Mahashivaratri 2023: ಶಿವರಾತ್ರಿಯಂದು ಈ 85 ಅಡಿ ಎತ್ತರದ ಮಹೇಶ್ವರನನ್ನು ನೋಡುವುದೇ ಸೌಭಾಗ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Maha Shivaratri Temples: ಮಹಾ ಶಿವರಾತ್ರಿಯಂದು ಶಿವಭಕ್ತರು ಇಲ್ಲಿಗೆ ಭೇಟಿ ನೀಡಿ ಪಾಸಿಟಿವ್ ಎನರ್ಜಿ ಹೆಚ್ಚಿಸಿಕೊಳ್ಳಬಹುದು.

  • News18 Kannada
  • 4-MIN READ
  • Last Updated :
  • Bijapur, India
  • Share this:

    ವಿಜಯಪುರ: ತಪೋಭಂಗಿಯಲ್ಲಿ ಕೂತ ಈಶ್ವರ, ಶಿವನಿಗೆ ಮಂಡಿಯೂರಿ ಕೂತಂತಿರೋ ನಂದಿ, ಶಿಲೆಯ ವರ್ಣದಲ್ಲಿ ಕಂಗೊಳಿಸೋ ಮಹೇಶ್ವರನ (Mahashivaratri 2023)  ಪ್ರಸನ್ನವದನ ನೋಡುವುದೇ ಚೆಂದ. ಅದರಲ್ಲೂ ಶಿವರಾತ್ರಿ ಸಂಭ್ರಮದಲ್ಲಿ ಈ ಶಿವನ ಮುಂದೆ ನಿಂತು ಓಂ ನಮಃ ಶಿವಾಯ (OM Namah Shivay) ಅನ್ನೋದೆ ಪುಣ್ಯ. ಅಷ್ಟಕ್ಕೂ ವಿಷಕಂಠ ಈ ಪ್ರತಿಮೆ ಇರೋದಾದ್ರೂ ಎಲ್ಲಿ? ಈ ಪರಶಿವನ (Shivagiri Shiva Temple) ವಿಶೇಷತೆಯಾದ್ರೂ ಏನು ಅಂತೀರ? ಎಲ್ಲವನ್ನೂ ಹೇಳ್ತೀವಿ ನೋಡಿ.


    ಶಿವಗಿರಿಯ ಶಿವನ ಮೂರ್ತಿ
    ಯೆಸ್, ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಮಹಾ ಶಿವರಾತ್ರಿಗೆ ಪ್ರಮುಖ ಸ್ಥಾನವಿದೆ.  ಹಿನ್ನೆಲೆಯಲ್ಲಿ ವಿಜಯಪುರದ ಹೊರಭಾಗದಲ್ಲಿರುವ ಶಿವಗಿರಿಯ ಶಿವನ ಪ್ರತಿಮೆಗೆ ಈಗಾಗಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಅದ್ರಲ್ಲೂ ಶಿವಗಿರಿಯಲ್ಲಿರುವ ಶಿವನ ಮೂರ್ತಿಯಂತೂ ಶಿವರಾತ್ರಿಯಂದು ಭಕ್ತರ ನೆಚ್ಚಿನ ತಾಣವಾಗಿರುತ್ತೆ.



    ಹೀಗಿದೆ ನೋಡಿ ಮೂರ್ತಿ ವೈಶಿಷ್ಟ್ಯತೆ
    ಇಲ್ಲಿರೋ ಶ್ವೇತವರ್ಣದ ಶಿವನ ಮೂರ್ತಿಯು ಒಟ್ಟು 85 ಅಡಿ ಎತ್ತರ ಹೊಂದಿದೆ. ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್​ನಿಂದ ಈ ಶಿವಮೂರ್ತಿಯನ್ನು ನಿರ್ಮಿಸಲಾಗಿದೆ. ದೈತ್ಯ ಶಿವನ ಮೂರ್ತಿಯು ಅಂದಾಜು 1,500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕ ಹೊಂದಿರುವುದು ಈ ಮೂರ್ತಿಯ ವಿಶೇಷ. ಇನ್ನು ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ.



    ಶಿವರಾತ್ರಿ ದಿನ ಸ್ಪೆಷಲ್
    ಶಿವರಾತ್ರಿ ದಿನ ಬೆಳಿಗ್ಗೆ 7 ರಿಂದ ರಾತ್ರಿ 8ರ ವರೆಗೂ ಶಿವನ ದರ್ಶನಕ್ಕೆ ಅವಕಾಶವಿರುತ್ತೆ. ಭಕ್ತರ ಸಂಖ್ಯೆಯೂ ಸಾಲುದ್ದ ಇರುತ್ತೆ! ಆ ಮಟ್ಟಿಗೆ ಶಿವಗಿರಿಯ ಶಿವನು ಭಕ್ತ ಸಾಗರಕ್ಕೆ ಸಾಕ್ಷಿಯಾಗುತ್ತಾನೆ. ಮಹಾಶಿವರಾತ್ರಿಯಂದು ಶಿವಗಿರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ವೇಳೆ ಶಿವಗಿರಿ ದೇವಸ್ಥಾನದಲ್ಲಿ ಶಿವನಿಗೆ ಹೂವು, ಹಣ್ಣು, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಭಜನಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ಮಹಾಶಿವರಾತ್ರಿಯಂದು ಆಯೋಜಿಸಲಾಗುತ್ತದೆ.


    ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!

    ಶಿವಲಿಂಗಕ್ಕೂ ವಿಶೇಷ ಪೂಜೆ
    ವಿಜಯಪುರ ನಗರದಲ್ಲಿರುವ 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಕಾಲದ ಈ ದೇವಾಲಯದ ಚಕ್ರಾಂಕಿತ ದೇವಸ್ಥಾನದ ಗರ್ಭಗುಡಿಯ ಈಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಪುನೀತರಾಗ್ತಾರೆ. ಅಲ್ಲದೇ ಮನೆಯಲ್ಲಿ ತಯಾರಿಸಿದ ಸಿಹಿಖಾದ್ಯ, ಹಣ್ಣು, ಹಂಪಲುಗಳನ್ನ ತಂದು ದೇವರ ಮೂರ್ತಿಗೆ ನೈವೇದ್ಯ ಸಮರ್ಪಿಸಿ ಉಪವಾಸ ತೊರೆಯುತ್ತಾರೆ.




    ಇದನ್ನೂ ಓದಿ: Vijayapura: ದೇವರ ಸನ್ನಿಧಿಯಲ್ಲಿ ಚಪ್ಪಲಿ ಸೇವೆ! ಒಂದು ಪೈಸೆಯನ್ನೂ ಪಡೆಯದ ಗೆಳೆಯರ ಬಳಗ


    Shivagiri
    ಶಿವಗಿರಿಯ ಶಿವ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಒಟ್ಟಿನಲ್ಲಿ ಶಿವರಾತ್ರಿಯ ಸಂಭ್ರಮ ಇನ್ನಷ್ಟು ಸಂಭ್ರಮಿಸಲು ಭಕ್ತರು ಶಿವಗಿರಿಗೆ ತೆರಳಿದರೆ ಕೈಲಾಸದಲ್ಲಿ ಇರುವ ಭಾವನೆಯೊಂದಿಗೆ ಭಕ್ತಿ ಕಡಲಲ್ಲಿ ತೇಲಾಡುತ್ತಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್,  ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: