• Home
  • »
  • News
  • »
  • vijayapura
  • »
  • Toilet: ಶೌಚಾಲಯ ರಹಿತ ಕುಟುಂಬಗಳಿಂದ ಆಕ್ಷೇಪಣೆ ಆಹ್ವಾನ

Toilet: ಶೌಚಾಲಯ ರಹಿತ ಕುಟುಂಬಗಳಿಂದ ಆಕ್ಷೇಪಣೆ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯವಂತ ವಾತಾವರಣ ಕಲ್ಪಿಸಲು ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಿಸಲಾದ 3,950 ವೈಯಕ್ತಿಕ ಶೌಚಾಲಯ, 34 ಸಾರ್ವಜನಿಕ ಶೌಚಾಲಯ ಹಾಗೂ 6 ಸಮುದಾಯ ಶೌಚಾಲಯಗಳು ಬಳಕೆಗೆ ಲಭ್ಯವಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ ಮಹಾನಗರ ಪಾಲಿಕೆಯ ವಲಯ ಕಚೇರಿ-1, ವಲಯ ಕಚೇರಿ-2 ಮತ್ತು ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡ್​ಗಳನ್ನೂ ಬಯಲು ಶೌಚಮುಕ್ತಗೊಳಿಸುವ ಓಡಿಎಫ್ ಗುರಿಯನ್ನು ಹೊಂದಲಾಗಿದೆ. ಶೌಚಾಲಯ ರಹಿತ ಕುಟುಂಬಗಳು, ವಿವಿಧ ಸಂಘ ಸಂಸ್ಥೆಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.


    ಡಿಸೆಂಬರ್ 7 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ
    ಪಾಲಿಕೆ ವ್ಯಾಪ್ತಿಯಲ್ಲಿನ 35 ವಾರ್ಡ್​ಗಳನ್ನು ಬಯಲು ಶೌಚಮುಕ್ತ ವಾರ್ಡಗಳಾಗಿ ಘೋಷಿಸಲು ಉದ್ದೇಶಿಸಲಾಗಿದ್ದು, ಶೌಚಾಲಯ ಸೌಲಭ್ಯದಿಂದ ವಂಚಿತರಾದ ಯಾವುದೇ ಕುಟುಂಬಗಳು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು, ಶಾಲಾ ಮುಖ್ಯಸ್ಥರು ಹಾಗೂ ಬಾಧಿತರಾಗಹುದಾದ ಯಾವುದೇ ವ್ಯಕ್ತಿ, ಸಂಘ, ಸಂಸ್ಥೆಗಳು ಆಕ್ಷೇಪಣೆಗಳನ್ನು ಡಿಸೆಂಬರ್ 7 ರೊಳಗೆ ಆಯುಕ್ತರು ಮಹಾನಗರ ಪಾಲಿಕೆ, ವಿಜಯಪುರ ಇವರಿಗೆ ಸಲ್ಲಿಸಬಹುದಾಗಿದೆ.


    ಇದನ್ನೂ ಓದಿ: Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ


    ಸದ್ಯ ಸಾರ್ವಜನಿಕರ ಬಳಕೆಗೆ ಲಭ್ಯವಿರುವ ಶೌಚಾಲಯಗಳು
    ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ-1ರ ವಾರ್ಡ್​ ಸಂಖ್ಯೆ 1ರಿಂದ 11 ಹಾಗೂ ವಾರ್ಡ್​ 27, 31 ಹಾಗೂ 32ರ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆರೋಗ್ಯವಂತ ವಾತಾವರಣ ಕಲ್ಪಿಸಲು ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಿಸಲಾದ 3,950 ವೈಯಕ್ತಿಕ ಶೌಚಾಲಯ, 34 ಸಾರ್ವಜನಿಕ ಶೌಚಾಲಯ ಹಾಗೂ 6 ಸಮುದಾಯ ಶೌಚಾಲಯಗಳು ಬಳಕೆಗೆ ಲಭ್ಯವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.


    ಇದನ್ನೂ ಓದಿ: Positive Story: ಡ್ರ್ಯಾಗನ್ ಫ್ರುಟ್​ ಬೆಳೆದು ಲಕ್ಷಾಂತರ ರೂಪಾಯಿ ಜೇಬಿಗಿಳಿಸ್ತಿರೋ ವಿಜಯಪುರ ಕೃಷಿಕ!


    ಅದರಂತೆ ವಲಯ-2ರ ವಾರ್ಡ್​ ಸಂ. 12 ರಿಂದ 20, ವಾರ್ಡ್ ಸಂ. 24, 25 ಹಾಗೂ 26ರ ವ್ಯಾಪ್ತಿಯಲ್ಲಿ 5286 ವೈಯಕ್ತಿಕ ಶೌಚಾಲಯ, 19 ಸಾರ್ವಜನಿಕ ಶೌಚಾಲಯ ಹಾಗೂ 9 ಸಮುದಾಯ ಶೌಚಾಲಯಗಳು ಮತ್ತು ವಲಯ 03ರ ವಾರ್ಡ ಸಂಖ್ಯೆ 21ರಿಂದ 23, ವಾರ್ಡ್​ ಸಂ.28 ರಿಂದ 30, ವಾರ್ಡ ಸಂ.33, 34 ಹಾಗೂ 35ರ ವ್ಯಾಪ್ತಿಯಲ್ಲಿ 1404 ವೈಯಕ್ತಿಕ, 14 ಸಾರ್ವಜನಿಕ ಹಾಗೂ 5 ಸಮುದಾಯ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: