• Home
 • »
 • News
 • »
 • vijayapura
 • »
 • Positive Story: ಹೇರ್ ಕಟಿಂಗ್ ಸಲೂನ್​ನಲ್ಲಿ ಲೈಬ್ರರಿ! ಇದು ಕನ್ನಡಾಭಿಮಾನಿಯ ವಿಶಿಷ್ಟ ಪ್ರಯತ್ನ

Positive Story: ಹೇರ್ ಕಟಿಂಗ್ ಸಲೂನ್​ನಲ್ಲಿ ಲೈಬ್ರರಿ! ಇದು ಕನ್ನಡಾಭಿಮಾನಿಯ ವಿಶಿಷ್ಟ ಪ್ರಯತ್ನ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಗ್ರಾಹಕರು ಮೊಬೈಲ್​ನಲ್ಲಿ ಸೋಶಿಯಲ್ ಮೀಡಿಯಾ ಅಂತಾ ಕಾಲ ಕಳೆಯುತ್ತಾರೆ. ಅದಕ್ಕಿಂತ ಪುಸ್ತಕ ಓದೋದು ಬೆಸ್ಟ್ ಅಂತ ಕನ್ನಡ ಪುಸ್ತಕಗಳನ್ನಿರಿಸಿ ಸಾಹಿತ್ಯದ ಒಲವು ಮೂಡಿಸೋದೆ ಸೋಮು ಹಡಪದ ಅವರ ಪ್ಲ್ಯಾನ್.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ಇದೇನಪ್ಪ! ಹೇರ್ ಕಟಿಂಗ್ ಮಾಡಿಸೋಕೆ ಬಂದವರ ಕೈಯ್ಯಲ್ಲಿ ಪುಸ್ತಕ! ಕಾಯ್ತಿರೋರ ಕೈಯ್ಯಲ್ಲೂ ಪುಸ್ತಕ. ಇವ್ರೇನಾದ್ರೂ ಎಕ್ಸಾಂಗೆ ರೆಡಿ ಆಗ್ತಿದ್ದಾರೆ ಅಂದ್ಕೊಂಡ್ರಾ? ಹಾಗೇನಿಲ್ಲ ಬಿಡ್ರಿ, ಈ ಸಲೂನ್​ಗೆ ಬಂದ್ರೆ ನೀವೂ ಪುಸ್ತಕ ಓದೋದು ಗ್ಯಾರಂಟಿ. ಹಾಗಂತ ನೀವೇನೂ ಮನೆಯಿಂದ ಪುಸ್ತಕ ಹೊತ್ತು ತರಬೇಕಿಲ್ಲ, ಈ ಸಲೂನ್ ಹೊಕ್ಕರೆ ಎಲ್ಲವೂ ಅಲ್ಲೇ ಸಿಗುತ್ತೆ. ಇದು ನೋಡೋಕೆ ಸಲೂನ್ ಇರಬಹುದು. ಆದರೆ ಅದರ ಜೊತೆಗೆ ಮಿನಿ ಲೈಬ್ರರಿ (Mini Library In Hair Cutting Salon) ಹೊಂದಿರೋ ಸ್ಪೆಷಲ್ ಸಲೂನ್. ವಿಜಯಪುರದ (Vijayapura News) ದೇವರಹಿಪ್ಪರಗಿ ಪಟ್ಟಣದಲ್ಲಿ ಈ ಮಿನಿ ಲೈಬ್ರರಿ ಸಲೂನ್ ಕಾಣಬಹುದಾಗಿದೆ.


  ಈ ಸಲೂನ್ ಶಾಪಿನ ಓನರ್ ಸೋಮು ಹಡಪದ ಪಕ್ಕಾ ಸಾಹಿತ್ಯ ಪ್ರೇಮಿ. ಜೊತೆಗೆ ಅತ್ಯಂತ ಬ್ಯುಸಿ ಇರೋ ಸಲೂನಿನ ಮಾಲೀಕ ಕೂಡಾ. ಇಲ್ಲಿಗೆ ಆಗಮಿಸೋ ಗ್ರಾಹಕರು ಬಹುತೇಕ ಕಾಯಬೇಕಾಗಿ ಬರ್ತದೆ. ಇಂತಹ ಟೈಮಲ್ಲಿ ಗ್ರಾಹಕರು ಮೊಬೈಲ್​ನಲ್ಲಿ ಸೋಶಿಯಲ್ ಮೀಡಿಯಾ ಅಂತಾ ಕಾಲ ಕಳೆಯುತ್ತಾರೆ. ಅದಕ್ಕಿಂತ ಪುಸ್ತಕ ಓದೋದು ಬೆಸ್ಟ್ ಅಂತ ಕನ್ನಡ ಪುಸ್ತಕಗಳನ್ನಿರಿಸಿ ಸಾಹಿತ್ಯದ ಒಲವು ಮೂಡಿಸೋದೆ ಸೋಮು ಹಡಪದ ಅವರ ಪ್ಲ್ಯಾನ್.


  ಇದನ್ನೂ ಓದಿ: Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!


  ಮೊಬೈಲ್ ಬದಲಿಗೆ ಕಥೆ, ಕವಿತೆ!
  ಸೋಮು ಹಡಪದರ ಅಭಿಲಾಷೆಯಂತೆ ಇಲ್ಲಿಗೆ ಆಗಮಿಸೋ ಗ್ರಾಹಕರು ಮೊಬೈಲ್ ಬದಲು ಪುಸ್ತಕ ಓದಿ ಜ್ಞಾನ ವೃದ್ಧಿಸಿಕೊಳ್ಳುತ್ತಿದ್ದಾರೆ. ಕಥೆ, ಕವಿತೆ, ಕಾದಂಬರಿ, ಪ್ರಚಲಿತ ಘಟನೆಗಳ ಪುಸ್ತಕಗಳನ್ನು ಓದುತ್ತಾ ತಮ್ಮ ಸರದಿ ಕಾಯುತ್ತಾರೆ. ಸಲೂನ್ ಓನರ್ ಸಾಹಿತ್ಯ ಸೇವೆಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಬಳಗವೂ ಪುಸ್ತಕ ನೀಡಿ ಪ್ರೋತ್ಸಾಹಿಸುತ್ತಿದೆ.


  ಇದನ್ನೂ ಓದಿ: Bara Kaman: ಬಾರಾ ಕಮಾನ್​ ಎಷ್ಟು ಸಖತ್ ಗೊತ್ತಾ? ಇಲ್ಲಿದೆ ನೋಡಿ


  ಹ್ಯಾಟ್ಸಾಪ್ ಹೇಳಲೇಬೇಕು!
  ಒಟ್ಟಿನಲ್ಲಿ ಸಲೂನ್​ಗೆಂದು ಬರೋ ಗ್ರಾಹಕರ ಕೈಗೆ ಕನ್ನಡ ಪುಸ್ತಕಗಳನ್ನು ನೀಡುತ್ತಾ ಓದಿನ ಆಸಕ್ತಿ ಮೂಡಿಸುತ್ತಿರೋ ಸಲೂನ್ ಓನರ್​ಗೆ ಹ್ಯಾಟ್ಸಾಪ್ ಹೇಳಲೇಬೇಕು.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: