ವಿಜಯಪುರ: ಶಿವರಾತ್ರಿಯ ದಿನವೇ ಗರ್ಭಗುಡಿಗೆ ಹರಿಯಿತು ನೀರು! ನೀರಿನಲ್ಲೇ ನಿಂತೇ ಆ ಪರಮಶಿವನಿಗೆ ಪೂಜೆ! ಹಾಲು, ಮೊಸರು, ತುಪ್ಪದ ಭಕ್ತಿಯ ಅಭಿಷೇಕ! ಇಂತಹ ಅಮೋಘ ಕ್ಷಣವೊಂದಕ್ಕೆ (Mahashivaratri 2023) ಸಾಕ್ಷಿಯಾದರು ನೋಡಿ ವಿಜಯಪುರದ (Vijayapura News) ಮಹಾಜನತೆ!
ವಿಜಯಪುರದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮಳೆಗಾಲದ ವೈಭವವನ್ನೇ ಸೃಷ್ಟಿಸಿದೆ. ಹಳ್ಳ ಕೊಳ್ಳ, ಬಾಂದಾರಗಳು ತುಂಬಿ ಹರಿಯುತ್ತಿವೆ. ಕೆರೆ ಕಟ್ಟೆಗಳು ತುಂಬಿ ತುಳುಕಾಡುತ್ತಿವೆ.
ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು!
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸುತ್ತಲೂ ನೀರು ಹರಿಯುತ್ತಿದೆ. ಇದೇ ಗ್ರಾಮದ ಸಂಗಮನಾಥ ದೇವಸ್ಥಾನದ ಗರ್ಭಗುಡಿಗೂ ನೀರು ಪ್ರವೇಶಿಸಿದೆ. ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ನಿಂತಿದ್ದು ನೀರಿನ ನಡುವೆಯೇ ಭಕ್ತರು ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: Vijayapura: ಗುಮ್ಮುತ್ತಾ ಗೆದ್ದ ಟಗರಿಗೆ ಬುಲೆಟ್ ಬೈಕ್! ಶಿಳ್ಳೆ, ಕೇಕೆ ಫುಲ್ ಎಂಜಾಯ್!
ಸಂಗಮನಾಥನಿಗೆ ಹಾಲು, ಮೊಸರು, ತುಪ್ಪ ಅಭಿಷೇಕ
ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿ ದಿನ ರಾತ್ರಿ 12 ಕ್ಕೆ ಸಂಗಮನಾಥನ ಪೂಜೆ ಅಭಿಷೇಕವನ್ನು ಗ್ರಾಮಸ್ಥರು ನೆರವೇರಿಸಿದ್ದಾರೆ. ಸಂಗಮನಾಥನಿಗೆ ಹಾಲು, ಮೊಸರು, ತುಪ್ಪ ಅಭಿಷೇಕ ಮಾಡಿದ್ದಾರೆ.
ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!
ಬೇಸಿಗೆಯ ಆರಂಭಕ್ಕೂ ಮುನ್ನವೇ ಮಳೆಗಾಲದ ವೈಭವ ಕಂಡು ಭಕ್ತರು ಖುಷಿಗೊಂಡಿದ್ದಾರೆ. ಕೃಷ್ಣೆಯ ನೀರಿನಿಂದ ಸಂಗಮನಾಥನಿಗೆ ವಿಶೇಷ ಅಭಿಷೇಕ ಆಯಿತೆಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಹಿತಿ, ವಿಡಿಯೋ: ಗುರು, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ