ದೇವಸ್ಥಾನದ ಮುಂದಿರುವ ಸಾಲು ಮಂಟಪ. ಅಲ್ಲೇ ಸಾಲಾಗಿ ಕುಳಿತಿರೋ ಹತ್ತಾರು ಮಹಿಳೆಯರು. ಬರ್ರೀ ಸರss, ಅಣ್ಣಾರ ಬರ್ರೀ, ಅಕ್ಕಾರ ಬನ್ನರ್ರೀ.. ಬಿಳಿ ಜೋಳದ ರೊಟ್ಟಿ, ಬದನಿಕಾಯಿ ಪಲ್ಲೆ, ಕಾಳು ಪಲ್ಲೆ ಊಟಾ ಮಾಡಿ ಹೋಗಬರ್ರಿ.. ಬರ್ರೀ ಜಲ್ದಿ ಹೀಗೆ ಕರೆಯುತ್ತಿರುವ ಮಹಿಳೆಯರೇ ಸಾಲು ಮಂಟಪದ ಅನ್ನಪೂರ್ಣೆಯರು! ಬಾಗಲಕೋಟೆ ಜಿಲ್ಲೆಯ (Bagalakot News) ಬಾದಾಮಿ ತಾಲೂಕಿನ ಬನಶಂಕರಿ ದೇವಿಯ (Badami Banashankari Temple) ದರ್ಶನದ ಜೊತೆಗೆ ಈ ಅನ್ನಪೂರ್ಣೆಯರ ಭೇಟಿಯನ್ನೂ ನೀವು ಮಾಡಲೇಬೇಕು.
ಕಳೆದ 40 ವರ್ಷಗಳಿಂದ ಬನಶಂಕರಿ ದೇವಸ್ಥಾನ ಮುಂದಿರುವ ಸಾಲು ಮಂಟಪದಲ್ಲಿ ಪ್ರವಾಸಿಗರಿಗೆ, ಭಕ್ತರಿಗೆ ಊಟ ನೀಡ್ತಿರೋ ಇವರು ಅನ್ನಪೂರ್ಣೇಶ್ವರಿಯಂದೇ ಫೇಮಸ್
ಕಡಿಮೆ ದರದಲ್ಲಿ ಪ್ರವಾಸಿಗರ ಹಸಿವು ನೀಗುತ್ತೆ!
ಹೌದು, ಬನಶಂಕರಿ ದೇವಸ್ಥಾನಕ್ಕೆ ಹೋದ್ರೆ ಸಾಕು, ಮಹಿಳೆಯರು ಬುಟ್ಟಿ ಹೊತ್ತು ಸಂಚರಿಸೋ ದೃಶ್ಯ ನಿಮಗೆ ಕಾಣಿಸುತ್ತೆ. ಕಡಿಮೆ ದರದಲ್ಲಿ ಪ್ರವಾಸಿಗರ ಹಸಿವು ನೀಗಿಸುವ ಇವರು ಅನ್ನಪೂರ್ಣೇಶ್ವರಿ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ.
ಬೆಳಗ್ಗೆ ನಾಲ್ಕಕ್ಕೇ ಎದ್ದು ಹಲವು ತಿಂಡಿ ತಯಾರಿ!
ಬಾದಾಮಿ ತಾಲೂಕಿನ ನಂದಿಕೇಶ್ವರ, ಢಾನಕ ಶಿರೂರ, ಚೊಳಚಗುಡ್ಡ, ಬಾದಾಮಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರೇ ಹೀಗೆ ಬದುಕು ಕಟ್ಟಿಕೊಂಡವರು. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಸಜ್ಜೆರೊಟ್ಟಿ, ಬಿಳಿಜೋಳದ ರೊಟ್ಟಿ, ಕೆಂಪುಚಟ್ನಿ, ಕೆನೆ ಮೊಸರು, ಹೆಸರುಕಾಳುಪಲ್ಯೆ, ಬದನೆಕಾಯಿ ಪಲ್ಯ ಮಾಡ್ತಾರೆ.
ಇದನ್ನೂ ಓದಿ: Charaga Habba: ಉತ್ತರ ಕರ್ನಾಟಕದ ಈ ಹಬ್ಬಕ್ಕಿದೆಯಂತೆ ಮಹಾಭಾರತದ ಲಿಂಕ್!
ಹಲವು ಬಗೆಯ ಊಟ ಸಿಗುತ್ತೆ
ದೇವಸ್ಥಾನಕ್ಕೆ ಬಂದು ಕೇವಲ 20 ರೂಪಾಯಿಗೆ ಎರಡು ರೊಟ್ಟಿ ನಾಲ್ಕೈದು ತರಹದ ಪಲ್ಯವನ್ನ ಮಾರಾಟ ಮಾಡ್ತಾರೆ. ಅನ್ನ, ಸಾಂಬಾರ್, ಮಜ್ಜಿಗೆ ಬೇಕಾದ್ರೆ ಹತ್ತು ರೂಪಾಯಿ ಹೆಚ್ಚಿಗೆ ಪಡೆಯುತ್ತಾರೆ. 30 ರೂಪಾಯಿ ನೀಡಿದ್ರೆ ಸಾಕು ಹೊಟ್ಟೆ ತುಂಬಾ ಮನೆ ಊಟ ಇಲ್ಲಿ ಸಿಗುತ್ತೆ.
ಇದನ್ನೂ ಓದಿ: Vijayapura: ಮನೆಯ ಹಿರಿಯರಿಗೆ ಜೀವ ತರಿಸುವ ಬೆಚ್ಚಗಿನ ಕೌದಿ! ಚಳಿಗಾಲದಲ್ಲಿ ಇದು ಬಾರೀ ಬೆಸ್ಟ್
ಒಟ್ಟಿನಲ್ಲಿ ಬನಶಂಕರಿ ದೇಗುಲಕ್ಕೆ ಬರುವವರ ಪಾಲಿಗೆ ಈ ಮಹಿಳೆಯರೇ ಸಾಕ್ಷಾತ್ ಅನ್ನಪೂರ್ಣೆಯರಾಗಿದ್ದಾರೆ. ಹಸಿವು ತಣಿಸುವ ಜೊತೆ ಉತ್ತರ ಕರ್ನಾಟಕದ ಆಹಾರ ಪದ್ಧತಿಯನ್ನೂ ಈ ಬನಶಂಕರಿಯ ಅನ್ನಪೂರ್ಣೆಯರು ಪರಿಚಯಿಸ್ತಿರೋದು ವಿಶೇಷವೇ ಸರಿ. ನೀವೇನಾದ್ರೂ ಈ ಸ್ಥಳಕ್ಕೆ ಬಂದ್ರೆ ಅನ್ನಪೂರ್ಣೇಶ್ವರಿಯ ಕೈತುತ್ತು ಸವಿಯೋಕೆ ಮರೆಯಬೇಡಿ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ