ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಸೇರಿದ ಲೀಸ್ ಆಸ್ತಿಗಳು (Lease) ಇನ್ಮುಂದೆ ಲೀಸ್ದಾರರು ಖರೀದಿ ಮಾಡಬಹುದಾಗಿದೆ. ನಿಗದಿತ ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ ಅಂತಹ ಆಸ್ತಿಗಳನ್ನು ಖರೀದಿ ಮಾಡಬಹುದಾಗಿದೆ. ರಾಜ್ಯ ಸರಕಾರದ (Karnataka Government) ಆದೇಶದ ಹಿನ್ನೆಲೆ ವಿಜಯಪುರ (Vijayapura News) ಮಹಾನಗರ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಲೀಸ್ ದಾರರು ಇನ್ಮುಂದೆ ಅಂತಹ ಆಸ್ತಿಗೆ ಒಡೆಯನಾಗಬಹುದಾಗಿದೆ.
ಲೀಸ್ ಆಸ್ತಿಗಳೆಷ್ಟು?
ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 366 ಲೀಸ್ ಆಸ್ತಿಗಳಿದ್ದು, ಅದರಲ್ಲಿ ಕೆಲವರು ಈಗಾಗಲೇ ಖರೀದಿ ಹಾಕಿಕೊಡಲು ಪಾಲಿಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ 366 ಲೀಸ್ ಆಸ್ತಿಗಳನ್ನು ಮಹಾನಗರ ಪಾಲಿಕೆಯು ಖರೀದಿ ಮಾಡಲು ಅವಕಾಶ ನೀಡಿದೆ.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ಒಂದು ವಾರ ಅವಕಾಶ
ಖರೀದಿ ಆಸಕ್ತರು ತಾವು ಪಡೆದ ಲೀಸ್ ಆಸ್ತಿಗಳ ವಿವರದ ಜೊತೆಗೆ ಪಾಲಿಕೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಅರ್ಜಿ ಸಲ್ಲಿಸುವವರು 7 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಅಂತಹ ಆಸ್ತಿಗಳನ್ನು ವಿಜಯಪುರ ಮಹಾನಗರ ಪಾಲಿಕೆ ತನ್ನ ತೆಕ್ಕೆಗೆ ಪಡೆದುಕೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿ ಹಾಗೂ ಸಂಶಯಗಳಿದ್ದಲ್ಲಿ ಬಾಗಲಕೋಟೆ ರಸ್ತೆಯಲ್ಲಿರುವ ವಿಜಯಪುರ ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ದೂರವಾಣಿ ಸಂಖ್ಯೆ ಹೀಗಿದೆ ನೋಡಿ: 08352-278539
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ