• Home
 • »
 • News
 • »
 • vijayapura
 • »
 • Bagalakote: ಧಾರ್ಮಿಕ ಸಂಪ್ರದಾಯಗಳಿಗೆ ಈ ಕೊಳದ ನೀರೇ ಬೇಕಂತೆ! ವಿಜಯ ಮಹಾಂತ ತೀರ್ಥದ ವಿಶೇಷವಿದು

Bagalakote: ಧಾರ್ಮಿಕ ಸಂಪ್ರದಾಯಗಳಿಗೆ ಈ ಕೊಳದ ನೀರೇ ಬೇಕಂತೆ! ವಿಜಯ ಮಹಾಂತ ತೀರ್ಥದ ವಿಶೇಷವಿದು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಮಹಾಂತ ತೀರ್ಥದ ಸುತ್ತ 300 ಅಡಿಯಿಂದ 400 ಅಡಿಯವರೆಗೆ ಕೊಳವೆ ಬಾವಿ ತೆಗೆದರೂ ಹನಿ ನೀರು ದೊರೆಯುವುದಿಲ್ಲ. ಇಲ್ಲಿನ ನೀರನ್ನ ಪಕ್ಕದ ಕೃಷಿ ಜಮೀನುಗಳಿಗೂ ಬಳಕೆ ಮಾಡಲಾಗುತ್ತೆ.

 • Share this:

  ವಿಜಯಪುರ: ಇದು ಅಂತಿಂತ ತೀರ್ಥವಲ್ಲ, ಪ್ರಕೃತಿಯೇ ಕೊಟ್ಟ ಎಂದೂ ಬತ್ತಿ ಹೋಗದ ಜಲತೀರ್ಥ. ಇದರಿಂದ ಎಷ್ಟೇ ನೀರು ಕೊಂಡೊಯ್ದರೂ ನೀರು ಬತ್ತದು. ಹಾಗಂತ ಅತಿಯಾಸೆಯಿಂದ ಇದರ ಪಕ್ಕಕ್ಕೆ ಬೋರ್ ವೆಲ್ ಹೊಡೆದ್ರೆ ನೋ ಯೂಸ್. ಒಂದು ಹನಿ ನೀರೂ ಸಿಗದು. ಇಡೀ ಊರಿನ ಗ್ರಾಮಸ್ಥರಿಗೆ ಈ ಕೊಳ ಅಕ್ಷರಶಃ ಜೀವಜಲ!  ಬಾಗಲಕೋಟೆ ನಗರದಿಂದ (Bagalakot News) ಇಳಕಲ್ ಮಾರ್ಗವಾಗಿ ಸಂಚರಿಸುವಾಗ ಶಿರೂರಿನ ಬಳಿ ಚಿತ್ತರಗಿ ಎಂಬ ಗ್ರಾಮ ಸಿಗುತ್ತೆ. ಇಲ್ಲೇ ನೋಡಿ ಈ ವಿಜಯ ಮಹಾಂತ ತೀರ್ಥ (Vijaya Mahanta Thirtha) ಸಿಗುತ್ತೆ. ಇದು ಎಂದೂ ಬತ್ತದ ಸಂಜೀವಿನಿ. ಇದರ ನೀರಿಗೆ ಜೀವಾಮೃತದ ಸ್ಥಾನವೂ ಇದೆ. ಹಾಗಾಗಿ ನಿತ್ಯ ಇಲ್ಲಿಗೆ ನೂರಾರು ಜನರು ಭೇಟಿ ನೀಡಿ ಈ ತೀರ್ಥವನ್ನ ತೆಗೆದುಕೊಂಡು ಹೋಗುವುದುಂಟು.  ಅಂದಹಾಗೆ ಇದರ ಮೂಲವನ್ನ ಹುಡುಕುತ್ತ ಹೋದರೆ ಪುರಾಣ ಕತೆಯೇ ತೆರೆದುಕೊಳ್ಳುತ್ತೆ.


  ಚಿತ್ತರಗಿ ಶ್ರೀಮಠದ ಜೀರ್ಣೋದ್ಧಾರದ ಕಾರ್ಯಕ್ಕೆ ವಿಜಯ ಮಹಾಂತ ಶಿವಯೋಗಿಗಳು ಗಟ್ಟಿ ಕಲ್ಲುಗಳನ್ನು ಹುಡುಕಿ ಬಂದ್ರಂತೆ. ರಣ ಬಿಸಿಲಿಗೆ ಸುಸ್ತಾಗಿ ಕುಡಿಯೋ ನೀರಿಗಾಗಿ ಹುಡುಕಿದರೆ ಒಂದು ಹನಿ ನೀರೂ ಸಿಕ್ಕಿಲ್ವಂತೆ. ಆಗ ವಿಜಯ ಮಹಾಂತರು ಒಂದು ಸ್ಥಳ ತೋರಿಸಿ ನೆಲೆ ಅಗೆಯೋಕೆ ಹೇಳಿದ್ರಂತೆ. ಅಲ್ಲಿ ಆಗ ಉಕ್ಕಿದ ಆ ಜೀವಜಲವೇ ಇಂದಿಗೂ ಪವಿತ್ರವೆಂದೇ ಪ್ರಚಾರದಲ್ಲಿರೋದು.


  ಮೊದಲು ಹೊರ್ತಿ ಕಟ್ಟೆ ಕರೆಯಲಾಗ್ತಿತ್ತು
  ಮೊದಲು ಸುತ್ತಮುತ್ತಲ ಜನ ಇದನ್ನು 'ಹೊರ್ತಿ ಕಟ್ಟೆ' ಎಂದು ಕರೆಯುತ್ತಿದ್ರು. ಕಾಲಾನಂತರದಲ್ಲಿ 'ಶ್ರೀ ವಿಜಯ ಮಹಾಂತ ತೀರ್ಥ'ವೆಂದೇ ಕರೆಯಲಾಗುತ್ತಿದೆ. ಎಂತಹ ಬರಗಾಲದಲ್ಲೂ ಇಲ್ಲಿಯ ನೀರು ಬತ್ತೋದಿಲ್ಲ ಎಂಬುದೇ ಇದರ ವಿಶೇಷ.


  ಇದನ್ನೂ ಓದಿ:  Positive Story: ಹೇರ್ ಕಟಿಂಗ್ ಸಲೂನ್​ನಲ್ಲಿ ಲೈಬ್ರರಿ! ಇದು ಕನ್ನಡಾಭಿಮಾನಿಯ ವಿಶಿಷ್ಟ ಪ್ರಯತ್ನ


  ಅಕ್ಕಪಕ್ಕ ಬೋರ್ ಕೊರೆದರೂ ನೀರಿಲ್ಲ
  ಈ ಮಹಾಂತ ತೀರ್ಥದ ಸುತ್ತ 300 ಅಡಿಯಿಂದ 400 ಅಡಿಯವರೆಗೆ ಕೊಳವೆ ಬಾವಿ ತೆಗೆದರೂ ಹನಿ ನೀರು ದೊರೆಯುವುದಿಲ್ಲ. ಇಲ್ಲಿನ ನೀರನ್ನ ಪಕ್ಕದ ಕೃಷಿ ಜಮೀನುಗಳಿಗೂ ಬಳಕೆ ಮಾಡಲಾಗುತ್ತೆ. ಅಲ್ಲದೇ ಸರ್ವ ರೋಗಕ್ಕೂ ಸಂಜೀವಿನಿಯಂದು ನಂಬಲಾಗಿದೆ. ಶುಭ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೂ ಸಹ ಗೋಮೂತ್ರಕ್ಕೆ ಪರ್ಯಾಯವಾಗಿ ಬಳಸಲಾಗುತ್ತೆ.


  ಇದನ್ನೂ ಓದಿ: Obavva Police Squad: ಪುಂಡ ಪೋಕರಿಗಳ ಎದೆಯಲ್ಲಿ ನಡುಕ! ಇದು ಓಬವ್ವ ಪಡೆಯ ತಾಕತ್ತು


  ಇಲ್ಲಿ ಸದ್ಯ ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರವೂ ಇದ್ದು, ಸುತ್ತಲು ನೂರಾರು ಔಷಧೀಯ ಸಸ್ಯಗಳು ಸಹ ಬೆಳೆದುನಿಂತಿದೆ. ಗ್ರಾಮದ ಜನರು ಸಹ ತಮ್ಮೂರಿನ ಜೀವಜಲವನ್ನು ಜೋಪಾನವಾಗಿ ಕಾಪಿಟ್ಟುಕೊಂಡು ಬಂದಿದ್ದಾರೆ. ಹೀಗೆ ವಿಜಯ ಮಹಾಂತ ತೀರ್ಥ ಇಲ್ಲಿನ ಪರಿಸರವನ್ನೂ ಜತನದಿಂದ ಕಾಯುತ್ತಿದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: