ವಿಜಯಪುರ: ಬೀಗ ಹಾಕಿರೋ ಮನೆಗಳು, ಬಿಕೋ ಎನ್ನುತ್ತಿರೋ ಬೀದಿಗಳು. ಲಾಕ್ಡೌನ್ ರೀತಿ ಬಂದ್ ಆಗಿದ್ದ ಗಲ್ಲಿಗಳು ಈಗ ಮತ್ತೆ ಕಾರ್ಯ ಚಟುವಟಿಕೆಗೆ ತೆರೆದುಕೊಂಡಿದೆ. ಜನರ ಆಟ, ಓಡಾಟಗಳು ಕಾಣಿಸುತ್ತಿವೆ. ಇದಕ್ಕೆಲ್ಲ ಕಾರಣವೇ ವಿಧಾನಸಭೆ ಚುನಾವಣೆ (Karnataka Elections 2023).
ಗುಳೆ ಹೋಗಿದ್ದ ಕಾರ್ಮಿಕರು
ಯೆಸ್, ಇದು ವಿಜಯಪುರದ ಗಲ್ಲಿಗಳ ಚಿತ್ರಣ. ಗುಳೆ ಹೊರಟು ಹೋಗಿದ್ದ ಇಲ್ಲಿನ ತಾಂಡಾ ನಿವಾಸಿಗಳು ಮರಳಿ ಮನೆ ಸೇರುತ್ತಿದ್ದಾರೆ. ಕೆಲಸ, ಬದುಕಿಗಾಗಿ ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಇನ್ನೂ ಕೆಲವರು ಬೆಂಗಳೂರಿಗೆ ಕೂಲಿ ಕೆಲಸಕ್ಕಾಗಿ ಗುಳೆ ಹೊರಟು ಹೋಗಿದ್ದರು. ಹೀಗಾಗಿ ವಿಜಯಪುರದ ತಾಂಡಾಗಳಲ್ಲಿ ಮನೆಗಳಿದ್ರು ಮನೆ ಮಂದಿಗಳಿಲ್ಲದೇ ಇಡೀ ಬೀದಿಯೇ ಬಿಕೋ ಅನ್ನೋ ಪರಿಸ್ಥಿತಿ ಇತ್ತು.
ಮತದಾನ ಜಾಗೃತಿ ಎಫೆಕ್ಟ್!
ಆದ್ರೀಗ ವಿಜಯಪುರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಮತದಾನ ಜಾಗೃತಿ ಮೂಡಿಸುತ್ತಿದ್ದು, ಗುಳೆ ಹೋಗಿದ್ದವರನ್ನು ವಾಪಸ್ ಚುನಾವಣೆಗಾಗಿ ಕರೆಸಿಕೊಳ್ಳುತ್ತಿರುವುದು ವಿಶೇಷ. ಹೀಗೆ ವಾಪಸ್ ತವರಿಗೆ ಬಂದ ಕಾರ್ಮಿಕರಿಗೆ ಮತದಾನದ ಕುರಿತ ಜಾಗೃತಿ ಮೂಡಿಸಲಾಗುತ್ತಿದೆ. ಅವರನ್ನ ಒಂದುಗೂಡಿಸಿ ಸರಳ ರೀತಿಯ ಭಾಷೆಯಲ್ಲಿ ಬೀದಿ ನಾಟಕ, ಭಾಷಣದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾ ಸ್ವೀಪ್ ಸಮಿತಿ ನಡೆಸುತ್ತಿದೆ.
ಇದನ್ನೂ ಓದಿ: Bagalkote Anjaneya Temple: ತಿರುಪತಿ ತಿಮ್ಮಪ್ಪನ ಪ್ರತಿರೂಪ ಈ ಹನುಮಂತ!
ತಾಂಡಾ ನಿವಾಸಿಗಳು
ಇನ್ನು ಚುನಾವಣೆ ಮುಗಿದ ಮೇಲೆ ಮತ್ತೆ ಗುಳೆ ಹೊರಡಲಿರುವ ಈ ಕುಟುಂಬಗಳಿಗೆ ಸ್ವೀಪ್ ಸಮಿತಿ ಚುನಾವಣೆಯಲ್ಲಿ ಭಾಗವಹಿಸುವಂತೆ ಮನವೊಲಿಸುತ್ತಿದೆ. ವಿಶೇಷವಾಗಿ ಭೂತನಾಳ ತಾಂಡಾ, ನಿಡಗುಂದಿ ತಾಂಡಾ, ಸೀತಿಮನಿ ತಾಂಡಾ, ಹುಲ್ಲೂರ ತಾಂಡಾ, ಕೂಡಗಿ ತಾಂಡಾ ಸೇರಿದಂತೆ ಹಲವಾರು ಪ್ರದೇಶಗಳ ಜನರು ವಾಪಸ್ ಆಗುತ್ತಿದ್ದಾರೆ.
ಸ್ವೀಪ್ ಮಾದರಿ ಕೆಲಸ
ಪ್ರತಿ ಚುನಾವಣೆಯಲ್ಲಿ ಮತದಾನ ಶೇಕಡಾ 70 ರಷ್ಟು ಮತದಾನವಾಗುತ್ತಿದ್ದು, ಇದನ್ನ ಮನಗಂಡ ಜಿಲ್ಲಾಡಳಿತ ಈ ಬಾರಿಯ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಮಾಡಿಸಲು ಸಂಕಲ್ಪ ತೊಟ್ಟಿದೆ.
ಇದನ್ನೂ ಓದಿ: Success Story: ವಿಜಯಪುರದಲ್ಲಿ ರಾಜಸ್ಥಾನಿ ಮಹಿಳೆಯ ಸಕ್ಸಸ್, ಚಿಪ್ಸ್-ಹಪ್ಪಳ ಮಾರ್ಕೆಟ್ಗೆ ಇವ್ರೇ ಕ್ವೀನ್!
ಹೀಗಾಗಿ ನಿರಂತರವಾಗಿ ಹಾಡು, ರಂಗೋಲಿ, ಸಂಗೀತ, ನಾಟಕ, ಜಾಥಾ ಸೇರಿದಂತೆ ವಿನೂತನವಾಗಿ ಜಾಗೃತಿಯನ್ನ ಮೂಡಿಸುತ್ತಿರುವುದು ಗುಳೆ ಹೋದವರನ್ನ ವಾಪಸ್ ಬರುವಂತೆ ಮಾಡುತ್ತಿದೆ. ಸ್ವೀಪ್ ತಂಡ ಈ ಕೆಲಸ ನಿಜಕ್ಕೂ ಮಾದರಿ ಎನಿಸಿಕೊಳ್ಳುತ್ತಿದೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ