ವಿಜಯಪುರ: ಒಂದು ಕಡೆ ಪೂರ್ಣಕುಂಭ ಹೊತ್ತು ಬರುತ್ತಿರೋ ಮಹಿಳೆಯರು, ಇನ್ನೊಂದೆಡೆ ಜನಸಾಗರದ ನಡುವೆ ರಥ (Madivaleshwara Temple Jatra) ಎಳೆಯುತ್ತಿರುವ ಭಕ್ತರು, ಮತ್ತೊಂದೆಡೆ ವೀರಗಾಸೆ ಕುಣಿತದ ವೈಭವ. ಮೆರವಣಿಗೆಯಲ್ಲಿ ಸಾಗಿ ಬಂತು ನೋಡಿ ಜೋಡಿ ಪಲ್ಲಕ್ಕಿ!
ಯೆಸ್, ಈ ಎಲ್ಲ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಶ್ರೀ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದಲ್ಲಿ. ಸಂಭ್ರಮದಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಜನಸಾಗರದ ನಡುವೆ ರಥೋತ್ಸವ ನಡೆಯಿತು. ಸಿಂಧನೂರಿನ ವೀರಗಾಸೆ ಕಲಾತಂಡ ಮತ್ತು ಕರಡಿ ಮಜಲು ಮೆರವಣಿಗೆಯಲ್ಲಿ ಭಾಗಿಯಾಗಿ ಮತ್ತಷ್ಟು ಮೆರಗು ನೀಡಿದವು.
ಜೋಡು ಪಲ್ಲಕ್ಕಿ ಮೆರವಣಿಗೆ
ಮಡಿವಾಳೇಶ್ವರ ಪ್ರಸಾದ ನಿಲಯದಿಂದ ಶ್ರೀ ಮಠದವರೆಗೆ ಅದ್ಧೂರಿಯಾಗಿ ಜೋಡು ಪಲ್ಲಕ್ಕಿ ಮೆರವಣಿಗೆ ನಡೆಯಿತು. ಬೆಳಗ್ಗೆ ಆರಂಭವಾದ ಅಡ್ಡಪಲ್ಲಕ್ಕಿ ಉತ್ಸವ ಮಧ್ಯಾಹ್ನ ವರೆಗೆ ನಡೆಯಿತು. ಗ್ರಾಮದ ಸುಮಂಗಲಿಯರು ಪೂರ್ಣಕುಂಭ ಹೊತ್ತು ಸಾಗಿದರು. ನಂತರ ಶ್ರೀ ಮಠದಲ್ಲಿ ಧರ್ಮಸಭೆ, ಮಡಿವಾಳಮ್ಮನವರ ಜೀವನ ಚರಿತ್ರೆಯನ್ನ ಗುಣಗಾನ ಮಾಡಲಾಯ್ತು.
ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!
ಜನ ಸಾಗರದ ನಡುವೆ ಸಂಪನ್ನಗೊಂಡ ಜಾತ್ರೆ
ಢವಳಗಿ ಗ್ರಾಮದ ಶ್ರೀ ಮಡಿವಾಳೇಶ್ವರರ 516ನೇ ರಥೋತ್ಸವವನ್ನ ಮಡಿವಾಳೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಘನಮಠೇಶ್ವರ ಸ್ವಾಮೀಜಿ ಅವರು ವಿಶೇಷ ಪೂಜೆ ನೆರವೇರಿಸುವುದರೊಂದಿಗೆ ಚಾಲನೆ ನೀಡಿದರು.
ಇದನ್ನೂ ಓದಿ: Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!
ಸಾಗರೋಪಾದಿಯಲ್ಲಿ ಆಗಮಿಸಿದ ಮಠದ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿಯನ್ನು ಅರ್ಪಿಸಿದರು. ಒಟ್ಟಿನಲ್ಲಿ ಭಕ್ತಿ ಭಾವದಿಂದ ಮಡಿವಾಳೇಶ್ವರ ಜಾತ್ರೆಯು ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ