• Home
 • »
 • News
 • »
 • vijayapura
 • »
 • Vijayapura: ಶಾಲೆ ಅಭಿವೃದ್ಧಿಗೆ 50 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿದ ಗ್ರಾಮಸ್ಥರು!

Vijayapura: ಶಾಲೆ ಅಭಿವೃದ್ಧಿಗೆ 50 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿದ ಗ್ರಾಮಸ್ಥರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಮುದಾಯದ ನೆರವು ಸಿಕ್ರೆ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಈ ಶಾಲೆ ತಾಜಾ ಉದಾಹರಣೆ!

 • Share this:

  ವಿಜಯಪುರ: ಖುಷಿಖುಷಿಯಿಂದ ಓಡಾಡ್ತಿರೋ ಚಿಣ್ಣರು, ಸಮವಸ್ತ್ರ ಧರಿಸಿ ಪಾಠ ಕೇಳ್ತಿರೋ ಸರ್ಕಾರಿ ಶಾಲೆಯ ವಿವಿಧ ತರಗತಿಗಳ ವಿದ್ಯಾರ್ಥಿಗಳು. ಈ ಶಾಲೆಯಲ್ಲಿ ಹೀಗೆ ಖುಷಿ-ನಗು ಇದೆ ಅಂದ್ರೆ ಅದಕ್ಕೆ ಕಾರಣ ಗ್ರಾಮಸ್ಥರು! ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚಾಗಿರುವಾಗ ಪೇಟೆ ಮಂದಿಯೂ ತಮ್ಮ ಮಕ್ಕಳನ್ನ ಈ ಹಳ್ಳಿ ಶಾಲೆಗೆ (Village School)  ಸೇರ್ಸೋಕೆ ಮುಂದಾಗ್ತಿದ್ದಾರೆ. ಅದ್ಯಾವ ಶಾಲೆ ಅಂದ್ಕೊಂಡ್ರಾ? ವಿಜಯಪುರ ಜಿಲ್ಲೆಯ (Vijayapura News)  ಕೊಲ್ಹಾರ ತಾಲ್ಲೂಕಿನ ಕುಬಕಡ್ಡಿ ಗ್ರಾಮದ ಆರ್.ಎಂ.ಎಸ್.ಎ ಪ್ರೌಢಶಾಲೆ ಈ ಧನಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.


  ಸಮುದಾಯದ ನೆರವು ಸಿಕ್ರೆ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಈ ಶಾಲೆ ತಾಜಾ ಉದಾಹರಣೆ. ಗ್ರಾಮಸ್ಥರು ನೆರವಿನಿಂದ ಶಾಲೆಯಲ್ಲಿ ಪರಿಣಾಮಕಾರಿ ಬೋಧನೆ ಮತ್ತು ಕಲಿಕಾ ವಾತಾವರಣ ಸೃಷ್ಟಿಯಾಗಿ ಅತ್ಯುತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಿದೆ.


  50 ಲಕ್ಷದವರೆಗೂ ದೇಣಿಗೆ ಸಂಗ್ರಹ
  ಕುಬಕಡ್ಡಿ ಸುಮಾರು 1500 ಜನ ಸಂಖ್ಯೆ ಇರುವ ಗ್ರಾಮ. ಈ ಹಿಂದೆ ಮೂಲಭೂತ ಸೌಕರ್ಯದಿಂದ ವಂಚಿತವಾದ ಕುಬಕಡ್ಡಿಯ ಮೇಲೆ ಇಡೀ ವಿಜಯಪುರ ಕಣ್ಣಿಟ್ಟಿದೆ. ಶಿಕ್ಷಕರು, ಎಸ್.ಡಿ.ಎಂ.ಸಿ. ಜೊತೆಗೆ ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು, ಸ್ಥಳೀಯ ಯುವಕ, ಯುವತಿಯರು ಸ್ವಯಂಪ್ರೇರಿತವಾಗಿ ತಮ್ಮೂರಿನ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ ಮಾದರಿಯಾಗಿದ್ದಾರೆ.
  ಇದನ್ನೂ ಓದಿ: Vijayapura: ಹೆಲಿಕಾಪ್ಟರ್​​ನಲ್ಲಿ ವಿಜಯಪುರ ಸುತ್ತಿ! ಆಕಾಶದಿಂದ ಹೀಗೆ ಕಾಣುತ್ತೆ ನೋಡಿ ಗೋಲ್ ಗುಂಬಜ್


  ಶಾಲಾಭಿವೃದ್ಧಿಗಾಗಿ ಸ್ಥಳೀಯರು 5 ಸಾವಿರದಿಂದ 1 ಲಕ್ಷದವರೆಗೂ ದೇಣಿಗೆ ನೀಡಿದ್ದಾರೆ. ಅಂದಾಜು 50 ಲಕ್ಷದವರೆಗೂ ದೇಣಿಗೆ ಸಂಗ್ರಹಿಸಿ ಶಾಲೆಯ ಏಳಿಗೆಗೆ ಬಳಸಲಾಗಿದೆ.


  20 ಕಿ.ಮೀ ದೂರದಿಂದಲೂ ಆಗಮಿಸುವ ವಿದ್ಯಾರ್ಥಿಗಳು
  2011 ಸ್ಥಾಪನೆಯಾದ ಆರ್.ಎಂ.ಎಸ್.ಎ ಪ್ರೌಢಶಾಲೆಗೆ 2016ರಲ್ಲಿ ನೂತನ ಕಟ್ಟಡ ನಿರ್ಮಾಣವಾಯಿತು. ಸದ್ಯ ಒಟ್ಟು 10 ಕೊಠಡಿಗಳನ್ನು ಈ ಶಾಲೆ ಹೊಂದಿವೆ. ಈ ಒಂದು ಶಾಲೆಯಲ್ಲಿ ಮುಖ್ಯೋಪಾಧ್ಯಾಪಕರು ಸೇರಿ 7 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ 200ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿದ್ದು ಕೆಲವರು 20 ಕಿಲೋ ಮೀಟರ್​ಗಿಂತಲೂ ದೂರದಿಂದ ಇದೇ ಶಾಲೆಗೆ ಆಗಮಿಸ್ತಾರೆ.


  ಇದನ್ನೂ ಓದಿ: Vijayapura: ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತೆ ವಿಜಯಪುರದ ಈ ಶಾಲೆ!


  ದಾನಿಗಳ ನೆರವಿನಿಂದ ಪೀಠೋಪಕರಣಗಳು, ಕಲಿಕಾ ಸಾಮಗ್ರಿಗಳನ್ನ ಖರೀದಿಸಲಾಗಿದೆ. ಶಾಲಾ ಆವರಣದಲ್ಲಿ ಸ್ವಾತಂತ್ರೋತ್ಸವದ ಮಹೋತ್ಸವದ ಸವಿನೆನಪಿಗಾಗಿ ಧ್ವಜಕಟ್ಟೆ ಸಭಾ ಮಂಟಪ, ಒಲಿಂಪಿಕ್ ಧ್ವಜಸ್ತಂಭಗಳನ್ನ ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದು ಮೂಗು ಮುರಿಯುವರೆ ಈ ಶಾಲೆ ಮಾದರಿಯಾಗಿದೆ.


  ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: