Kids Event: ಮಾರ್ಚ್ 5 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ

ಮಕ್ಕಳ ಸಾಹಿತ್ಯ ಸಂಭ್ರಮ

ಮಕ್ಕಳ ಸಾಹಿತ್ಯ ಸಂಭ್ರಮ

ಮಾರ್ಚ್ 5 ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ, ವಿಜಯಪುರ ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತು, ಜತ್ತ ಮತ್ತು ಜತ್ತ ಗ್ರಾಮದ ಆದರ್ಶ ಶಿಕ್ಷಕಿ ನಾಗಮ್ಮ ಸುಭಾಸ ಬೆಳ್ಳುಬ್ಬಿ ಇವರ ಸಹಯೋಗದಲ್ಲಿ 11ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

  • Share this:

    ವಿಜಯಪುರ: ನೆರೆಯ ಮಹಾರಾಷ್ಟ್ರದ (Maharashtra) ಸಾಂಗಲಿ ಜಿಲ್ಲೆಯ ಜತ್ತದಲ್ಲಿರುವ ಶಿವಾನುಭವ ಸಂಸ್ಥೆಯಲ್ಲಿ ಮಾರ್ಚ್ 5 ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ, ವಿಜಯಪುರ (Vijaypura) ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತು, ಜತ್ತ ಮತ್ತು ಜತ್ತ ಗ್ರಾಮದ ಆದರ್ಶ ಶಿಕ್ಷಕಿ ನಾಗಮ್ಮ ಸುಭಾಸ ಬೆಳ್ಳುಬ್ಬಿ ಇವರ ಸಹಯೋಗದಲ್ಲಿ 11ನೇ ಮಕ್ಕಳ ಸಾಹಿತ್ಯ ಸಮ್ಮೇಳನ (Sahithya Sammelana) ಹಮ್ಮಿಕೊಳ್ಳಲಾಗಿದೆ.


    ಸ್ವಾಮೀಜಿ ಸಾನಿಧ್ಯ

    ಮಾರ್ಚ್ 5ರ ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಶ್ರೀ ಬಸವೇಶ್ವರ ಮಂದಿರದಿಂದ ಶಿವಾನುಭವ ಸಂಸ್ಥೆಯವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ಸಾಗಲಿದೆ. 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯ ಮರುಳಶಂಕರ ಸ್ವಾಮೀಜಿ ಸಾನಿಧ್ಯ ವಹಿಸುವರು.


    ಬಿ.ಎಂ ಪಾಟೀಲ ಸರ್ವಾಧ್ಯಕ್ಷತೆ

    ತುಂಗಳ ಶಾಲೆಯ ಶ್ರೇಯಾ ಸಿ ಮೇಡೆಗಾರ ಸಮ್ಮೇಳನದ ಉದ್ಘಾಟನೆಯನ್ನ ನೆರವೇರಿಸಲಿದ್ದಾರೆ. ಸರ್ವಾಧ್ಯಕ್ಷತೆಯನ್ನು ವಿಜಯಪುರದ ಹಿರಿಯ ಮಕ್ಕಳ ಸಾಹಿತಿ ಬಿ.ಎಂ. ಪಾಟೀಲ ವಹಿಸಲಿದ್ದು, ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆ ಮಾಜಿ ಸಭಾಪತಿ ಸುಜಾತಾ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.




    ಹಿರಿಯ ಸಾಹಿತಿಗಳ ಉಪಸ್ಥಿತಿ

    ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಪ.ಗು. ಸಿದ್ದಾಪುರ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಆದರ್ಶ ಶಿಕ್ಷಕಿ ನಾಗಮ್ಮ ಸುಭಾಸ ಬೆಳ್ಳುಬ್ಬಿ ಭಾಗವಹಿಸಲಿದ್ದಾರೆ. ಮಕ್ಕಳ ಹಿರಿಯ ಸಾಹಿತಿ ಹ.ಮ. ಪೂಜಾರ ಸೇರಿದಂತೆ ಹಲವಾರು ಸಾಹಿತಿಗಳು ಭಾಗವಹಿಸಲಿದ್ದಾರೆ.


    ಇದನ್ನೂ ಓದಿ:ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!


    ಕವಿಗೋಷ್ಠಿ

    ಅಂದು ಬೆಳಗ್ಗೆ 11 ರಿಂದ 12.30 ರ ವರೆಗೆ ಹಿರಿಯರ ಚಿಂತನಗೋಷ್ಠಿ , ಮಕ್ಕಳ ಮನದಾಳದ ಮಾತು, ಕವಿಗೋಷ್ಠಿ ಸೇರಿದಂತೆ 3 ಗೋಷ್ಠಿಗಳು ಜರುಗಲಿವೆ. ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಸಾಹಿತಿಗಳು ಭಾಗವಹಿಸಲಿದ್ದಾರೆ. ಆಕ್ತಿ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸುವಂತೆ ಸಂಘಟಕರು ಕರೆ ನೀಡಿದ್ದಾರೆ.


    ವರದಿ - ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:Sandhya M
    First published: