Raichur: ಮೊಹರಂಗೆ ಧರ್ಮ ಬೇಧವಿಲ್ಲ! ಬೇಕಾದ್ರೆ ಇಲ್ಲಿ ನೋಡಿ

ಉತ್ತರ ಕರ್ನಾಟಕ ಭಾಗದಲ್ಲಿ ಮೊಹರಂ ಮುಸ್ಲಿಮರಿಗಷ್ಟೇ ಮಹತ್ವದ ಹಬ್ಬವಲ್ಲ. ಬದಲಿಗೆ, ಹಿಂದೂಗಳು ಕೂಡಾ ಅಷ್ಟೇ ಭಯ ಭಕ್ತಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಅದಕ್ಕೊಂದು ಉದಾಹರಣೆ ರಾಯಚೂರಿನ ಈ ದರ್ಗಾ..

ಹಬ್ಬದ ಸಂಭ್ರಮ (ಸಂಗ್ರಹ ಚಿತ್ರ)

"ಹಬ್ಬದ ಸಂಭ್ರಮ (ಸಂಗ್ರಹ ಚಿತ್ರ)"

  • Share this:
    ರಾಯಚೂರು: ಸಂಭ್ರಮವೋ ಸಂಭ್ರಮ.. ಅದೇನು ಸಂಭ್ರಮ.. ಒಂದಡೆ ಹರಕೆ ತೀರಿಸಲು ಬರೋ ಭಕ್ತರು, ಇನ್ನೊಂದೆಡೆ ಕುಣಿದು ಕುಪ್ಪಳಿಸುವ ಯುವಕರು, ಸೇರಿದ ಅಷ್ಟೂ ಜನ್ರಿಗೆ ತಯಾರಾಗೋ ಬಿಸಿ ಬಿಸಿ ಭೋಜನ.. ಅಂದಹಾಗೆ ಇದು ಮೊಹರಂ ಹಬ್ಬದ ಝಲಕ್.. ರಾಯಚೂರಿನ (Raichur)ಲಿಂಗಸೂರು ತಾಲೂಕಿನ ಮುದಗಲ್ ಗೆ ಮೊಹರಂ ಹಬ್ಬ ಅನ್ನೋದು ಒಂಥರಾ ನಾಡಹಬ್ಬದಂತೆ.. ಮುಸ್ಲಿಮರ ಹಬ್ಬವಾದ್ರೂ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ.. ಮೊಹರಂ ಬಂತೆಂದ್ರೆ ಸಾಕು ಹಜರತ್ ಇಮಾಂ ಹುಸೇನ್ ಆಲಂ ದರ್ಗಾ ಸುತ್ತಮುತ್ತ ವಾರಗಳ ಕಾಲ ಹಬ್ಬದ ವಾತಾವರಣ..

    ಸಡಗರದ ಸಂಭ್ರಮದ ಮೊಹರಂ
    ಇಮಾಮ್ ಹುಸೇನ್ ದರ್ಗಾಕ್ಕೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ.. ಆಲಂ ತೆಗೆದುಕೊಂಡು ಬರುವ ಭಕ್ತರು ಅದನ್ನ ದರ್ಗಾಕ್ಕೆ ಸಮರ್ಪಿಸುತ್ತಾರೆ. ಯುವಕರಂತೂ ಹುಲಿವೇಷ, ಹೆಜ್ಜೆ ಕುಣಿತ ಹಾಗೂ ಮೊಹರಂ ರಿವಾಯತಿ ಹಾಡೋದು ನೋಡ್ಬೇಕು.. ವಿಶೇಷ ವೇಷ ಭೂಷಣಗಳು ಗಮನ ಸೆಳೆಯುತ್ತದೆ.

    ಇದನ್ನೂ ಓದಿ: Vijayapura Muharram: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ! ವೀಡಿಯೋ ನೋಡಿ

    ಇದೆಲ್ಲವೂ ಇಮಾಂ ಹುಸೇನ್ ಆಲಂ ರ ಸಂಪ್ರೀತಿಗಾಗಿ ಭಕ್ತರು ಮಾಡೋ ಕಸರತ್ತುಗಳು.. ದರ್ಗಾಕ್ಕೆ ತೆರಳಿ ದರ್ಶನ ಪಡೆಯುವ ಮೊದಲು ಅಲ್ಲಿದ್ದ ಇಮಾಮ್ ಹುಸೇನ್ ಆಲಂರ ಐತಿಹಾಸಿಕ ಬಾವಿಗೆ ತೆರಳಿ ಪಂಜೆ ತೊಳೆಯುವ ಸಂಪ್ರದಾಯವೂ ಇದೆ.

    ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

    ಭೋಜನ ವ್ಯವಸ್ಥೆ
    ಇನ್ನು ಅಲ್ಲಿ ಸೇರೋ ಸಾವಿರಾರು ಭಕ್ತರಿಗೂ ಜಾತಿ, ಧರ್ಮ ಬೇಧ ತೋರದೆ ಭೋಜನ ಇರುತ್ತದೆ. ಅದಕ್ಕಾಗಿಯೇ ಒಂದು ತಂಡ ಅವಿರತವಾಗಿ ಶ್ರಮಿಸುತ್ತದೆ.. ಒಟ್ಟಿನಲ್ಲಿ ರಾಯಚೂರಿನಲ್ಲಿ ಮೊಹರಂ ಬಂತಂದ್ರೆ ಸಾಕು ಹಿಂದೂ, ಮುಸ್ಲಿಂ ಅನ್ನದೇ ಸಂಭ್ರಮಿಸಲು ಒಂದು ಹಬ್ಬವಿದ್ದಂತೆ.
    Published by:guruganesh bhat
    First published: