Vijayapura: ಕುಡಿಯುವ ನೀರಿನ ಅಭಾವ ನೀಗಿಸಲು ಮಹತ್ವದ ನಿರ್ಧಾರ

ಕುಡಿಯುವ ನೀರು (ಸಾಂದರ್ಭಿಕ ಚಿತ್ರ)

ಕುಡಿಯುವ ನೀರು (ಸಾಂದರ್ಭಿಕ ಚಿತ್ರ)

ಆಲಮಟ್ಟಿ ಜಲಾಶಯದಲ್ಲಿ ಹಿನ್ನೀರನ್ನು ರೈತರು ಪಂಪುಗಳ ಮೂಲಕ ಕೃಷಿಗೆ ಬಳಸುತ್ತಿದ್ದಾರೆ. ಪ್ರತಿ ನಿತ್ಯ ಜಲಾಶಯದಿಂದ 700 ರಿಂದ 1025 ಕ್ಯೂಸೆಕ್ ನೀರು ಬಳಕೆಯಾಗುತ್ತದೆ.

  • News18 Kannada
  • 5-MIN READ
  • Last Updated :
  • Bijapur, India
  • Share this:

    ಬಾಗಲಕೋಟೆ: ಕೃಷ್ಣಾ ನದಿ (Krishna River) ಜಲಾಶಯದ ಹಿನ್ನೀರಿನಿಂದ ರೈತರು ಕೃಷಿಗೆ ಅವಶ್ಯಕವಿರುವ ನೀರನ್ನು ನದಿ ದಂಡೆಯಲ್ಲಿ ಪಂಪ್​ಸೆಟ್ ಅಳವಡಿಸಿ ಬೆಳೆಗಳಿಗೆ ನೀರನ್ನ ಪಡೆಯುತ್ತಿದ್ದರು. ಆದರೆ ಅವಳಿ ಜಿಲ್ಲೆಯಲ್ಲಿ ಈಗಾಗಲೇ ಬಿರು ಬೇಸಿಗೆ (Summer 2023) ಆರಂಭವಾಗಿದೆ. ಇದರಿಂದಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ (Drinking Water) ಅಭಾವವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ. ನದಿ ದಂಡೆಯಲ್ಲಿ ಅಳವಡಿ ಪಂಪ್ ಮೂಲಕ ನೀರು ಪಡೆಯುವ ಪರವಾನಿಗೆ ಸ್ಥಗಿತಗೊಳಿಸಲಾಗಿದೆ.


    ನೀರನ್ನು ಎತ್ತಿಕೊಂಡು ನೀರಾವರಿಗೆ ಬಳಸಿಕೊಳ್ಳಲು ನೀಡಿರುವ ಪರವಾನಿಗೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಲಾಗಿದೆ.


    ಎಲ್ಲಿಯವರೆಗೆ  ನೀರು ಎತ್ತುವಂತಿಲ್ಲ?
    ಮುಂದಿನ ಆದೇಶದವರೆಗೆ ನೀರು ಎತ್ತುತ್ತಿರುವುದನ್ನು ಸ್ಥಗಿತಗೊಳಿಸಿ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರ ಎಚ್‌.ಸುರೇಶ ಅವರು ಈ ಆದೇಶವನ್ನ ಹೊರಡಿಸಿದ್ದಾರೆ.


    ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!


    ಜಲಾಶಯದಲ್ಲಿ ಇರುವ ನೀರನ್ನು ಕುಡಿಯುವ ನೀರು ಹಾಗೂ ಇತರ ತುರ್ತು ಅವಶ್ಯಕತೆಗಳ ಸಲುವಾಗಿ ಬಳಸಲಾಗುವುದು. ಮುಂಬರುವ 2023 ರ ಜೂನ್ ಅಂತ್ಯದವರೆಗೆ ಆಲಮಟ್ಟಿ ಜಲಾಶಯ ಅವಲಂಬಿತ ನಗರ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರನ್ನು ಕಾಯ್ದಿರಿಸಬೇಕಾಗಿದೆ.


    ನೀರಿನ ಕೊರತೆ ಕಡಿಮೆ ಮಾಡಲು ನಿರ್ಧಾರ
    ಆಲಮಟ್ಟಿ ಜಲಾಶಯದಲ್ಲಿ ಹಿನ್ನೀರನ್ನು ರೈತರು ಪಂಪುಗಳ ಮೂಲಕ ಕೃಷಿಗೆ ಬಳಸುತ್ತಿದ್ದಾರೆ. ಪ್ರತಿ ನಿತ್ಯ ಜಲಾಶಯದಿಂದ 700 ರಿಂದ 1025 ಕ್ಯೂಸೆಕ್ ನೀರು ಬಳಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವವಾಗುವ ಸಾಧ್ಯತೆಯಿದೆ.


    ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ


    ಮುಂಬರುವ ಜೂನ್ ತಿಂಗಳ ಅಂತ್ಯದವರೆಗೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಸಂಗ್ರಹಿಸುವ ಅವಶ್ಯಕತೆ ಉಂಟಾಗಿದೆ. ಹೀಗಾಗಿ ಜಲಾಶಯದ ಹಿನ್ನೀರಿನಿಂದ ಪಂಪುಗಳ ಮೂಲಕ ನೀರನ್ನ ಎತ್ತುತ್ತಿರುವುದನ್ನು ಸ್ಥಗಿತಗೊಳಿಸಲಾಗಿದೆ.




    ಜೊತೆಗೆ ನೀರು ಎತ್ತುವುದಕ್ಕಾಗಿ ರೈತರು ಸಲ್ಲಿಸುವ ಪ್ರಸ್ತಾವನೆಗಳನ್ನು ಅನುಮೋದನೆ ನೀಡದಿರಲು ತೀರ್ಮಾನಿಸಿರುವುದಾಗಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರ ಎಚ್‌.ಸುರೇಶ ಅವರು ಮಾಹಿತಿ ನೀಡಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು