ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮುಂಬರುವ ಪೋಲಿಸ್ ಕಾನ್ಸ್ಟೇಬಲ್ (Police Constable Exam) ಮತ್ತು ಡಿ.ಆರ್. ಪೊಲೀಸ್ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ (Competitive Exams Coaching) ಹಾಜರಾಗುವ ಅಭ್ಯರ್ಥಿಗಳಿಗೆ ಡಿಸೆಂಬರ್ 5 ರಿಂದ 16ರವರೆಗೆ ವಿಜಯಪುರ ನಗರದ ಸಿದ್ದೇಶ್ವರ ಗುಡಿ ಎದುರಿಗಿರುವ ಇಜೇರಿ ಕರಿಯರ್ ಅಕಾಡೆಮಿಯಲ್ಲಿ ಉಚಿತ ತರಬೇತಿಯನ್ನ ಆಯೋಜಿಸಲಾಗಿದೆ.
ತರಬೇತಿಯ ಹೆಸರು | ಪೋಲಿಸ್ ಕಾನ್ಸ್ಟೇಬಲ್ ಪರೀಕ್ಷೆ ತರಬೇತಿ |
ತರಬೇತಿಯ ಅವಧಿ | ಡಿಸೆಂಬರ್ 5 ರಿಂದ 16ರವರೆಗೆ |
ಎಷ್ಟು ಫೀಸ್? | ಸಂಪೂರ್ಣ ಉಚಿತ |
ಇಮೇಲ್ ವಿಳಾಸ | empbjp@gmail.com |
ದೂರವಾಣಿ ಸಂಖ್ಯೆ | 08352-250383 ಅಥವಾ 9620095270 |
ಇದನ್ನೂ ಓದಿ: Vijayapura: ಬಿಂಗಿಗಳಿಗೆ ಊಟ ಬಡಿಸಲು ಫುಲ್ ರಶ್! ಯಾರು ಈ ವಿಶೇಷ ವ್ರತಧಾರಿಗಳು?
ಈ ವಿವರಗಳನ್ನೂ ಗಮನಿಸಿ
ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮನುಸಾರವಾಗಿ ಉಚಿತ ತರಬೇತಿ ನೀಡಲಾಗುತ್ತಿದ್ದು, ತರಬೇತಿಗೆ ಹಾಜರಾಗಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಲ್ಲಿಸಿದ ಅರ್ಜಿ ಹಾಗೂ ಆಧಾರ ಕಾರ್ಡ್ ಝೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬಹುದಾಗಿದೆ.
ಅಥವಾ ಖುದ್ದಾಗಿ ಅಥವಾ ಇಮೇಲ್ empbjp@gmail.com ವಿಳಾಸಕ್ಕೆ ಕಳುಹಿಸಿ ಅಗತ್ಯ ದಾಖಲಾತಿಯೊಂದಿಗೆ ಪರೀಕ್ಷಾರ್ಥಿ ಅಭ್ಯರ್ಥಿಗಳು ತಮ್ಮ ತಮ್ಮ ಹೆಸರನ್ನ ನೊಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ
ದೂರವಾಣಿ ಸಂಖ್ಯೆ ಇಲ್ಲಿದೆ ನೋಡಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ್ ರಸ್ತೆ ವಿಜಯಪುರ ದೂ: 08352-250383, ಮೊ: 9620095270 ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ