• Home
  • »
  • News
  • »
  • vijayapura
  • »
  • Mantralaya: ಮಂತ್ರಾಲಯಕ್ಕೆ ಪಾದಯಾತ್ರೆ, ನೀವೂ ಪಾಲ್ಗೊಳ್ಳಲು ಇಲ್ಲಿದೆ ಅವಕಾಶ

Mantralaya: ಮಂತ್ರಾಲಯಕ್ಕೆ ಪಾದಯಾತ್ರೆ, ನೀವೂ ಪಾಲ್ಗೊಳ್ಳಲು ಇಲ್ಲಿದೆ ಅವಕಾಶ

ಮಂತ್ರಾಲಯ ಶ್ರೀ ಗುರು ರಾಘವೇಂದ್ರರು

ಮಂತ್ರಾಲಯ ಶ್ರೀ ಗುರು ರಾಘವೇಂದ್ರರು

ನಾಲ್ಕು ದಿನಗಳ ಕಾಲ ಪಾದಯಾತ್ರೆ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಪಡೆಯಬೇಕೆಂಬುವವರು ಆಲಮಟ್ಟಿಯ ಮಂತ್ರಾಲಯ ಪಾದಯಾತ್ರೆ ಸಮಿತಿಯ ಮುಖ್ಯಸ್ಥರಲ್ಲಿ ಇಂದೇ ತಮ್ಮ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದಾಗಿದೆ.

  • Share this:

    ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಇಲ್ಲಿಯ ಗುರು ರಾಘವೇಂದ್ರ ಸ್ವಾಮಿಗಳ ಪಾದಯಾತ್ರಾ ಸಮಿತಿ ವತಿಯಿಂದ ಆಲಮಟ್ಟಿಯಿಂದ ಮಂತ್ರಾಲಯಕ್ಕೆ 26 ನೇ ವರ್ಷದ ಪಾದಯಾತ್ರೆ (Mantralaya Padayatra) ಕೈಗೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಈ ಪಾದಯಾತ್ರೆ (Padyatra To Mantaralaya) ಹಮ್ಮಿಕೊಳ್ಳಲಾಗಿದ್ದು ಇದೇ ಜನವರಿ 14 ರಿಂದ ಆರಂಭಗೊಳ್ಳಲಿದೆ.


    ಕಳೆದ 25 ವರ್ಷಗಳಿಂದ ಗುರು ರಾಘವೇಂದ್ರ ಸ್ವಾಮಿಗಳ ಪಾದಯಾತ್ರಾ ಸಮಿತಿ ಮಂತ್ರಾಲಯಕ್ಕೆ ಪಾದಯಾತ್ರೆ ಏರ್ಪಡಿಸಿ, ಈ ಭಾಗದ ಪಾದಯಾತ್ರೆಗಳಿಗೆ ವಸತಿ, ಊಟ, ನೀರು, ಮಜ್ಜಿಗೆ, ಸೇರಿದಂತೆ ತಂಪು ಪಾನೀಯಗಳ ಸೌಲಭ್ಯಗಳನ್ನು ಒದಗಿಸುತ್ತದೆ. ಜನವರಿ 14 ರಂದು ಆಲಮಟ್ಟಿಯ ಸಂತೆ ಮಾರುಕಟ್ಟೆಯ ಹತ್ತಿರ ವಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಈ ಪಾದಯಾತ್ರೆ ಆರಂಭಗೊಳ್ಳಲಿದೆ. ಜನವರಿ 18ಕ್ಕೆ ಪಾದಯಾತ್ರೆ ಮಂತ್ರಾಲಯ ತಲುಪಲಿದೆ.




    ಪಾದಯಾತ್ರೆಯಲ್ಲಿ ಭಾಗವಹಿಸಲು ಅವಕಾಶ
    ಮಂತ್ರಾಲಯ ಪಾದಯಾತ್ರೆಗೆ ಹೋಗಬಯಸುವವರು ಇಂದೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜಯಪುರ ಜಿಲ್ಲೆಯ ಹಲವು ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಯ ಅಸಂಖ್ಯಾತ ಭಕ್ತರಿದ್ದಾರೆ. ನಾಲ್ಕು ದಿನಗಳ ಕಾಲ ಪಾದಯಾತ್ರೆ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಪಡೆಯಬೇಕೆಂಬುವವರು ಆಲಮಟ್ಟಿಯ ಮಂತ್ರಾಲಯ ಪಾದಯಾತ್ರೆ ಸಮಿತಿಯ ಮುಖ್ಯಸ್ಥರಲ್ಲಿ ಇಂದೇ ತಮ್ಮ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದಾಗಿದೆ.


    ಹೆಸರು ನೋಂದಾಯಿಸಲು 9481571264 ಈ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ.


    ಇದನ್ನೂ ಓದಿ: Jobs In Kuwait: ಕುವೈತ್​ನಲ್ಲಿ ಭಾರೀ ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ವಿವರ


    ಪಾದಯಾತ್ರೆ ಸಂಚರಿಸುವ ಮಾರ್ಗ ಹೀಗಿದೆ ನೋಡಿ
    ಆಲಮಟ್ಟಿ, ಯಲಗೂರ, ನಿಡಗುಂದಿ, ಮುದ್ದೇಬಿಹಾಳ, ನಾಲತವಾಡ, ನಾರಾಯಣಪುರ, ಲಿಂಗಸೂರು, ಬಾಗಲವಾಡ, ಮಾನ್ವಿ, ರಾಜಲಬಂಡಾ, ಮಂತ್ರಾಲಯ ರೋಡ್ ಮೂಲಕ ಮಂತ್ರಾಲಯ ತಲುಪಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಬಿಜಾಪುರ ಹಾಗೂ ಪರಶುರಾಮ ಭಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಇದನ್ನೂ ಓದಿ: Vijayapura: ಹಸು-ಎಮ್ಮೆ ಸಾಕಬೇಕೆ? ಇಲ್ಲಿದೆ ನೋಡಿ ಸಖತ್ ಅವಕಾಶ


    ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
    ಹೆಚ್ಚಿನ ವಿವರಗಳಿಗಾಗಿ 9482015543 ಇಲ್ಲವೇ 9481571264 ಗೆ ಸಂಪರ್ಕಿಸಲು ಕೋರಲಾಗಿದೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: