ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿದಾರರ (Pension) ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಜೂ. 6ರಂದು ಜಿಲ್ಲೆಯ 14 ಗ್ರಾಮಗಳಲ್ಲಿ (Village) ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದ್ದಾರೆ. ಜೂನ್ 6 ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಕಡೆ ಪಿಂಚಣಿ ಅದಾಲತ್ (Pension Adalath) ನಡೆಯಲಿದೆ.
ಎಲ್ಲೆಲ್ಲ ಅದಾಲತ್?
ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಅವರ ಸಮ್ಮುಖದಲ್ಲಿವಿಜಯಪುರ ನಗರದ ವಾರ್ಡ ನಂ.14ರ ಮಾಂಗಗಾರುಡಿ ತರುಣ ಸಂಘ ಸಮುದಾಯ ಭವನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಅಂಬಳನೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ವಿಜಯಪುರ ತಹಶೀಲ್ದಾರ ಗ್ರೇಡ್-2 ಇವರು, ವಿಜಯಪುರ ನಗರದ ಎಲ್. ಐ. ಸಿ. ಕಚೇರಿ ಬಳಿ ಇರುವ ಶಿಕ್ಷಣ ಸಂಸ್ಥೆಯಲ್ಲಿ, ಬಬಲೇಶ್ವರ ತಹಸೀಲ್ದಾರ ಗ್ರೇಡ್-2, ಹಂಚಿನಾಳ ಪಿ. ಎಚ್. ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ತಿಕೋಟಾ ತಹಸೀಲ್ದಾರ ಗ್ರೇಡ್-2, ರತ್ನಾಪೂರ ಗ್ರಾಮದ ಶ್ರೀ ಚಿದಾನಂದ ಮಠದಲ್ಲಿ, ಬಸವನ ಬಾಗೇವಾಡಿ ತಹಸೀಲ್ದಾರ ಗ್ರೇಡ್-2 ಇವರು ನೇಗಿನಾಳ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಇಲ್ಲೂ ನಡೆಯುತ್ತೆ ಅದಾಲತ್
ನಿಡಗುಂದಿ ತಹಸೀಲ್ದಾರ ಗ್ರೇಡ್-2 ಇವರು, ಆಲಮಟ್ಟಿಯ ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ, ಮುದ್ದೇಬಿಹಾಳ ತಹಶೀಲ್ದಾರ ಗ್ರೇಡ್-2 ಇವರ ಸಮ್ಮುಖದಲ್ಲಿ ಕುಂಚಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ತಾಳಿಕೋಟಿ ತಹಸೀಲ್ದಾರ ಇವರು ಬೋಳವಾಡ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ, ಇಂಡಿ ತಹಸೀಲ್ದಾರ ಇವರು, ನಾಗರಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ, ಕೊಲ್ಹಾರ ತಹಸೀಲ್ದಾರ ಇವರು ರೋಣಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ, ಚಡಚಣ ತಹಶೀಲ್ದಾರ ಗ್ರೇಡ್-2 ಇವರು, ನಂದ್ರಾಳ ಗ್ರಾಮದ ಚಾವಡಿಯಲ್ಲಿ, ಸಿಂದಗಿ ತಹಸೀಲ್ದಾರ ಗ್ರೇಡ್-2 ಇವರು, ಚಟ್ಟರಕಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ, ಆಲಮೇಲ ತಹಸೀಲ್ದಾರ ಇವರು, ಕುಳೆಕುಮಟಗಿ ಗ್ರಾಮದ ಎಚ್ಪಿಎಸ್ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಎಲ್ಲಾ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯಿತಿ ಕಾರ್ಯದರ್ಶಿಗಳು, ಪಿಡಿಓಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿರಲಿದ್ದು, ವಿಜಯಪುರ ನಗರದ ವಾರ್ಡ ನಂ.14, ಅಂಬಳನೂರ, ವಿಜಯಪುರ ನಗರದ ಎನ್ಸಿಸಿ ಕಚೇರಿ ಹತ್ತಿರದ ಹಂಚಿನಾಳ, ರತ್ನಾಪೂರ, ನೇಗಿನಾಳ, ಆಲಮಟ್ಟಿ, ಕುಂಚಗನೂರ, ಬೋಳವಾಡ, ನಾಗರಹಳ್ಳಿ, ರೋಣಿಹಾಳ, ನಂದ್ರಾಳ, ಚಟ್ಟರಕಿ ಹಾಗೂ ಕುಳೆಕುಮಟಗಿ ಗ್ರಾಮದಲ್ಲಿ ಪಿಂಚಣಿ ಅದಲತ್ ನಡೆಸಲಿದ್ದಾರೆ.
ಅದಾಲತ್ ಲಾಭವೇನು?
ಅದಾಲತ್ ನಲ್ಲಿ ಪಿಂಚಣಿದಾರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ