• Home
  • »
  • News
  • »
  • vijayapura
  • »
  • Positive Story: ನ್ಯೂಸ್ 18 ಕನ್ನಡ ಡಿಜಿಟಲ್ ಫಲಶೃತಿ; ವಿಜಯಪುರದಲ್ಲಿ ಸೊಳ್ಳೆ ನಿರ್ಮೂಲನೆಗೆ ಪಣ

Positive Story: ನ್ಯೂಸ್ 18 ಕನ್ನಡ ಡಿಜಿಟಲ್ ಫಲಶೃತಿ; ವಿಜಯಪುರದಲ್ಲಿ ಸೊಳ್ಳೆ ನಿರ್ಮೂಲನೆಗೆ ಪಣ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ತೆಂಗಿನ ಚಿಪ್ಪು, ಬಕೆಟ್, ಕೊಡಪಾನಗಳನ್ನು ಹೊರಗಿಡದಂತೆ, ನೀರು ಸಂಗ್ರಹವಾಗದಂತೆ ಕಿವಿಮಾತು ಹೇಳಿದರು. ಜೊತೆಗೆ ಈ ಗ್ರಾಮ ಅನುಭವಿಸುತ್ತಿದ್ದ ಆತಂಕದ ಬಗ್ಗೆ ವರದಿ ಮಾಡಿದ ನ್ಯೂಸ್ 18 ಕನ್ನಡ ಡಿಜಿಟಲ್ ತಂಡವನ್ನು ಅಭಿನಂದಿಸಿದರು.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಚಿಕುನ್ ಗುನ್ಯಾ, ಡೆಂಗ್ಯೂ ಪೀಡಿತ ಗ್ರಾಮ ವಿಜಯಪುರದ ಅರಳದಿನ್ನಿ ಬಗ್ಗೆ ನ್ಯೂಸ್ 18 ಕನ್ನಡ ಡಿಜಿಟಲ್ ತಂಡ ವರದಿ ಮಾಡಿತ್ತು. ಸವಿವರವಾದ ವರದಿ ಮೂಲಕ ವಿಜಯಪುರ (Vijayapura) ಜಿಲ್ಲಾಡಳಿತದ ಗಮನ ಸೆಳೆದಿತ್ತು. ವರದಿ ಪ್ರಸಾರವಾದ ಒಂದೇ ದಿನಕ್ಕೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ. ಮಲೇರಿಯಾ ನಿಯಂತ್ರಣದ ಇಡೀ ತಂಡವೇ ಅಲ್ಲಿಗೆ ಆಗಮಿಸಿ ಸೊಳ್ಳೆ ಪರದೆ ಹಂಚಿದೆ. ಅರಳದಿನ್ನಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಸರ್ಕಾರಿ ವ್ಯಾನ್​ನಲ್ಲಿ ಸೊಳ್ಳೆ ಪರದೆಗಳನ್ನು ತಂದಿದ್ದರು. ಗ್ರಾಮದ ಪರಿಶೀಲನೆ ನಡೆಸಿ ಮಲೇರಿಯಾ ನಿಯಂತ್ರಣ (Malaria Control) ಘಟಕದ ಅಧಿಕಾರಿಗಳು ಸಾರ್ವಜನಿಕರಿಗೆ ರೋಗ ಹರಡುವ ಬಗ್ಗೆ ಮಾಹಿತಿ ನೀಡಿದರು. ಸ್ವಚ್ಛತೆಯನ್ನು ಪಾಲಿಸುವಂತೆ ತಿಳಿಹೇಳಿದರು.


    ತೆಂಗಿನ ಚಿಪ್ಪು, ಬಕೆಟ್, ಕೊಡಪಾನಗಳನ್ನು ಹೊರಗಿಡದಂತೆ, ನೀರು ಸಂಗ್ರಹವಾಗದಂತೆ ಕಿವಿಮಾತು ಹೇಳಿದರು. ಜೊತೆಗೆ ಈ ಗ್ರಾಮ ಅನುಭವಿಸುತ್ತಿದ್ದ ಆತಂಕದ ಬಗ್ಗೆ ವರದಿ ಮಾಡಿದ ನ್ಯೂಸ್ 18 ಕನ್ನಡ ಡಿಜಿಟಲ್ ತಂಡವನ್ನು ಅಭಿನಂದಿಸಿದರು.


    ಇದನ್ನೂ ಓದಿ: Vijayapura: ಚಿಕನ್​ಗುನ್ಯಾ, ಡೆಂಗ್ಯೂಗೆ ತತ್ತರಿಸಿದ ವಿಜಯಪುರದ ಗ್ರಾಮ!


    ಇಡೀ ಊರಲ್ಲಿ ಲಾರ್ವಾ ಸರ್ವೆ
    ಅಷ್ಟೇ ಅಲ್ಲ, ಅಧಿಕಾರಿಗಳು ಇಡೀ ಗ್ರಾಮದಲ್ಲಿರುವ ಮನೆಗಳಿಗೆ ಸೊಳ್ಳೆ ಪರದೆ ವಿತರಿಸಿದರು. ಖುದ್ದು ಆರೋಗ್ಯ ಸಿಬ್ಬಂದಿಗೆ ಮನೆಮನೆಗೆ ತೆರಳಿ ಸೊಳ್ಳೆ ಪರದೆ ಹಂಚಿ ಜಾಗೃತಿ ಮೂಡಿಸಿದರು. ಇನ್ನೊಂದೆಡೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಲಾರ್ವಾ ಸರ್ವೆಯನ್ನ ನಡೆಸಿದರು.


    ಸಮುದಾಯ ಆರೋಗ್ಯ ಕೇಂದ್ರದಿಂದ ಕ್ಲಿನಿಕ್ ಆರಂಭ
    ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇಡೀ ಗ್ರಾಮವನ್ನ ಸ್ವಚ್ಛಗೊಳಿಸಿದರು. ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಿಂದ ಈ ಸ್ಥಳದಲ್ಲಿಯೇ ಕ್ಲಿನಿಕ್ ಕೂಡಾ ತೆರೆದಿದ್ದು, ಇದೆಲ್ಲವೂ ನ್ಯೂಸ್ 18 ಕನ್ನಡ ಡಿಜಿಟಲ್ ತಂಡದ ಫಲಶೃತಿಯೇ ಸರಿ.


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    ಸದ್ಯ ಅರಳದಿನ್ನಿ ಗ್ರಾಮದಲ್ಲಿ ಅಲ್ಲಿನ ಕುಡಿಯುವ ನೀರಿನ ಜಲಸಂಗ್ರಹಾರವನ್ನು ಖಾಲಿ ಮಾಡಿಸಿ ಸ್ವಚ್ಛಗೊಳಿಸಲಾಗಿದೆ, ರಾಸಾಯನಿಕ ಪೌಡರ್ ಮತ್ತು ಫಾಗಿಂಗ್ ಸಿಂಪಡಿಸಲಾಗುತ್ತಿದೆ. ಒಟ್ಟಿನಲ್ಲಿ ತಲೆ, ಮೈಕೈ ನೋವು, ಜ್ವರದಿಂದ ಬಳಲುತ್ತಿದ್ದ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿಗಳು ಭರವಸೆ ಮೂಡಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: