Jokumaraswamy: ನಿಮ್ಮ ಕಷ್ಟಗಳನ್ನ ಡೈರೆಕ್ಟ್ ಆಗಿ ದೇವರಿಗೇ ತಿಳಿಸೋನೀತ!

North Karnataka: ಮಳೆ ಇಲ್ಲದೇ ಕೆರೆ ಬಾವಿಗಳು ಬತ್ತಿ ಹೋಗಿರುವ ಬಗ್ಗೆ, ರೈತರ ಸಂಕಷ್ಟದ ಬಗ್ಗೆಯೂ ಈ ಜೋಕುಮಾರಸ್ವಾಮಿ ವರದಿ ತಲುಪಿಸುತ್ತಾನೆ ಅನ್ನೋ ನಂಬಿಕೆಯಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ವಿಜಯಪುರ: ಹೆಂಗಳೆಯರಿಂದ ಹೊಗಳಿಸಿಕೊಳ್ಳುತ್ತಾ.. ಪೂಜೆ ಪುನಸ್ಕಾರ ಪಡೆಯುತ್ತಾ ಊರೂರು ತಿರುಗುತ್ತಿರುವ ಇವನು ಜೋಕುಮಾರ ಸ್ವಾಮಿ. ಇಡೀ ಗ್ರಾಮವನ್ನ ತಿರುಗಾಡುವ ಈತ ಶಿವನ ಬಳಿ ಭೂಲೋಕದಲ್ಲಿನ ಪರಿಸ್ಥಿತಿ ಕಂಡು ಮಳೆರಾಯನನ್ನು ಕಳಿಸು ಕೊಡುವಂತೆ ಶಿವನಿಗೆ (Shiva) ವರದಿ ಒಪ್ಪಿಸುತ್ತಾನೆ ಅನ್ನೋ ನಂಬಿಕೆಯಿದೆ. ಹೀಗಾಗಿಯೇ ನೋಡಿ, ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಜೋಕುಮಾರಸ್ವಾಮಿ (Jokumaraswamy) ಸುತ್ತಾಟಕ್ಕೆ ವಿಶೇಷ ಮಹತ್ವವಿದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ (Folk Culture) ಪ್ರತೀಕ. 

    ಒಂದು ವಾರಗಳ ಕಾಲ, ಕಾಯಿ ಕಡುಬಿನ ಸಿಹಿ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ, ಶಿವ-ಪಾರ್ವತಿಗೆ ವರದಿ ಒಪ್ಪಿಸಿದರೆ, ಜಾನಪದ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಸ್ವಾಮಿ ಭೂಲೋಕದಲ್ಲಿನ ಸಂಕಷ್ಟವನ್ನ ತಿಳಿಸಿಕೊಡುತ್ತಾನೆ.

    ಇದನ್ನೂ ಓದಿ: Positive Story: ವಿಧವೆಯರೇ ನಡೆಸೋ ಹೊಟೇಲ್! ಇಲ್ಲಿದೆ ನೋಡಿ

    ಮಳೆ ಇಲ್ಲದೇ ಕೆರೆ ಬಾವಿಗಳು ಬತ್ತಿ ಹೋಗಿರುವ ಬಗ್ಗೆ, ರೈತರ ಸಂಕಷ್ಟದ ಬಗ್ಗೆಯೂ ಈ ಜೋಕುಮಾರಸ್ವಾಮಿ ವರದಿ ತಲುಪಿಸುತ್ತಾನೆ ಅನ್ನೋ ನಂಬಿಕೆಯಿದೆ. ಹೀಗಾಗಿ ಜೋಕುಮಾರಸ್ವಾಮಿಗೆ ದೇವರಿಗಿರುವಷ್ಟೇ ಮಹತ್ವವೂ ಇದೆ.

    ಉತ್ತರ ಕರ್ನಾಟಕದಲ್ಲಿ ಜೋಕುಮಾರಸ್ವಾಮಿ!
    ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೋಕುಮಾರಸ್ವಾಮಿಯ ಆಚರಣೆ ಭಾರೀ ಸಡಗರದಿಂದಲೇ ನಡೆಯುತ್ತದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಕಾರನ್ನೇರಿ ಜೋಕುಮಾರನನ್ನು ಊರೂರು ತಿರುಗಾಡಿಸಲಾಯಿತು. ಅತ್ತ ವಿಜಯಪುರದಲ್ಲೂ ಸ್ವಾಮಿಯನ್ನು ಭಕ್ತಿ ಭಾವದಿಂದ ಪ್ರಾರ್ಥಿಸಿ ಸಮಸ್ಯೆಗಳನ್ನು ಅರಿಕೆ ಮಾಡಿಕೊಡಲಾಯಿತು.

    ಇದನ್ನೂ ಓದಿ: Vijayapura: ಬಟ್ಟೆ ಅಂಗಡಿಲಿ ಸಂಸ್ಕೃತ! ಮುಸ್ಲಿಂ ನೌಕರರ ಸಂಸ್ಕೃತ ಕೇಳೋಕೆ ಹಿತ

    ಜನರ ಐಕ್ಯತೆಯೇ ಜೋಕುಮಾರ!
    ಒಟ್ಟಿನಲ್ಲಿ ಜಾನಪದ ಆಚರಣೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ನಂಬಿಕೆಗೆ ಪಾತ್ರವಾಗಿದೆ. ಊರ ಮಂದಿಯೆಲ್ಲ ಸೇರಿ ಇಂತಹ ಆಚರಣೆಗಳನ್ನ ಆಚರಿಸ್ತಿರೋದ್ರಿಂದ ಐಕ್ಯತೆಯೂ ಕಾಣುವಂತಾಗಿದೆ.

    ವರದಿ: ಪ್ರಶಾಂತ ಹೂಗಾರ, ವಿಜಯಪುರ ಮತ್ತು ಎ.ಬಿ.ನಿಖಿಲ್ ಮುಂಡಗೋಡು
    Published by:ಗುರುಗಣೇಶ ಡಬ್ಗುಳಿ
    First published: