• Home
 • »
 • News
 • »
 • vijayapura
 • »
 • Pension Solution: ನಿಮಗೆ ಪೆನ್ಶನ್ ಸಿಗ್ತಿಲ್ವಾ? ಸಮಸ್ಯೆ ಪರಿಹರಿಸಿಕೊಳ್ಳಲು ಸುವರ್ಣಾವಕಾಶ

Pension Solution: ನಿಮಗೆ ಪೆನ್ಶನ್ ಸಿಗ್ತಿಲ್ವಾ? ಸಮಸ್ಯೆ ಪರಿಹರಿಸಿಕೊಳ್ಳಲು ಸುವರ್ಣಾವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಿಂಚಣಿ ಕುರಿತು ನಿಮಗೆ ಯಾವುದಾದರೂ ಸಮಸ್ಯೆಗಳಿವೆಯೇ? ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಿಂಚಣಿ ಅದಾಲತ್​ನಲ್ಲಿ ದೊರೆಯಲಿದೆ. ಇಲ್ಲಿದೆ ನೋಡಿ ಹೆಚ್ಚಿನ ವಿವರ.

 • Share this:

  ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿದಾರರ (Pension) ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಡಿಸೆಂಬರ್ 12 ರಂದು ವಿಜಯಪುರ ಜಿಲ್ಲೆಯ 14 ಗ್ರಾಮಗಳಲ್ಲಿ ಪಿಂಚಣಿ ಅದಾಲತ್ (Pension Adalat) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ (Vijayapura News)  ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಜಯಪುರದ ಉಪವಿಭಾಗಾಧಿಕಾರಿಗಳು ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಆಸಂಗಿಹಾಳ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.


  ವಿಜಯಪುರ ತಹಶೀಲ್ದಾರ ಗ್ರೇಡ್-2 ಅವರು ಮಡಸನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಬಬಲೇಶ್ವರ ತಹಶೀಲ್ದಾರ ಗ್ರೇಡ್-2 ಅವರು ಶಿರಬೂರ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.


  ಈ ಪ್ರದೇಶಗಳಲ್ಲೂ ನಡೆಯಲಿದೆ ಅದಾಲತ್
  ತಿಕೋಟಾ ತಹಶೀಲ್ದಾರ ಅವರು ಇಟ್ಟಂಗಿಹಾಳ ಗ್ರಾಮದ ಹನುಮಂತ ದೇವಸ್ಥಾನದಲ್ಲಿ, ಬಸವನಬಾಗೇವಾಡಿ ತಹಶೀಲ್ದಾರ ಸಂಕನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ, ನಿಡಗುಂದಿ ತಹಶೀಲ್ದಾರ ಗ್ರೇಡ್-2 ಅವರು ಮಾರಡಗಿ ಆರ್.ಸಿ. ದುರ್ಗಾದೇವಿ ದೇವಸ್ಥಾನದಲ್ಲಿ, ಮುದ್ದೇಬಿಹಾಳ ತಹಶೀಲ್ದಾರ ಗ್ರೇಡ್-2 ಅವರು ಅಬ್ಬಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.


  ಇದನ್ನೂ ಓದಿ: Inspiration: ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ವಿಜಯಪುರದ ಮಲ್ಲಮ್ಮ; ಇವರ ಜೀವನವೇ ಸ್ಪೂರ್ತಿಗೀತೆ!


  ಈ ವಿವರಗಳನ್ನೂ ಗಮನಿಸಿ


  ತಾಳಿಕೋಟೆ ತಹಶೀಲ್ದಾರ ಅವರು ಗುಂಡಕನಾಳ ಶ್ರೀ ಸಾಯಬಣ್ಣ ಮುತ್ಯಾನ ಗುಡಿಯಲ್ಲಿ, ಇಂಡಿ ಗ್ರೇಡ್-2 ತಹಶೀಲ್ದಾರ ಅವರು ಚಿಕ್ಕಬೇವನೂರ ಗ್ರಾಮದ ಹಣಮಪ್ಪ ದೇವಸ್ಥಾನದಲ್ಲಿ, ಕೊಲ್ಹಾರ ತಹಶೀಲ್ದಾರ ತಳೇವಾಡ ಗ್ರಾಮದ ರಾಜೀವ್ ಸೇವಾ ಕೇಂದ್ರದಲ್ಲಿ, ಚಡಚಣ ಗ್ರೇಡ್-2 ತಹಶೀಲ್ದಾರ ಅವರು ಜೀರಂಕಲಗಿ ಗ್ರಾಮದ ಮಹಾದೇವನ ದೇವಸ್ಥಾನದಲ್ಲಿ ಸಿಂದಗಿ ಗ್ರೇಡ್-2 ತಹಶೀಲ್ದಾರ ಅವವರು ಖೈನೂರ ಗ್ರಾಮದ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿ ಹಾಗೂ ದೇವರಹಿಪ್ಪರಗಿ ಗ್ರೇಡ್-2 ತಹಶೀಲ್ದಾರ ಅವರು ಮಣೂರ ಗ್ರಾಮದ ಹಣಮಂತ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.


  ಇದನ್ನೂ ಓದಿ: Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭವ


  ವಿಜಯಪುರ ಜಿಲ್ಲೆಯಾದ್ಯಂತ ನಡೆಯಲಿರುವ ಈ ಪಿಂಚಣಿ ಅದಾಲತ್‍ನಲ್ಲಿ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿರಲಿದ್ದು, ಭಂಟನೂರ, ಹಾವಿನಾಳ, ಮಡಸನಾಳ, ಶಿರಬೂರ, ಇಟ್ಟಂಗಿಹಾಳ, ಸಂಕನಾಳ, ಮಾರಡಗಿ ಆರ್.ಸಿ., ಅಬ್ಬಿಹಾಳ, ಗುಂಡಕನಾಳ, ಚಿಕ್ಕಬೇವನೂರ, ತಳೇವಾಡ, ಜೀರಂಕಲಗಿ, ಖೈನೂರ, ಮಣೂರ ಗ್ರಾಮದ ಪಿಂಚಣಿದಾರರು ಅದಾಲತ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪಿಂಚಣಿಗೆ ಸಂಬಂಧಿಸಿದ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು