ವಿಜಯಪುರ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ ಯುವಕರ ನಿರುದ್ಯೋಗವನ್ನ (Unemployment) ತಪ್ಪಿಸಲು ಆಯೋಜಿಸಿರುವ ಜೆಸಿಬಿ ಆಪರೇಟರ್ ಚಾಲನಾ (JCB Operator) ತರಬೇತಿ ಹಾಗೂ ಎಲೆಕ್ಟ್ರಿಕ್ ಮೊಟಾರ್ ವೈಡಿಂಗ್ ಮತ್ತು ರಿಪೇರ್-ರೆಫ್ರಿಜರೇಶನ್ & ಏರ್ ಕಂಡಿಶನ್ ಹೀಗೆ ಹತ್ತು ಹಲವಾರು ತರಬೇತಿಯನ್ನ ಯುವಕರಿಗೆ 30 ದಿನಗಳ ತರಬೇತಿಗಾಗಿ (Skill Training) ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಏನೆಲ್ಲ ತರಬೇತಿ? | JCB ಆಪರೇಟಿಂಗ್ ಸೇರಿ ಎಲೆಕ್ಟ್ರಿಕ್ ಮೊಟಾರ್ ವೈಡಿಂಗ್ ಮತ್ತು ರಿಪೇರ್-ರೆಫ್ರಿಜರೇಶನ್ & ಏರ್ ಕಂಡಿಶನ್ ನಿರ್ವಹಣೆ |
ತರಬೇತಿಯ ಅವಧಿ | 30 ದಿನ |
ವಯೋಮಾನ | 18 ರಿಂದ 45 ವರ್ಷ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಡಿಸೆಂಬರ್ 25 |
ದೂರವಾಣಿ | 08284-298547, ಮೊ: 8050741744, 9632143217 |
ಇದನ್ನೂ ಓದಿ: Inspiration: ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ವಿಜಯಪುರದ ಮಲ್ಲಮ್ಮ; ಇವರ ಜೀವನವೇ ಸ್ಪೂರ್ತಿಗೀತೆ!
ಏರ್ ಕಂಡಿಶನ್ ರಿಪೇರಿ ತರಬೇತಿಗೆ ಡಿಸೆಂಬರ್ 25 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ - 581325 ಇವರಿಗೆ ಸಲ್ಲಿಸಬೇಕು.
ಯಾರು ಅರ್ಜಿ ಸಲ್ಲಿಸಬಹುದು?
18 ವರ್ಷದಿಂದ 48 ವರ್ಷದ ವಯೋಮಾನದ ಯುವಕರು ಈ ಮೇಲಿನ ಎಲ್ಲ ತರಬೇತಿಗಳಿಗೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ, 30 ದಿನಗಳ ಕಾಲ ಸಂಪೂರ್ಣ ತರಬೇತಿಯನ್ನ ನೀಡಲಾಗುತ್ತದೆ. ವಿಜಯಪುರ, ಬಾಗಲಕೋಟೆ ಸೇರಿದಂತೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಿಂದಲೂ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭವ
ವಸತಿ - ಊಟ ಸಂಪೂರ್ಣ ಉಚಿತ
ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಉಚಿತವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: 08284-298547, ಮೊ: 8050741744, 9632143217 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ