Nag Panchami Vijayapura: ಎಳ್ಳು, ಹೋಳಿಗೆ, ಉಂಡೆ, ಅರಿಶಿನ ದಾರ! ವಿಜಯಪುರದಲ್ಲಿ ಹೀಗಿತ್ತು ನಾಗರ ಪಂಚಮಿ

ನೆನೆಗಡಲೆ, ಎಳ್ಳು, ಹೋಳಿಗೆ, ಉಂಡೆ.. ವಿವಿಧ ಖಾದ್ಯಗಳ ನೈವೇದ್ಯ ಸಮರ್ಪಿಸಿ ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ಅಪ್ಪನ ಪಾಲು, ಅವ್ವನ ಪಾಲು ಎಂದು ಪ್ರಾರ್ಥಿಸುತ್ತಾ ನಾಗಪ್ಪನಿಗೆ ಹಾಲೆರದರು. ವಿಜಯಪುರದಲ್ಲಿ ನಾಗರ ಪಂಚಮಿ ಹಬ್ಬದ ಆಚರಣೆಯನ್ನು ನೀವೇ ನೋಡಿ

ಹಬ್ಬ ಹಬ್ಬಾ..

"ಹಬ್ಬ ಹಬ್ಬಾ.."

  • Share this:
    ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಗರ ಪಂಚಮಿ ನಿಮಿತ್ತ ಜನರು ಮನೆಯಲ್ಲಿ ನಾಗಪ್ಪನಿಗೆ (Nag Panchami 2022) ಹಾಲು ಎರೆಯುವ ಮೂಲಕ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಮಹಿಳೆಯರು, ಮಕ್ಕಳು ಸೇರಿ ಸಂತಸದಿಂದ ಈ ಹಬ್ಬವನ್ನ ಆಚರಿಸುತ್ತಿದ್ದಾರೆ. ವಿಜಯಪುರದ (Vijayapura) ಗ್ರಾಮದ ಮನೆ, ಮನೆಗಳಲ್ಲಿ ಬೆಳಗ್ಗೆಯಿಂದ ಹಬ್ಬದ ವಾತಾವರಣ ಮನೆಮಾಡಿತ್ತು. ತಮ್ಮ ಬಡಾವಣೆಯ ಸಮೀದಲ್ಲಿರುವ ನಾಗದೇವರ ಕಟ್ಟೆಗೆ ತೆರಳಿ ನಾಗಪ್ಪನ ಮೂರ್ತಿಗೆ ಮಹಿಳೆಯರು ನೆನೆಗಡಲೆ, ಎಳ್ಳು, ಹೋಳಿಗೆ, ಉಂಡೆ ಸೇರಿದಂತೆ ವಿವಿಧ ಖಾದ್ಯಗಳ ನೈವೇದ್ಯ ಸಮರ್ಪಿಸಿ ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ಅಪ್ಪನ ಪಾಲು, ಅವ್ವನ ಪಾಲು ಎಂದು ಪ್ರಾರ್ಥಿಸುತ್ತಾ ನಾಗಪ್ಪನಿಗೆ ಹಾಲೆರದರು.

    ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಮುದ್ದೇಶ್ವರ ದೇವಸ್ಥಾನದ ಆವರಣದಲ್ಲಿರುವ ನಾಗಪ್ಪನ ಕಟ್ಟೆಯತ್ತ ನಸುಕಿನ ಜಾವದಲ್ಲಿಯೇ ಸರತಿಸಾಲಿನಲ್ಲಿ ನಿಂತುಕೊಂಡು ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

    ಇದನ್ನೂ ಓದಿ: Vijayapura: ಹೆಣ್ಮಕ್ಳೇ ಸ್ಟ್ರಾಂಗು ಗುರು! ಈ ವಿದ್ಯಾರ್ಥಿನಿಯರು ಡ್ರೋನ್​ನ್ನೂ ಹಾರಿಸ್ತಾರೆ!

    ಇನ್ನೊಂದೆಡೆ ಆಲಮಟ್ಟಿಯ ಊರ ಹೊರಗಿನ ನಾಗರ ಗುಡಿಗಳು, ಹುತ್ತಗಳ ಬಳಿ ತೆರಳಿ ಮನೆ ಮಂದಿ ತೆರಳಿ ಪೂಜೆ ಸಲ್ಲಿಸಿದರು. ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದಾಗಿ ಈ ಹಬ್ಬಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು.

    ಇದನ್ನೂ ಓದಿ: Fishery In Vijayapura: ವಿಜಯಪುರದಲ್ಲಿ ಮೀನುಗಾರಿಕೆ! ಯುವಕನಿಂದ ಲಕ್ಷ ಲಕ್ಷ ಸಂಪಾದನೆ!

    ಆದರೆ ಈ ವರ್ಷ ಯಾವುದೇ ಅಡ್ಡಿ ಅಡಚಣೆ ಇಲ್ಲದೆ ನಾಗಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಿ ಉಂಡಿ ಸಿಹಿ ಖಾದ್ಯಗಳನ್ನು ಜನರು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸಿದರು.

    ವರದಿ - ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
    Published by:guruganesh bhat
    First published: