Vijayapura: ಫ್ರೀ ಆಗಿ ಡ್ರೈವಿಂಗ್‌ ಕಲಿಯಿರಿ, ಈಗಲೇ ಅಪ್ಲೈ ಮಾಡೋಕೆ ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಗಿದ್ರೆ ಇನ್ನೇಕೆ ತಡ? ಕೂಡಲೇ ಅರ್ಜಿ ಸಲ್ಲಿಸಿ ಲಘು ವಾಹನಗಳ ಚಾಲನಾ ತರಬೇತಿಯನ್ನು (Driving License) ಉಚಿತವಾಗಿ ಪಡೆದುಕೊಳ್ಳಿ.

  • News18 Kannada
  • 5-MIN READ
  • Last Updated :
  • Bijapur, India
  • Share this:

    ವಿಜಯಪುರ: ನಿಮಗೆ ಡ್ರೈವಿಂಗ್‌ ಕಲಿಯಬೇಕೆನ್ನುವ (Learn Driving) ಆಸಕ್ತಿ ಇದೆಯೇ? ಅದಕ್ಕಾಗಿ ಹಣ ಒಂದುಗೂಡಿಸಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ವಾಹನ ಚಾಲನೆಯ ಕನಸನ್ನ ಇದೀಗ ಉಚಿತವಾಗಿ ನನಸು ಮಾಡಿಕೊಳ್ಳಿ. ಇಂತಹ ಸುವರ್ಣಾವಕಾಶವೊಂದನ್ನು ವಿಜಯಪುರ (Vijayapura News) ಹಾಗೂ ಬಾಗಲಕೋಟೆಯ (Bagalkote News) ಯುವಕರಿಗೆ ಒದಗಿಬಂದಿದೆ ಹಾಗಿದ್ರೆ ಇನ್ನೇಕೆ ತಡ? ಕೂಡಲೇ ಅರ್ಜಿ ಸಲ್ಲಿಸಿ ಲಘು ವಾಹನಗಳ ಚಾಲನಾ ತರಬೇತಿಯನ್ನು (Driving Licence) ಉಚಿತವಾಗಿ ಪಡೆದುಕೊಳ್ಳಿ.

    ತರಬೇತಿಯ ಹೆಸರುಡ್ರೈವಿಂಗ್ ತರಬೇತಿ
    ವಯೋಮಿತಿ20 ರಿಂದ 45 ವರ್ಷ ವಯೋಮಾನದ ಪುರುಷ ಅಭ್ಯರ್ಥಿಗಳು
    ಕೊನೆಯ ದಿನಾಂಕಏಪ್ರಿಲ್‌ 10
    ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆ9632143217 ಹಾಗೂ 9449782425
    ಶುಲ್ಕಊಟ, ವಸತಿ, ತರಬೇತಿ ಉಚಿತ

    ವಯೋಮಾನ
    ದಾಂಡೇಲಿ ಕೆನರಾ ಬ್ಯಾಂಕ್, ದೇಶಪಾಂಡೆ ಆರ್ ಸೆಟ್ ಹಾಗೂ ಟಾಟಾ ಮೋಟರ್ಸ್ ಧಾರವಾಡ ಇವರ ಸಹಯೋಗದಲ್ಲಿ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಒಂದು ತಿಂಗಳ ಅವಧಿಯದ್ದಾಗಿರುತ್ತವೆ. ಇದಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 20 ರಿಂದ 45 ವರ್ಷ ವಯೋಮಾನದ ಪುರುಷ ಅಭ್ಯರ್ಥಿಗಳು ಆಗಿರಬೇಕಾಗುತ್ತವೆ.


    ಅರ್ಜಿ ಸಲ್ಲಿಕೆ ಹೇಗೆ?
    ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪುರುಷರು ಆಸಕ್ತಿ ಹೊಂದಿದ್ದರೆ ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಸ್ವ ವಿವರವುಳ್ಳ ಅರ್ಜಿಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ (ಆರ್) , ವಿಸ್ತರಣಾ ಕೇಂದ್ರ ಹಸನಮಾಳ ದಾಂಡೇಲಿ - 581325 ಈ ವಿಳಾಸಕ್ಕೆ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನ ಸಲ್ಲಿಸಬಹುದಾಗಿದೆ.


    ಕೊನೆಯ ದಿನಾಂಕ ಯಾವಾಗ?
    ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 10ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.


    ವಾಟ್ಸಾಪ್‌ ಮೂಲಕ ಹೀಗೆ ಸಲ್ಲಿಸಿ
    ಆಸಕ್ತ ಅಭ್ಯರ್ಥಿಗಳು ವ್ಯಾಟ್ಸಪ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ವಾಟ್ಸಾಪ್‌ ಸಂಖ್ಯೆ 9632143217 ಹಾಗೂ 9449782425 ಸಲ್ಲಿಸಬಹುದಾಗಿದೆ.


    ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!




    ಊಟ, ವಸತಿ ಉಚಿತ
    ಉಚಿತ ಚಾಲನಾ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯೊಂದಿಗೆ ಊಟೋಪಚಾರ ಹಾಗೂ ವಸತಿಯು ಕಲ್ಪಿಸಲಾಗುವುದು, ಸಂಪೂರ್ಣ ಉಚಿತವಾಗಿರುತ್ತವೆ.


    ಇದನ್ನು ಓದಿ: Vijayapura: ಶ್ರೀಶೈಲ ದರ್ಶನ ಮಾಡಲು ಸದವಕಾಶ, ಈಗಲೇ ಇಲ್ಲಿ ನೋಂದಣಿ ಮಾಡಿಕೊಳ್ಳಿ


    ಹೆಚ್ಚಿನ ಮಾಹಿತಿಗಾಗಿ
    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08284 - 298547, 9632143217 ಹಾಗೂ 9449782425 ಸಂಪರ್ಕಿಸಲು ಮಾಹಿತಿ ನೀಡಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: