಟೇಬಲ್ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆ (Police Constable Exam) ನಡೆಯಲಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನ (Police Constable Exam Training) ವಿಜಯಪುರದ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ 15 ದಿನಗಳ ಕಾಲ ಪರೀಕ್ಷಾರ್ಥಿಗಳಿಗಾಗಿ ನಗರದಲ್ಲಿ ಆಯೋಜಿಸಲಾಗಿದೆ. 

    ತರಬೇತಿಯ ಹೆಸರುಪೊಲೀಸ್ ಕಾನ್ಸ್​ಟೇಬಲ್ ಹುದ್ದೆಗೆ ಪರೀಕ್ಷಾ ಪೂರ್ವ ತರಬೇತಿ
    ತರಬೇತಿಯ ಅವಧಿ15 ದಿನಗಳು
    ತರಬೇತಿಯ ದಿನಾಂಕನವೆಂಬರ್ 7 ರಿಂದ 21ರವರೆಗೆ
    ಇ ಮೇಲ್ ವಿಳಾಸempbjp@gmail.com
    ದೂರವಾಣಿ08352-250383, ಅಥವಾ ಮೊ: 9620095270 ಅಥವಾ 9341777757

    ವಿಜಯಪುರ ನಗರದ ಇಲ್ಲಿನ ಸಿದ್ದೇಶ್ವರ ದೇವಸ್ಥಾನದ ರಸ್ತೆಯ ಪಕ್ಕದಲ್ಲಿರುವ ಇಜೇರಿ ಕರಿಯರ್ ಅಕಾಡೆಮಿಯಲ್ಲಿ ಸೋಮವಾರ ನವೆಂಬರ್ 7 ರಿಂದ 21ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯ ಕ್ರಮಕ್ಕನುಸಾರವಾಗಿ ಉಚಿತ ತರಬೇತಿ ನೀಡಲಾಗುತ್ತದೆ.


    ನೋಂದಾಯಿಸಿಕೊಳ್ಳಲು ಇಂದೇ ಕೊನೆಯ ದಿನ
    ತರಬೇತಿ ಪಡೆಯಲಿಚ್ಚಿಸುವ ಪುರುಷ ಅಭ್ಯರ್ಥಿಗಳುಮತ್ತು ಮಹಿಳಾ ಅಭ್ಯರ್ಥಿಗಳು ಈಗಾಗಲೇ ಹುದ್ದೆಗೆ ಸಲ್ಲಿಸಿದ ತಮ್ಮ ಅರ್ಜಿಯ ಪ್ರತಿ ಒಂದು ಸೆಟ್ ಝರಾಕ್ಸ್ ಪ್ರತಿ ಹಾಗೂ ಆಧಾರ ಕಾರ್ಡ್​ ಪ್ರತಿಯೊಂದಿಗೆ ದಿನಾಂಕ : 07-11-2022 ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಖುದ್ದಾಗಿ ಭೇಟಿ ನೀಡಿ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಬಹುದು.


    ಇಮೇಲ್ ಮೂಲಕವೂ ಅರ್ಜಿ ಸಲ್ಲಿಸಬಹುದು
    ಅಥವಾ ಇಮೇಲ್ ಮೂಲಕ ಈ ತರಬೇತಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಇಚ್ಛಿಸುವವರು empbjp@gmail.com ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು.


    ಇದನ್ನೂ ಓದಿ: Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


    ಯಾರು ಅರ್ಜಿ ಸಲ್ಲಿಸಬಹುದು?
    ವಿಜಯಪುರ ಜಿಲ್ಲೆಯಿಂದ ಈಗಾಗಲೇ ಪೊಲೀಸ್ ಕಾನ್ಸ್​ಟೇಬಲ್ ಹುದ್ದೆಗೆ ಯುವಕ, ಯುವತಿಯರು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಆಯ್ಕೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ಹಿತದೃಷ್ಟಿಯಿಂದ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನ ಉದ್ಯೋಗ ವಿನಿಮಯ ಕಚೇರಿಯಿಂದ ನಡೆಯುತ್ತದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನ ಪಡೆದುಕೊಳ್ಳಬಹುದಾಗಿದೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    ಸಂಪರ್ಕ ಸಂಖ್ಯೆ ಮಾಹಿತಿಯೂ ಇಲ್ಲಿದೆ
    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ್ ರಸ್ತೆ ವಿಜಯಪುರ ಈ ವಿಳಾಸವನ್ನು ಸಂಪರ್ಕಿಸಬಹುದು. ಅಥವಾ ದೂರವಾಣಿ 08352-250383, ಅಥವಾ ಮೊ: 9620095270 ಅಥವಾ 9341777757 ಸಂಖ್ಯೆಗೆ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ಈ ಮೂಲಕ ತಿಳಿಸಿದ್ದಾರೆ.


    ವರದಿ – ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: