• Home
  • »
  • News
  • »
  • vijayapura
  • »
  • Obavva Police Squad: ಪುಂಡ ಪೋಕರಿಗಳ ಎದೆಯಲ್ಲಿ ನಡುಕ! ಇದು ಓಬವ್ವ ಪಡೆಯ ತಾಕತ್ತು

Obavva Police Squad: ಪುಂಡ ಪೋಕರಿಗಳ ಎದೆಯಲ್ಲಿ ನಡುಕ! ಇದು ಓಬವ್ವ ಪಡೆಯ ತಾಕತ್ತು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ವಿಜಯಪುರ ಜಿಲ್ಲೆಯಲ್ಲಿ 2021 ರಲ್ಲಿ 40 ಪೋಕ್ಸೋ ಪ್ರಕರಣ ದಾಖಲಾಗಿವೆ. 2022 ರಲ್ಲಿ ಈವರೆಗೆ 30ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಕರಾಟೆ ಕಸರತ್ತಿಗೂ ಸೈ, ಬೈಕ್ ರೇಡಿಂಗ್ ಜೈ ಅಂತಿರೋ ಇವ್ರು ನಮ್ಮ ರಾಜ್ಯದ ಹೆಮ್ಮೆಯ ಮಹಿಳಾ ಪೊಲೀಸರು. ಪುಂಡ ಪೋಕರಿಗಳ ಮಟ್ಟ ಹಾಕೋದಕ್ಕೆ ತಯಾರಾಗ್ತಿದ್ದಾರೆ ನೋಡಿ ಈ ಲೇಡಿ ಖಾಕಿಗಳು. ಅದಕ್ಕಾಗಿಯೇ ಕಿಕ್ಕು, ಪಂಚು.. ರೇಡಿಂಗ್ ಮಾಡಿ ರೇಡ್ ಮಾಡೋಕೆ ರೆಡಿಯಾಗಿವೆ ಓಬವ್ವ ಪಡೆ. ಮೈದಾನದಲ್ಲಿ ಒನ್ ಟು ಥ್ರೀ ಅಂತಾ ಎಕ್ಸೈಸ್ ಮಾಡ್ತಾ ಕಸರತ್ತು ಮಾಡುತ್ತಿರೋ ಈ ಓಬವ್ವ ಪಡೆ ವಿಜಯಪುರದಲ್ಲಿ ಈಗಾಗಲೇ ತನ್ನ ರೌಂಡ್ಸ್ ಆರಂಭಿಸಿದೆ. ಇತ್ತೀಚೆಗೆ ವಿಜಯಪುರದಲ್ಲಿ ಹೆಚ್ಚುತ್ತಿರೋ ಪೋಕ್ಸೋ ಪ್ರಕರಣದಲ್ಲಿ (POCSO Case) ಪುಂಡರಿಗೆ ಭಯ ಹುಟ್ಟಿಸಲೆಂದೇ ಓಬವ್ವ ಪಡೆ (Obavva Police Squad) ಸಿದ್ಧಗೊಂಡಿದೆ.


    ಕೇವಲ ಮಹಿಳಾ ಪೇದೆಗಳನ್ನು ರೌಂಡ್ಸ್​ಗೆ ಕಳುಹಿಸದೇ ಅವ್ರಿಗೆ ಅದಕ್ಕೆ ಬೇಕಾದ ತರಬೇತಿಯನ್ನೂ ನೀಡಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಹಿಳಾ ಪೊಲೀಸರ ಈ ತಂಡ ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ಪಿಜಿಗಳಲ್ಲಿರುವ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ.


    ಮಹಿಳಾ ಪೊಲೀಸ್ ತಂಡಕ್ಕೆ ವಿಶೇಷ ತರಬೇತಿ
    ವಿಜಯಪುರ ಉಪವಿಭಾಗದ ಡಿಎಸ್ಪಿ ಅಡಿಯಲ್ಲಿ ನಾಲ್ಕರಿಂದ 5 ಮಹಿಳಾ ಪೊಲೀಸ್ ತಂಡಕ್ಕೆ ವಿಶೇಷ ತರಬೇತಿ ನೀಡಿ ರೆಡಿ ಮಾಡಲಾಗಿದೆ. ಬೈಕ್ ಚಾಲನೆ, ಹಲ್ಲೆಕೋರರು-ಕ್ರಿಮಿನಲ್ಸ್ ವಿರುದ್ಧ ಹೋರಾಡಬಲ್ಲ ಕಸರತ್ತುಗಳನ್ನ ಹೇಳಿಕೊಡಲಾಗಿದೆ.


    ಇದನ್ನೂ ಓದಿ: Positive Story: ಹೇರ್ ಕಟಿಂಗ್ ಸಲೂನ್​ನಲ್ಲಿ ಲೈಬ್ರರಿ! ಇದು ಕನ್ನಡಾಭಿಮಾನಿಯ ವಿಶಿಷ್ಟ ಪ್ರಯತ್ನ


    ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಪೋಕ್ಸೋ ಪ್ರಕರಣಗಳ ಸಂಖ್ಯೆ
    ಅತ್ಯಾಚಾರಿಗಳಿಗೆ ಹೇಗೆ ಪ್ರತಿರೋಧ ಒಡ್ಡಬೇಕು, ತಮ್ಮನ್ನ ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನ ಈ ತಂಡಕ್ಕೆ ಪೊಲೀಸ್ ಇಲಾಖೆಯ ನುರಿತರಿಂದ ತರಬೇತಿ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 2021 ರಲ್ಲಿ 40 ಪೋಕ್ಸೋ ಪ್ರಕರಣ ದಾಖಲಾಗಿವೆ. 2022 ರಲ್ಲಿ ಈವರೆಗೆ 30ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹೆಣ್ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಓಬವ್ವ ಪಡೆ ಕಾರ್ಯೋನ್ಮುಖವಾಗಿದೆ.


    ಇದನ್ನೂ ಓದಿ: Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!


    ಒಟ್ಟಿನಲ್ಲಿ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ವಿಜಯಪುರದ ಓಬವ್ವ ಪಡೆ ಟೊಂಕಕಟ್ಟಿ ನಿಂತಿದ್ದು, ಹೆಣ್ಮಕ್ಕಳಲ್ಲಿ ಧೈರ್ಯ ತುಂಬುವಂತೆ ಮಾಡಿದೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: