ಆಹಾ! ಬಾಯಲ್ಲಿ ನೀರೂರಿಸುತ್ತೆ ಈ ರೊಟ್ಟಿ. ಸಖತ್ ಟೇಸ್ಟಿ, ಅಷ್ಟೇ ಸ್ಪೈಸಿ ಈ ರುಚಿಕರ ರೊಟ್ಟಿ. ಇದು ಉತ್ತರ ಕರ್ನಾಟಕದ (Uttara Karnataka Food) ವಿಶೇಷ ಖಾದ್ಯವಾದ ಮಲೈ ರೊಟ್ಟಿ. ಅಡುಗೆ ಮನೇಲಿ ಮಲೈ ರೊಟ್ಟಿನ (Malai Roti) ತಯಾರು ಮಾಡೋ ಆ ಶೈಲಿ ನೋಡ್ತಿದ್ರಂತೂ ರುಚಿಯ ಕುರಿತು ಹುಟ್ಟೋ ಕುತೂಹಲ ತಡೆಯೋಕೇ ಆಗಲ್ಲ! ಮಲೈ ರೊಟ್ಟಿ ಅದೆಷ್ಟು ಟೇಸ್ಟಿಯೋ ಅಷ್ಟೇ ಇಂಟರೆಸ್ಟಿಂಗ್! ಬೆಂಕಿಯುಗುಳೋ ಸ್ಟವ್ ಮೇಲೆ ಕುದಿಸಿ, ಬೇಯಿಸಿ ಮಾಡೋ ಈ ಮಲೈ ರೊಟ್ಟಿ ಸಾಮಾನ್ಯ ರೊಟ್ಟಿಯಂತಲ್ಲ. ದಹಿಪುರಿಯಂತೆ ಕಾಣೋ ಈ ರುಚಿಕರ ಖಾದ್ಯ ಈಗ ವಿಜಯಪುರದಲ್ಲಿ ಸಖತ್ ಫೇಮಸ್. ಇಲ್ಲಿದೆ ನೋಡಿ ಮಲೈ ರೊಟ್ಟಿ (Malai Roti Recipe) ರೆಸಿಪಿ!
ಮಲೈ ರೊಟ್ಟಿ ಸುವಾಸನೆ ಈಗ ವಿಜಯಪುರದ ಕೊಲ್ಹಾರ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ಬಾಗಲಕೋಟೆ ಜಿಲ್ಲೆಯವರೆಗೂ ಹಬ್ಬಿದೆ. ಹಾಗಂತ ಮಲೈ ರೊಟ್ಟಿ ತಿನ್ನೋಕೆ ನೀವು ವಿಜಯಪುರಕ್ಕೇ ಬರ್ಬೇಕಂತಿಲ್ಲ. ಮಲೈ ರೊಟ್ಟಿ ಮಾಡೋದು ಹೇಗೆ ಅಂತ ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ವಿಜಯಪುರದ ದಿಲ್ಲಿ ದರ್ಬಾರ್ ಪಂಜಾಬಿ ರೆಸ್ಟೋರೆಂಟ್ನ ಬಾಣಸಿಗರು ಮಾಹಿತಿ ನೀಡಿದ್ದಾರೆ ನೋಡಿ.
ಮಲೈ ರೊಟ್ಟಿ ಮಾಡೋಕೆ ಇವೆಲ್ಲ ಬೇಕೇ ಬೇಕು
ನೀವೂ ಮಲೈ ರೊಟ್ಟಿ ಮಾಡ್ಬೇಕಂದ್ರೆ ಮೊದಲು ಈ ಎಲ್ಲ ಸಾಮಗ್ರಿಗಳನ್ನ ರೆಡಿ ಇಟ್ಕೊಳ್ಳಿ.
ಗೋಧಿ ಹಿಟ್ಟು - 2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಮೊಸರು 4 ಟೀ ಸ್ಪೂನ್, ತಾಜಾ ಹಾಲಿನ ಕೆನೆ - 4 ಟೀ ಸ್ಪೂನ್ ರೆಡಿ ಮಾಡಿಕೊಳ್ಳಿ.
ಇದನ್ನೂ ಓದಿ: Best Trekking Place: ವೀಕೆಂಡ್ ಟ್ರೆಕ್ಗೆ ಬೆಸ್ಟ್ ಸ್ಥಳ ಈ ಚಂದ್ರಂಪಳ್ಳಿ ವನ್ಯಧಾಮ!
ಇನ್ನು ಮಲೈರೊಟ್ಟಿ ಮಾಡೋದು ಹೇಗಂದ್ರೆ
ಒಂದು ಬಟ್ಟಲಿಗೆ ಹಿಟ್ಟು ಮತ್ತು ಉಪ್ಪು ಸೇರಿಸಿ. ಮೊಸರು ಮತ್ತು ಕೆನೆ ಸೇರಿಸಿ. ನೀರಿನೊಂದಿಗೆ ಹಿಟ್ಟನ್ನು ಬೆರೆಸಿಕೊಳ್ಳಿ. ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿ ರೊಟ್ಟಿ ಮಾಡಿ. ಒಂದು ಕಡೆ ಎಣ್ಣೆ ಅಥವಾ ತುಪ್ಪ ಹಾಕಿ ತಿರುಗಿಸಿ ಇನ್ನೊಂದು ಕಡೆಯೂ ಬೇಯಿಸಿ. ಸಲಾಡ್, ಮೊಸರು ಅಥವಾ ಯಾವುದೇ ಇತರ ಕರಿ ಅಥವಾ ದಾಲ್ ಜೊತೆ ಬಿಸಿಯಾಗಿ ಬಡಿಸಿ ತಿನ್ನಬಹುದು.
ಇದನ್ನೂ ಓದಿ: Vikram Betal Story: ಹಣೆಬರಹ ಬದಲಿಸಲು ಯಾರಿಂದಲೂ ಆಗಲ್ಲ, ಬೇತಾಳ ಹೇಳಿದ ಸುಂದರ ಕಥೆ
ಹಾಗಿದ್ರೆ ಇನ್ನೇಕೆ ತಡ ನೀವೂ ಟ್ರೈ ಮಾಡಿ, ಮನೇಲಿ ತಯಾರಿಸಿ ರುಚಿ ರುಚಿಯಾದ ಮಲೈ ರೊಟ್ಟಿ ಸವಿಯಿರಿ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ