ವಿಜಯಪುರ: ಜಮೀನಿನ ಮಧ್ಯೆ ಇರೋ ಬೇವಿನ ಮರದಲ್ಲಿ (Neem Tree) ತೊಟ್ಟಿಕ್ಕುತ್ತಿರುವ ಹಾಲು. ಜನರ ನಂಬಿಕೆ, ಆರಾಧನೆಗೆ ಪಾತ್ರವಾಗಿದೆ ನೋಡಿ ಈ ಮರ. ಜನ ಮರುಳೋ, ಜಾತ್ರೆ ಮರುಳೋ (Viral News) ಪವಾಡನೋ, ಮೌಢ್ಯವೋ ಒಟ್ನಲ್ಲಿ ಜನರ ಗಮನ ಸೆಳೆದಿದೆ ಈ ಹಾಲು ಸುರಿಸುತ್ತಿರೋ ಕಹಿ ಬೇವಿನ ಮರ.
ಹೌದು, ಇಂತಹದ್ದೊಂದು ದೃಶ್ಯ ವಿಜಯಪುರದ ಮನೂಳಿ ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಕಂಡುಬರುತ್ತಿದೆ.
ದೇವರ ಪವಾಡ ಎಂದೇ ನಂಬಿದ ಸ್ಥಳೀಯರು
ಈ ವಿದ್ಯಮಾನ ದೇವರ ಪವಾಡವೆಂದು ನಂಬಿರುವ ಜನರು ಇಲ್ಲಿಗೆ ಬಂದು ಭಕ್ತಿ ಭಾವದಿಂದ ಕೈ ಮುಗಿಯುತ್ತಿದ್ದಾರೆ. ಕಹಿ ಬೇವಿನ ಮರವೇ ಹಾಲು ನೀಡ್ತಿದೆ ಎಂದು ಜನ ನಂಬಿಕೊಂಡಿದ್ದಾರೆ. ಹಾಗಾಗಿ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ ದೇವರ ನೆನೆಯುತ್ತಿದ್ದಾರೆ. ಜೊತೆಗೆ ಇದನ್ನ ಪವಾಡ ಅನ್ನೋ ರೀತೀಲಿ ನಂಬಿದ್ದಾರೆ.
ಇದನ್ನೂ ಓದಿ: Viral Video: 5 ಲಕ್ಷಕ್ಕೆ ಖರೀದಿಸಿದ್ದ ಎತ್ತು 14 ಲಕ್ಷಕ್ಕೆ ಮಾರಾಟ!
ಸಣ್ಣ ರಂದ್ರದಿಂದ ಜಿನುಗುತ್ತಿರೋ ಹಾಲಿನಂತಹ ದ್ರವ
ಲಾಲಸಾ ಕೊರಬು ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ಈ ಬೇವಿನ ಮರವಿದೆ. ಆರಂಭದ ದಿನಗಳಲ್ಲಿ ಇಲ್ಲಿ ಜನರ ಜಾತ್ರೆಯೇ ಕಾಣುತ್ತಿತ್ತು. ಕೆಲವರು ಸುಮಾರು ದೂರ ನಡೆದು ಬಂದು ಮರಕ್ಕೆ ಪೂಜೆ ಸಲ್ಲಿಸುತ್ತಾರೆ. ಬೆಳಗಾದರೆ ಸಾಕು, ಈ ದೃಶ್ಯ ಕಾಣಲು ಜನರು ಇತ್ತ ಆಗಮಿಸುತ್ತಾರೆ. ಈ ಮರದ ಮೇಲೆ ಒಂದು ಸಣ್ಣ ರಂಧ್ರವಿದ್ದು, ನೊರೆ ನೊರೆಯಾಗಿ ಹಾಲಿನಂತೆ ಜಿನುಗುತ್ತಿದೆ.
ಇದನ್ನೂ ಓದಿ: Bagalkote: ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುತ್ತಾ ವಿಠ್ಠಲನ ಸನ್ನಿಧಾನಕ್ಕೆ ಹೊರಟ ಭಕ್ತ!
ವೈಜ್ಞಾನಿಕ ಕಾರಣವಾದ್ರೂ ಏನು?
ಒಟ್ಟಿನಲ್ಲಿ ಜನ ಮರುಳೋ, ಜಾತ್ರೆ ಮರುಳೋ ಅನ್ನೋ ಹಾಗೆ ಹಾಲಿನಂತೆ ದ್ರವ ಸುರಿಸುವ ಬೇವಿನ ಮರ ಈಗ ಜನರ ನಂಬಿಕೆಗೆ ಪಾತ್ರವಾಗಿದೆ. ಈ ವಿದ್ಯಮಾನದ ಹಿಂದಿರುವ ವೈಜ್ಞಾನಿಕ ಕಾರಣ ಏನೇ ಇದ್ದರೂ ಜನರ ನಂಬಿಕೆಗೆ ಮಾತ್ರ ಇದು ಪವಾಡದಂತೆ ಕಾಣುತ್ತಿರುವುದು ಸುಳ್ಳಲ್ಲ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ