ಕೆಟ್ಟು ನಿಂತ ಬಸ್ಸು, ಚಳಿಯಲ್ಲಿ ನಡುಗುತ್ತಾ ರಸ್ತೆಯಲ್ಲೇ ನಡೆಯುತ್ತಿರೋ ಮಕ್ಕಳು. ಮಧ್ಯರಾತ್ರಿ ಬೇರೆ, ಮಾಡೋದಾದ್ರೂ ಏನು ಅಂತಾ ಟೆನ್ಶನ್ ಆಗಿದ್ದ ಟೀಚರ್ಸು. ಅಷ್ಟೊತ್ತಿಗೆ ದೇವರಂತೆ ಬಂದವರೇ ಪೊಲೀಸ್ ಆಫೀಸರ್. ಇನ್ನೇನು ದಿಕ್ಕೇ ತೋಚದಾದ ಮಕ್ಕಳು, ಶಿಕ್ಷಕರಿಗೆ ತುಂಬಿದ್ರು ಹುಮ್ಮಸ್ಸು. ಕೊನೆಗೂ ರಿಪೇರಿಯಾದ ಬಸ್ ಕಂಡು ಖುಷಿಪಡುತ್ತಾ ರಿಯಲ್ ಸಿಂಗಂಗೆ (Real Singham) ಹೇಳಿದ್ರು ಬಿಗ್ ಸೆಲ್ಯೂಟ್. ಜನಸ್ನೇಹಿ ಪೊಲೀಸ್ ಆಫೀಸರ್ (Police Officer) ಓರ್ವರು ಮಧ್ಯರಾತ್ರಿ ತೋರಿದ ಸಮಯ ಪ್ರಜ್ಞೆ ಮಕ್ಕಳು, ಶಿಕ್ಷಕರ ಸಂಕಟವನ್ನ ದೂರ ಮಾಡಿದೆ. ಇನ್ನೇನು ಪ್ರವಾಸ ಮುಗಿಸಿ ಹೊರಟವರು ಕಣ್ಣಲ್ಲಿದ್ದ ಆತಂಕವೂ ದೂರವಾಗಿದೆ.
ಯೆಸ್, ಗೋಕಾಕದ ಕೊಣ್ಣೂರು ಶಾಂತಿ ಸಾಗರ ಶಾಲೆಯ ವಿದ್ಯಾರ್ಥಿಗಳು ವಿಜಯಪುರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಹೀಗೆ ಬಂದವರೇ ಪ್ರವಾಸಿ ಸ್ಥಳಗಳಿಗೆಲ್ಲ ಸುತ್ತು ಹೊಡೆದು ಇನ್ನೇನು ಕತ್ತಲಾಗುತ್ತಲೇ ಊರಿಗೆ ಹೊರಟಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಬಸ್ ಕೆಟ್ಟು ನಿಂತಿತು. ಮಕ್ಕಳು, ಟೀಚರ್ಸು, ಡ್ರೈವರ್, ಕಂಡೆಕ್ಟರ್ ಗಳೆಲ್ಲ ಸೇರಿ ತಳ್ಳಿದ್ರು.
ಏನ್ ಮಾಡಿದ್ರೂ ಬಸ್ ರಿಪೇರಿ ಆಗಲೇ ಇಲ್ಲ!
ಉಹೂಂ.. ಬಸ್ ಮಿಸುಕಾಡಲೇ ಇಲ್ಲ. ಎಷ್ಟೇ ಪ್ರಯತ್ನಪಟ್ಟರೂ ಚಾಲು ಆಗಲೇ ಇಲ್ಲ. ಕೊನೆಗೆ ತಮ್ಮೆಲ್ಲ ಪ್ರಯತ್ನ ವೇಸ್ಟ್ ಎಂದು ಗೊತ್ತಾಗುತ್ತಲೇ ನಿರಾಶರಾದರು. ಇನ್ನೊಂದು ಕಡೆ ಸಮಯ ಮೀರುತ್ತಾ ಬಂದಿತ್ತು. ಅಷ್ಟೊತ್ತಿಗೆ ನೈಟ್ ಬೀಟ್ ಪೊಲೀಸರು ಎಂಟ್ರಿ ಕೊಟ್ಟರು ನೋಡಿ.
ಇದನ್ನೂ ಓದಿ: Tagaru Kalaga: ಬಾಗಲಕೋಟೆಯಲ್ಲಿ ಮೈನವಿರೇಳಿಸಿದ ಟಗರು ಕಾಳಗ! ವಿಡಿಯೋ ನೋಡಿ
ಆಲಮಟ್ಟಿ ಡ್ಯಾಂ ಬಳಿ ನಿಂತಿದ್ದ ಬಸ್ ಕಂಡ ನಿಡಗುಂದಿ ಪೊಲೀಸ್ ಠಾಣೆಯ ಪಿಎಸ್ಐ ಕಾಜು ವಾಲಿಕಾರ ಬಸ್ಸನ್ನ ಪರಿಶೀಲಿಸುತ್ತಲೇ ಚಳಿ, ಹಸಿವಿನಿಂದ ಕಂಗಾಲಾಗಿರುವ ಮಕ್ಕಳನ್ನ ಕಂಡಿದ್ದಾರೆ. ಪ್ರವಾಸಕ್ಕೆ ಬಂದ ಮಕ್ಕಳು ಸಂಕಷ್ಟಪಡುತ್ತಿದ್ದಾರೆ ಅಂತ ಗೊತ್ತಾಗುತ್ತಲೇ ತಡಮಾಡದೇ ರಿಪೇರಿ ಮಾಡಿಸಲು ಜನರನ್ನ ಕರೆಸಿದ್ದಾರೆ.
ಖುಷಿಯಿಂದ ಚಪ್ಪಾಳೆ ತಟ್ಟಿದ ಮಕ್ಕಳು
ಅಲ್ಲೇ ರಿಪೇರಿ ಮಾಡಿಸಿ ಕಾಜು ವಾಲಿಕಾರರೂ ಸೇರಿ ಎಲ್ರೂ ಕೂಡಿ ಬಸ್ಸನ್ನ ತಳ್ಳಿದ್ದಾರೆ. ಬಸ್ ಚಾಲು ಆಗುತ್ತಲೇ ಮಕ್ಕಳೆಲ್ಲ ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ. ಪೊಲೀಸ್ ಅಧಿಕಾರಿಯ ಸೇವೆಗೆ ಥ್ಯಾಂಕ್ಸ್ ಹೇಳುತ್ತಾ ಬಸ್ ನಲ್ಲಿದ್ದವರು ಹೊರಟರೆ, ಇತ್ತ ಪಿಎಸ್ಐ ಕಾಜು ವಾಲೀಕರ ತನ್ನ ನೈಟ್ ಬೀಟ್ ಮುಂದುವರೆಸಿದರು.
ಇದನ್ನೂ ಓದಿ: Haridra Thirtha: ಮಕ್ಕಳಾಗದ ಮಹಿಳೆಯರು ಇಲ್ಲೇ ಹರಕೆ ಸಲ್ಲಿಸ್ತಾರೆ; ಹರಿದ್ರಾ ತೀರ್ಥದ ವಿಶೇಷವಿದು
ಹೀಗೆ ಪ್ರವಾಸಕ್ಕೆಂದು ಬಂದ ಮಕ್ಕಳ ಸಂಕಷ್ಟ ಅರಿತು ಪಿಎಸ್ಐ ತೋರಿದ ಸಮಯ ಪ್ರಜ್ಞೆ, ಕರ್ತವ್ಯನಿಷ್ಠೆಗೆ ಬಿಗ್ ಸೆಲ್ಯೂಟ್ ಹೇಳಲೇಬೇಕು.
ವರದಿ: ಪ್ರಶಾಂತ ಹೂಗಾರ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ