Vijayapura: ವಿಜಯಪುರದ ಕೃಷಿಕರಿಗೆ ಮಹಾರಾಷ್ಟ್ರ ಕಾರ್ಮಿಕರ ನೆರವು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಆದಾಯ ಕುಂಠಿತವಾಗುವ ಚಿಂತೆಯಲ್ಲಿದ್ದ ಗುಮ್ಮಟನಗರಿ ರೈತರು ಸದ್ಯ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಕುತೂಹಲದ ಮಾಹಿತಿ ಇಲ್ಲಿದೆ.

  • News18 Kannada
  • 5-MIN READ
  • Last Updated :
  • Bijapur, India
  • Share this:

    ವಿಜಯಪುರ: ಒಂದೆಡೆ ಕಬ್ಬುಗಳ ಕಡಿದು ರಾಶಿ ಹಾಕ್ತಿರೋ ಪುರುಷರು. ಇತ್ತ ಅದನ್ನ ಬೇರ್ಪಡಿಸ್ತಾ ಒಂದುಗೂಡಿಸೋ ಮಹಿಳೆಯರು. ಹೀಗೆ ನಗ್ತಾ, ಮಾತಾಡ್ತಾ ಎಕರೆಗಟ್ಟಲೆ ಭೂಮಿಯಲ್ಲಿದ್ದ ಕಬ್ಬು ಖಾಲಿಯಾಗಿದ್ದೇ (Sigarcane)  ಗೊತ್ತಾಗಿಲ್ಲ. ಹೀಗೆ ಬಂದಿರೋ ಕಾರ್ಮಿಕರೇ ಗುಮ್ಮಟ ನಗರಿಯ (Vijayapura News) ರೈತರ ಪಾಲಿನ ಅನ್ನದಾತರು ಕೂಡಾ! ಅರೆ, ಈ ಕಾರ್ಮಿಕರು (Maharashtra Labour)  ಕಬ್ಬು ಬೆಳೆಗಾರರಿಗೆ ಅನ್ನದಾತರೇ? ಅದ್ಹೇಗೆ ಅಂತೀರಾ ಹೇಳ್ತೀವಿ ನೋಡಿ.


    ಯೆಸ್, ಕೃಷಿ ಅಂದ್ರೇನೆ ಹಾಗೆ, ಅಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರನ್ನ ಅವಲಂಬಿಸಿರಲೇಬೇಕು. ಕಬ್ಬು ಬೆಳೆಗಾರನೇನೋ ಎಕರೆಗಟ್ಟಲೆ ಕಬ್ಬು ಬೆಳೆಯಬಹುದು. ಆದ್ರೆ, ಅದನ್ನ ಕಟಾವು ಮಾಡಬೇಕಲ್ವೇ? ಹೌದು, ಕಳೆದ ಎರಡು ವರ್ಷದಲ್ಲಿ ಕೋವಿಡ್ ಸಮಯದಲ್ಲಿ ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರು ಕಟಾವು ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಯದಾಗಿ ಸ್ಥಳೀಯ ಕಾರ್ಮಿಕರಿಗೆ ಎರಡು ಪಟ್ಟು ವೇತನ ನೀಡಿ ಕಟಾವು ಮಾಡಿಸಿದ್ದರು.


    ಮತ್ತೆ ವಿಜಯಪುರಕ್ಕೆ ಮರಳಿದ ಕಾರ್ಮಿಕರು
    ಅಷ್ಟಕ್ಕೂ ವಿಜಯಪುರದ ರೈತರೆಲ್ಲರೂ ಕಬ್ಬು ಕಟಾವಿಗೆ ಅವಲಂಬಿಸಿರೋದು ಮಹಾರಾಷ್ಟ್ರದ ಕಾರ್ಮಿಕರನ್ನಾಗಿತ್ತು. ಆದ್ರೆ ಎರಡು ವರ್ಷಗಳಲ್ಲಿ ಇದ್ದಂತಹ ಸಂದಿಗ್ಧ ಸ್ಥಿತಿ ಈಗ ಇಲ್ದೇ ಹೋಗಿದ್ರಿಂದ ಮಹಾರಾಷ್ಟ್ರದ ಕಾರ್ಮಿಕರು ಗಡಿ ದಾಟಿ ಬಂದಿದ್ದಾರೆ. ಇವರ ಆಗಮನದಿಂದ ಇತ್ತ ವಿಜಯಪುರದ ಕಬ್ಬು ಬೆಳೆಗಾರರು ಖುಷಿಯಾಗಿದ್ದಾರೆ.


    ಇದನ್ನೂ ಓದಿ: Babaladi Sadashiv Mutya: ದೇವರಿಗೆ ಹೂ, ಹಣ್ಣಿನ ಬದಲು ಎಣ್ಣೆ ನೈವೇದ್ಯ! ಇಲ್ಲಿ ಮದ್ಯವೇ ತೀರ್ಥ!




    ದಿನಕ್ಕೆ 4-5 ಎಕರೆ ಕಬ್ಬು ಕಟಾವು
    ಸದ್ಯ ಈ ವಲಸೆ ಕಾರ್ಮಿಕರು ಕೊಲ್ಹಾರ್ ತಾಲೂಕಿನ ತಡಲಗಿ ಗ್ರಾಮದಲ್ಲಿ ಬಿಡಾರಹೂಡಿದ್ದು ಕಬ್ಬು ಕಟಾವು ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ನಾಲ್ಕೈದು ಪುರುಷ ಹಾಗೂ ಮಹಿಳಾ ಕಾರ್ಮಿಕರು ಸೇರಿ ದಿನಕ್ಕೆ ನಾಲ್ಕರಿಂದ ಐದು ಎಕರೆ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ.


    ಇದನ್ನೂ ಓದಿ: Vijayapura Grapes: ಕಂಡು ಕೇಳರಿಯದ ಹಲವು ಬಗೆಯ ದ್ರಾಕ್ಷಿ, ಇಷ್ಟು ಕಡಿಮೆ ಬೆಲೆಗೆ ಸಿಕ್ಕಿತು ನೋಡಿ!


    ಹೀಗೆ ಮಹಾರಾಷ್ಟ್ರದಿಂದ ಹಲವು ಕಾರ್ಮಿಕ ಕುಟುಂಬಗಳು ಇಲ್ಲಿ ಬೀಡು ಬಿಟ್ಟಿದ್ದು ಕಬ್ಬು ಕಟಾವಿನಲ್ಲಿ ನಿರತವಾಗಿವೆ. ಹೀಗಾಗಿ ಆದಾಯ ಕುಂಠಿತವಾಗುವ ಚಿಂತೆಯಲ್ಲಿದ್ದ ಗುಮ್ಮಟನಗರಿ ರೈತರು ಸದ್ಯ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು