ವಿಜಯಪುರ: ಇತ್ತೀಚಿನ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಆಲಮಟ್ಟಿ ಅಣೆಕಟ್ಟು ಕೇಂದ್ರೀಕರಿಸಿ ಹಲವು ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರವಾಸಿ ತಾಣಗಳು ತಲೆ ಎತ್ತಿವೆ. ಇದು ಸಹಜವಾಗಿಯೇ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಬರುವವರನ್ನು ಕೈ ಬೀಸಿ ಕರೆಯುತ್ತಿದೆ. ಇದೀಗ ಆಲಮಟ್ಟಿಯ (Almatti) ಜಲಾಶಯವಿರುವ ಕೃಷ್ಣಾ ನದಿಯಲ್ಲಿ (Krishna River) ಜಲಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ (Centre Government) ಅನುಮೋದನೆ ನೀಡಿದ್ದು, ಇನ್ನಷ್ಟು ಅಭಿವೃದ್ಧಿ ಜೊತೆಗೆ ಅತ್ಯುತ್ತಮ ಪ್ರವಾಸಿ ತಾಣವಾಗಿ (Travel Hub) ಬದಲಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.
ಜಲಸಾರಿಗೆ ಪ್ಲ್ಯಾನ್ ಹೀಗಿದೆ
ಈಗಾಗಲೇ ಕೇಂದ್ರ ಸರ್ಕಾರ ಆಲಮಟ್ಟಿ ಜಲಸಾರಿಗೆ ಅಭಿವೃದ್ಧಿಗೆ ಬೇಕಾಗಿ ಟೆಂಡರ್ ಕರೆದಿದ್ದು, ಹಂತ ಹಂತವಾಗಿ ಜಲಸಾರಿಗೆ ಅಭಿವೃದ್ಧಿ ಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಲಿದೆ. ಪ್ರಾರಂಭಿಕ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್ವರೆಗೆ ಕೃಷ್ಣಾ ನದಿಯಲ್ಲಿ 25 ಕಿಲೋ ಮೀಟರ್ ಉದ್ದದವರೆಗೆ ಹಾಗೂ ಎರಡನೇ ಹಂತದಲ್ಲಿ ಹೆರಕಲ್ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿಮೀ ಉದ್ದದವರೆಗೆ ಜಲಸಾರಿಗೆಗೆ ಉದ್ದೇಶಿಸಲಾಗಿದೆ. ಈಗ ಮೊದಲ ಹಂತದ ಯೋಜನೆ ಅನುಷ್ಠಾನ ಕಾಮಗಾರಿ ಆರಂಭಗೊಂಡಿವೆ.
ಮೊದಲ ಹಂತದ ಪ್ರಯೋಜನಗಳು
ಮೊದಲ ಹಂತದಲ್ಲಿ ಆಲಮಟ್ಟಿಯ ಜವಾಹರ ನವೋದಯ ಶಾಲೆಯ ಹಿಂಭಾಗ ಹಾಗೂ ಬೀಳಗಿ ತಾಲೂಕಿನ ಹೆರಕಲ್ ಬಳಿ ಕೃಷ್ಣಾ ನದಿ ತೀರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಫೆರ್ರಿ ಬೋಟ್ಗಳ ನಿಲ್ದಾಣ, ಜೆಟ್ಟಿ ನಿರ್ಮಾಣ, ಕಾಂಕ್ರೀಟ್ ಜೆಟ್ಟಿ ನಿರ್ಮಾಣ, ಪಾರ್ಕಿಂಗ್, ಲೈಟಿಂಗ್ ವ್ಯವಸ್ಥೆ, ಸರಕು ಬೋಟ್ನಲ್ಲಿ ಹಾಕಲು ನಾನಾ ಯಂತ್ರಗಳು ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು.
ಇದನ್ನೂ ಓದಿ: Vijayapura: ಹೆಲಿಕಾಪ್ಟರ್ನಲ್ಲಿ ವಿಜಯಪುರ ಸುತ್ತಿ! ಆಕಾಶದಿಂದ ಹೀಗೆ ಕಾಣುತ್ತೆ ನೋಡಿ ಗೋಲ್ ಗುಂಬಜ್
ಆಲಮಟ್ಟಿಯ ಅದೃಷ್ಟ!
ಹೌದು, ಯೋಜನೆ ಸಂಪೂರ್ಣ ಜಾರಿಯಾದ ಮೇಲೆ ಆಲಮಟ್ಟಿಗೆ ಬರುವ ಪ್ರವಾಸಿಗರಿಗಂತೂ ಹೊಸ ಅನುಭವವನ್ನ ನೀಡಲಿದೆ. ಈಗಾಗಲೇ ಆಲಮಟ್ಟಿ ಸಾಕಷ್ಟು ಸುಂದರ ಪರಿಸರ ಹಾಗೂ ದೇಶ ವಿದೇಶ ಪಕ್ಷಿಗಳ ಸಂಕುಲಗಳ ತಾಣವಾಗಿದೆ.
ಇದನ್ನೂ ಓದಿ: Krishna River: ಕೃಷ್ಣಾ ನದಿಯಲ್ಲಿ ಮಿಂದೆದ್ದ ಸಾವಿರಾರು ಜನರು! ಕಾರಣ ಹೀಗಿದೆ ನೋಡಿ
ಹಿನ್ನೀರಿನ ಸುಂದರ ದೃಶ್ಯ, ಪಕ್ಷಿ ಸಂಕುಲ ವೀಕ್ಷಣೆಗೆ ಅನುಕೂಲವಾಗಿದೆ. ಹಿನ್ನೀರಿನಲ್ಲಿ ನಾನಾ ರೀತಿಯ ದ್ವೀಪದ ಪ್ರದೇಶಗಳಿದ್ದು, ಅಲ್ಲಿ ಪ್ರವಾಸಿ ಚಟುವಟಿಕೆ ವಿಸ್ತರಿಸಲು, ಜಲ ಆಧಾರಿತ ಕ್ರೀಡೆಗಳ ಬೆಳವಣಿಗೆಗೆ ಈ ಸಾರಿಗೆ ಅನುಕೂಲವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ