Vijayapura: ರಾಷ್ಟ್ರೀಯ ಯುವಪಡೆಗೆ ಬೇಕಾಗಿದ್ದಾರೆ ಸ್ವಯಂ ಸೇವಕರು, ಹೀಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮೀಣ ಯುವ ಅಭಿವೃದ್ದಿ ಕೆಲಸಗಳನ್ನು ನಿರ್ವಹಿಸುವುದು, ಯುವ ಸಂಘಗಳನ್ನು ರಚಿಸುವುದು, ಮಾರ್ಗದರ್ಶನ ಮಾಡುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ಖುದ್ದಾಗಿ ಮಾಡಬೇಕಿದೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

    ವಿಜಯಪುರ: ಕೇಂದ್ರ ಸರ್ಕಾರದ ನೆಹರು ಯುವಕೇಂದ್ರ ವಿಜಯಪುರ ವತಿಯಿಂದ (Vijayapura News) 2023 - 24 ನೇ ಹಾಗೂ 2024 - 25 ನೇ ಸಾಲಿಗಾಗಿ ರಾಷ್ಟ್ರೀಯ ಯುವಪಡೆ ಸ್ವಯಂ ಸೇವಕರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಏನಿದು ರಾಷ್ಟ್ರೀಯ ಯುವಪಡೆ? (National Youth Force) ಏನೆಲ್ಲ ಕೆಲಸ ಇರುತ್ತೆ? ಎಲ್ಲ ವಿವರ ಇಲ್ಲಿದೆ ನೋಡಿ. 


    ವಿಜಯಪುರ ಜಿಲ್ಲೆಯ ನಾನಾ ತಾಲೂಕಿನ ಯುವಕರು ಮತ್ತು ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಯುವಪಡೆಗೆ ಮತ್ತಷ್ಟು ಬಲ ತುಂಬುವ ಹಿನ್ನೆಲೆಯಲ್ಲಿ ಅರ್ಹ ಯುವಕ - ಯುವತಿಯರು ಅರ್ಜಿ ಸಲ್ಲಿಸಿ ಇದರ ಪ್ರಯೋಜನೆ ಪಡೆಯಬಹುದಾಗಿದೆ.


    ಏನೆಲ್ಲ ಕೆಲಸ ಇರುತ್ತೆ?
    ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮೀಣ ಯುವ ಅಭಿವೃದ್ದಿ ಕೆಲಸಗಳನ್ನು ನಿರ್ವಹಿಸುವುದು, ಯುವ ಸಂಘಗಳನ್ನು ರಚಿಸುವುದು, ಮಾರ್ಗದರ್ಶನ ಮಾಡುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ಖುದ್ದಾಗಿ ಮಾಡಬೇಕಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.


    ತಿಂಗಳಿಗೆ ಎಷ್ಟು ಸಂಬಳ?
    ವಿಜಯಪುರ ಜಿಲ್ಲೆಯಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆ ಬಳಿಕ ನೇಮಕಗೊಂಡವರನ್ನು ರಾಷ್ಟ್ರೀಯ ಯುವಪಡೆ ನೇಮಿಸಿಕೊಳ್ಳಲಿದೆ. ಸ್ವಯಂ ಸೇವಕರ ಕಾರ್ಯವನ್ನ ನೋಡಿ ಮಾಸಿಕ 5 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ.


    ಹೀಗೆ ಅರ್ಜಿ ಸಲ್ಲಿಸಿ
    ನಿಗದಿತ ಅರ್ಜಿ ನಮೂನೆಯನ್ನು ವೆಬ್‍ಸೈಟ್‍ನಲ್ಲಿ ಪಡೆದು, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಒಂದು ಪ್ರತಿಯನ್ನು ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ ನೆಹರು ಯುವ ಕೇಂದ್ರ ಕಚೇರಿಗೆ ಸಲ್ಲಿಸಬೇಕು.


    ಇದನ್ನೂ ಓದಿ: Vijayapura: ವಿಜಯಪುರದ ಕೃಷಿಕರಿಗೆ ಮಹಾರಾಷ್ಟ್ರ ಕಾರ್ಮಿಕರ ನೆರವು!


    ಅರ್ಜಿ ಸಲ್ಲಿಸಲು ಇದೆ ಕೊನೆಯ ದಿನ
    ಅರ್ಜಿ ಸಲ್ಲಿಸಲು  09-03-2023 ಕೊನೆಯ ದಿನಾಂಕವಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ಹಳೆ ಜಿಲ್ಲಾ ಪಂಚಾಯತ್ ಕಚೇರಿ ಆವರಣ, ಗಗನ ಮಹಲ್ ಎದುರುಗಡೆ ವಿಜಯಪುರ ಈ ವಿಳಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.


    ಇದನ್ನೂ ಓದಿ: Vijayapura: ಇಂಡಿಗೆ ಬಂತು ರಾಷ್ಟ್ರೀಯ ಹೆದ್ದಾರಿ, ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತೆ ಈ ನ್ಯಾಷನಲ್ ಹೈವೇ?


    ಅಥವಾ ಕಚೇರಿಯ ದೂರವಾಣಿ ಸಂಖ್ಯೆ ದೂ: 08352 - 244130 ಈ ಸಂಖ್ಯೆಗೆ ಸಂಪರ್ಕಿಸುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: