• Home
  • »
  • News
  • »
  • vijayapura
  • »
  • Vijayapura: ವಿವಾದಗಳ ಇತ್ಯರ್ಥಕ್ಕೆ ಒಳ್ಳೆಯ ಅವಕಾಶ! ಬೇಗ ಹೀಗೆ ಮಾಡಿ

Vijayapura: ವಿವಾದಗಳ ಇತ್ಯರ್ಥಕ್ಕೆ ಒಳ್ಳೆಯ ಅವಕಾಶ! ಬೇಗ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Lok Adalat In Vijayapura: ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವುದೇ ಲೋಕ್ ಅದಾಲತ್ ಕಾರ್ಯಕ್ರಮದ ಉದ್ದೇಶವಾಗಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬೆಂಗಳೂರು ಇವರ ನಿರ್ದೇಶನದನ್ವಯ ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಇದೇ ತಿಂಗಳು ನವೆಂಬರ್ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ. ಲೋಕ್ ಅದಾಲತ್ (Lok Adalat) ಮಧ್ಯಸ್ಥಿಕೆ ಮತ್ತು ಸಮಾಜದ ವಿಭಾಗಗಳ ಮೂಲಕ ವಿವಾದದ ಇತ್ಯರ್ಥವನ್ನು ಉತ್ತೇಜಿಸಲು ಮತ್ತು ಬಡವರು, ತುಳಿತಕ್ಕೊಳಗಾದವರು, ಕಾನೂನು ಹಕ್ಕುಗಳನ್ನು ಪಡೆಯಲು ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವುದಾಗಿದ್ದು ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವುದೇ ಲೋಕ್ ಅದಾಲತ್ (Lok Adalat In Vijayapura) ಕಾರ್ಯಕ್ರಮದ ಉದ್ದೇಶವಾಗಿದೆ.

    ಈ ಲೋಕ ಅದಾಲತ್ ಕಾರ್ಯಕ್ರಮವು ಪ್ರತಿ ತಿಂಗಳು 1ನೇ ಶನಿವಾರ ಮತ್ತು 3ನೇ ಶನಿವಾರದಂದು ಆಯೋಜಿಸಲಾಗುತ್ತಿದ್ದು, ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಆಯೋಗದಿಂದ ನೀಡಲಾಗುತ್ತದೆ.


    ರಾಜಿ ಸಂಧಾನಕ್ಕೆ ಮನವಿ
    ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಲೋಕ ಅದಾಲತ್ ಸುವರ್ಣ ಅವಕಾಶವನ್ನ ಕಲ್ಪಿಸಿದ್ದು, ವಿಜಯಪುರ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಬಾಕಿ ಇರುವ ದೂರುಗಳನ್ನು ನ್ಯಾಯವಾದಿಗಳು ಮತ್ತು ಉಭಯ ಪಕ್ಷಗಾರರು ಭಾಗವಹಿಸಿ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿಲ್ಲಾ ನ್ಯಾಯಾಧೀಶ ಅಂಬಾದಾಸ ಕುಲಕರ್ಣಿ ಅವರು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವಿಜಯಪುರದಲ್ಲಿ ಕಬ್ಬಡ್ಡಿ ಪಂದ್ಯಾವಳಿ
    ಪ್ರಸಕ್ತ 2022-23ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ 14 ಮತ್ತು 17ರ ವಯೋಮಿತಿಯೊಳಗಿನ ಶಾಲಾ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾವಳಿನ್ನು ಇದೇ ನವೆಂಬರ್ 11 ಹಾಗೂ 12 ರಂದು ಜಿಲ್ಲೆಯ ಬಸವನಬಾಗೇವಾಡಿಯ ಶ್ರೀ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.


    ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗದ 9 ಜಿಲ್ಲೆಗಳಿಂದ 14 ಮತ್ತು 17ರ ವಯೋ ಗುಂಪಿನ ಶಾಲಾ ಬಾಲಕ, ಬಾಲಕಿಯರು ಸೇರಿ ಒಟ್ಟು 432 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.


    ಇದನ್ನೂ ಓದಿ: Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!


    ಹಗಲು ಮತ್ತು ರಾತ್ರಿ ಕಬ್ಬಡಿ ನಡೆಯಲಿದ್ದು ಹೊನಲು ಬೆಳಕಿನ ನಾಲ್ಕು ಮ್ಯಾಟ್ ಅಂಕಣಗಳ ವ್ಯವಸ್ಥೆಯನ್ನ ಕ್ರೀಡಾಪಡುಗಳಿಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಿಂಗಲ್ ನಾಕೌಟ್ ಮಾದರಿಯ ಪಂದ್ಯಗಳನ್ನು ಆಯೋಜಿಸಲಾಗಿದೆ.


    ಸಾರ್ವಜನಿಕರಿಗೆ ಮುಕ್ತ ಅವಕಾಶ
    ಹೊನಲು ಬೆಳಕಿನ ಈ ಕಬ್ಬಡ್ಡಿ ಪಂದ್ಯಾವಳಿ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಕಬ್ಬಡ್ಡಿ ಮೈದಾನದ ಹೊರಗೆ ನಿಂತು ವೀಕ್ಷಿಸಲು ಅವಕಾಶವನ್ನ ಅಧಿಕಾರಿಗಳು ಕಲ್ಪಿಸಿದ್ದಾರೆ. ಮತ್ತು ಗದ್ದಲ ಗಲಾಟೆ ಮಾಡದೆ ಶಾಂತತೆಯನ್ನ ಕಾಪಾಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.


    ಇದನ್ನೂ ಓದಿ: Sugar Toys: ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆಗಳು! ಆಹಾ, ನೋಡೋಕೆ ಭಾರೀ ಮುದ್ಮುದ್ದು!


    ಬಾಗೇವಾಡಿಯಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ
    ಕ್ರೀಡಾಪಟುಗಳಿಗೆ ಮತ್ತು ತಂಡದ ವ್ಯವಸ್ಥಾಪಕರಿಗೆ ವಸತಿ ವ್ಯವಸ್ಥೆ, ಊಟ ಉಪಹಾರ ವ್ಯವಸ್ಥೆಯನ್ನ ಮಾಡಲಾಗಿದೆ, ತೀರ್ಪುಗಾರರಿಗೆ ಒಂದು ದಿನದ ಕ್ಲಿನಿಕ್‌ನ್ನು ನಡೆಸಲಾಗುವುದು. ಕ್ರೀಡಾಕೂಟದ ಯಶಸ್ವಿಗೆ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ಸಹ ಈಗಾಗಲೇ ರಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಬಸವನಬಾಗೇವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: