Vijayapura Muharram: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ! ವೀಡಿಯೋ ನೋಡಿ

Muharram 2022: ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ತಿಂಗಳು. ಇದನ್ನು ಮುಸ್ಲಿಮರು ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ, ಇಲ್ಲೊಂದು ಕಡೆ ಹಿಂದೂಗಳೇ ಮೊಹರಂ ಆಚರಿಸುವ ಸಂಪ್ರದಾಯವಿದೆ. ಇದು ಎಲ್ಲಿ ಅನ್ನೋದಕ್ಕೆ ಈ ವರದಿ ನೋಡಿ.

ಅಲೈ ದೇವ್ರು

"ಅಲೈ ದೇವ್ರು"

 • Share this:
  ವಿಜಯಪುರ: ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ (Vijayapura) ನಿಡಗುಂದಿಯ ಮಣಗೂರು ಅತಿ ಚಿಕ್ಕ ಗ್ರಾಮ. ಸರಿ ಸುಮಾರು ಈ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆಯನ್ನ ಹೊಂದಿದ ಗ್ರಾಮ ಇದಾಗಿದೆ. ಈ ಹಿಂದೆ 2 ಸಾವಿರದ ಇಸವಿಯ ಪೂರ್ವದಲ್ಲಿ ಈ ಗ್ರಾಮ ಬಾಗಲಕೋಟೆ ಜಿಲ್ಲೆಗೆ (Bagalkote) ಒಳಪಟ್ಟಿತ್ತು, ಕೃಷ್ಣಾ ನದಿ (Krishna River) ಪ್ರವಾಹದಿಂದ ಮುಳುಗಡೆಗೊಂಡು ನಿಡಗುಂದಿಗೆ ಈ ಮಣಗೂರು ಗ್ರಾಮ ಸ್ಥಳಾಂತರಗೊಂಡಿದೆ.ಈ ಮನಗೂರು ಪುನರ್ವಸತಿಯಲ್ಲಿ ಅಸಲಿಗೆ ಮುಸ್ಲಿಂಮರಿಲ್ಲ (Muslim Community) ಈ ಗ್ರಾಮದಲ್ಲಿ ಇರುವವರು ಎಲ್ಲರೂ ಹಿಂದುಗಳೇ. ಅದು ಹೇಗೆ ಸಾಧ್ಯ ಎಂಬು ಪ್ರಶ್ನೆ ನಿಮ್ಮನ್ನ ಕಾಡುತ್ತಿರಬಹುದ ಅಲ್ವಾ? ಮುಂದೆ ಹೇಳತೀವಿ ನೋಡಿ..

  ಮೊಹರಂ ಆಚರಿಸುವ ಹಿಂದೂಗಳು
  ಈ ಗ್ರಾಮಸ್ಥರು ಮೂಲತ ಎಲ್ಲರೂ ರೈತ ಕುಟುಂಬದವರೆ ಎಂಬುವುದು ಸೋಜಿಗದ ಸಂಗತಿ. ಧರ್ಮ, ಜಾತಿ, ಭೇದವನ್ನ ಮರೆತು ನಾವೆಲ್ಲ ಸಮಾನರು, ನಾವೆಲ್ಲ ಒಂದೇ ಎಂದು ಬದುಕುತ್ತಿರುವ ಗ್ರಾಮವಿದು.ಈ ಗ್ರಾಮದಲ್ಲಿ ಸುಮಾರು 15 ವರ್ಷಕ್ಕೂ ಹೆಚ್ಚು ಕಾಲ ಪ್ರತಿ ವರ್ಷ ಮೊಹರಂ ಹಬ್ಬವನ್ನ ಹಿಂದುಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಮುಸ್ಲಿಂಮರಿಲ್ಲದಿದ್ದರು ಈ ಊರಲ್ಲಿ ಮೊಹರಂ ಆಚರಣೆ ಮಾಡುತ್ತಿರುವುದು ಈ ಗ್ರಾಮದ ವಿಶೇಷವು ಹೌದು.  ಅಲೈ ಎಂಬ ದೇವರು
  ಈ ಭಕ್ತರು ಸುಮಾರು ವರ್ಷಗಳಿಂದ ಈ ಮಸೀದಿಯಲ್ಲಿ ಅಲೈ ದೇವರುಗಳನ್ನ ಪ್ರತಿಷ್ಠಾಪನೆ ಮಾಡಿ ಎಲ್ಲರೂ ಒಂದೆಡೆ ಸೇರಿಕೊಂಡು ಈ ಮೊಹರಂ ಹಬ್ಬವನ್ನ 5 ದಿನಗಳ ಕಾಲ ಆಚರಣೆಯನ್ನ ಮಾಡುತ್ತ ಬಂದಿದ್ದಾರೆ.ಇಲ್ಲಿನ ಸಾವಿರಾರು ಗ್ರಾಮಸ್ಥರು ಗೋವಾ, ಮಹಾರಾಷ್ಟ್ರ, ಸೇರಿದಂತೆ ರಾಜ್ಯದ ಬೆಂಗಳೂರಿನಂತಹ ದೊಡ್ಡ ದೊಡ್ಡ ಪಟ್ಟಣಗಳಿಗೆ ಗೂಳೆ ಹೋಗಿರುತ್ತಾರೆ. ಈ ಮೊಹರಂ ಹಬ್ಬ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಎಲ್ಲರು ಗ್ರಾಮಗಳತ್ತ ಮುಖ ಮಾಡುತ್ತಾರೆ. ಈ ಹಬ್ಬವೇ ಇವರಿಗೆ ದೊಡ್ಡ ಹಬ್ಬವಾಗಿದೆ.

  ಮಸೀದಿಗೂ ಹಿಂದೂ ಅರ್ಚಕ
  ಮುಸ್ಲಿಮರಿಲ್ಲದಿದ್ದರಊ ಈ ಗ್ರಾಮದಲ್ಲಿ ಮಸೀದಿಯನ್ನ ಕಾಣಬಹುದು. ಇದೇ ಮಸಿದಿಯಲ್ಲಿ ಮುಸ್ಲಿಂ ದೇವರುಗಳಾದ ಅಲೈ ದೇವರುಗಳಿಗೆ ಹಿಂದುಗಳೆ ಅರ್ಚಕರಾಗಿದ್ದಾರೆ. 5 ದಿನಗಳ ಕಾಲ ಮಸೀದಿ ಆವರಣದಲ್ಲಿ ಒಂದೊಂದು ದಿನ ಒಂದೊಂದು ವಿಶೇಷವಿರುತ್ತದೆ. ಈ ಹಬ್ಬ 15 ದಿನ ಇರುವಾಗಲೇ ಇಲ್ಲಿನ ಉತ್ಸಾಹಿ ಯುವಕರು ಹೆಜ್ಜೆ ಕುಣಿತವನ್ನ ಅಭ್ಯಾಸ ಮಾಡುತ್ತಾರೆ. ದೇವರುಗಳು ಪ್ರತಿಷ್ಠಾಪನೆಗೊಂಡ ದಿನದಿಂದ ಹಿಡಿದು 5 ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳು ಹಿರಿಯರ ಸಮ್ಮುಖದಲ್ಲಿ ಜರುಗುತ್ತವೆ.

  ಹಬ್ಬದ ಸಡಗರ ಹೀಗಿರುತ್ತೆ
  ಕತ್ತಲು ಆವರಿಸುತ್ತಿದ್ದಂತೆ ಯುವಕರು ಪೈಬರ್ ಹಲಿಗೆ ಬಾರಿಸುತ್ತ ಮನೆಯಿಂದ ಮಸೀದಿಯತ್ತ ಆಗಮಿಸುತ್ತಾರೆ. ಹಲಿಗೆ ಶಬ್ದಕ್ಕೆ ತಕ್ಕಂತೆ ಯುವಕರು ಮೊಹರಂ ಕುಣಿತ, ಹುಲಿ ವೇಷ, ನೃತ್ಯವನ್ನ ಮಾಡುತ್ತ ಅಗ್ನಿ ಕುಂಡವನ್ನ ಸುತ್ತುವರೆಯುತ್ತಾರೆ.

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ಈ ದೇವರ ಪವಾಡಗಳನ್ನ ನಂಬುವ ಇವರು ಮನೆಗೆ ಒಬ್ಬರಂತೆ ಫಕೀರರಾಗುತ್ತಾರೆ. ಫಕೀರರೆಂದರೆ ಕೊರಳಲ್ಲಿ ಕೆಂಪನೆಯ ದಾರ, ಕೈಯಲ್ಲಿ ಲಾಡಿ ಇದನ್ನ ಧರಿಸಿಕೊಂಡು ದೇವರ ಜಪ ಮಾಡುತ್ತಾರೆ. ಕೋಮು ಸೌಹಾರ್ದತೆಯ ಮೊಹರಂ ಹಬ್ಬದಲ್ಲಿ ದೇವರ ಹೇಳಿಕೆಯನ್ನ ಕೇಳಿಕೊಳ್ಳಲು ಬಾಗಲಕೋಟೆ, ಬೀಳಗಿ, ವಿಜಯಪುರ, ಮುದ್ದೇಬಿಹಾಳ, ಗುಂಡನ ಪಲ್ಲೆ, ಕೊಲ್ಹಾರ, ಬಾಗೇವಾಡಿ ಸೇರಿದಂತೆ ಮುಂತಾದ ಗ್ರಾಮಗಳಿಂದ ದೇವರ ಭಕ್ತರುಗಳು ಬಂದು ದೇವರುಗಳಿಂದ ಹೇಳಿಕೆಯನ್ನ ಪಡೆಯುತ್ತಾರೆ. ಈ ವರ್ಷದಲ್ಲಿ ಆಗುವ ಕೆಲಸಗಳಿಗೆ ಈ ದೇವರುಗಳಿಂದ ಸೂಚನೆ ಸಿಗುತ್ತದೆ. ಇದನ್ನ ನಂಬುವ ಈ ಭಕ್ತರು ದೇವರಿಗೆ ನೈವೇದ್ಯವಾಗಿ ಸಕ್ಕರೆ, ಬೆಲ್ಲ ಸೇರಿದಂತೆ ಹೂಗಳನ್ನ ನೀಡಿ ಭಕ್ತಿ ಭಾವದಿಂದ ಬೇಡಿಕೊಳ್ಳುತ್ತಾರೆ.

  ಇದನ್ನೂ ಓದಿ: Vijayapura Success Story: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ! ವಿಜಯಪುರದ ಈ ರೈತನ ಸಕ್ಸಸ್ ಗುಟ್ಟೇನು?

  ಒಟ್ಟಿನಲ್ಲಿ ಮಣಗೂರಿಗೆ ಇದೇ ದೊಡ್ಡಹಬ್ಬವಾಗಿದೆ. ಗಂಧ ರಾತ್ರಿ, ಕತಾಲ್ ರಾತ್ರಿ, ಮತ್ತು ದಫನ್ ದಿನ ಗ್ರಾಮದ ಜನರೇ ಮಸೀದಿ ಮುಂದೆ ಹಾಜರಾಗುತ್ತಾರೆ. ಅಂದು ಸಂಜೆ ಎಲ್ಲ ದೇವರುಗಳನ್ನ ಹೊತ್ತುಕೊಂಡು ಹಾಡು ಹಾಡುತ್ತ ಕೃಷ್ಣಾ ನದಿಗೆ ತೆರಳಿ ದಫನ್ ಮಾಡುತ್ತಾರೆ. ಈ ಹೀಗೆ ಈ ಹಬ್ಬ ಸಂಪನ್ನಗೊಳ್ಳುತ್ತದೆ.

  ವರದಿ – ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ
  Published by:guruganesh bhat
  First published: