Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

X
ಕೃಷ್ಣಾ ನದಿ ಹುಟ್ಟಿದ ಸ್ಥಳ ಇದೇ

"ಕೃಷ್ಣಾ ನದಿ ಹುಟ್ಟಿದ ಸ್ಥಳ ಇದೇ"

ಲಕ್ಷಾಂತರ ಜನರ ಜೀವನಾಡಿ ಕೃಷ್ಣಾ ನದಿ. ಈ ಪವಿತ್ರ ನದಿ ಹುಟ್ಟುವುದು ಎಲ್ಲಿ? ಉಗಮವಾಗುವ ಅದ್ಭುತ ಕ್ಷಣ ಹೇಗಿರುತ್ತದೆ? ನೀವೇ ವಿಡಿಯೋ ನೋಡಿ.

  • Share this:

    ವಿಜಯಪುರ: ಉತ್ತರ ಕರ್ನಾಟಕದ ಜನಮನದ ಜೀವನಾಡಿಯಾದ ಕೃಷ್ಣಾ ನದಿ. ಈ ನದಿ ಹುಟ್ಟೋದೆಲ್ಲಿ? ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಕೃಷ್ಣಾ ನದಿ ಹುಟ್ಟುವ ಜಾಗ ಈ ಪ್ರಶ್ನೆಯಷ್ಟೇ ಕುತೂಹಲಕರವಾಗಿದೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರದ ಪಂಚಗಂಗಾ ದೇಗುಲದಲ್ಲಿ (Mahabaleshwar Panch Ganga Temple) ಹುಟ್ಟುತ್ತಾಳೆ ಕೃಷ್ಣೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ತಾಣಗಳಲ್ಲಿ ಹುಟ್ಟಿ ವಿಜಯಪುರ ಜಿಲ್ಲೆಗೆ (Vijayapura News) ಕಾಲಿಡುವ ಕೃಷ್ಣೆ ಲಕ್ಷಾಂತರ ಜನರ ಜೀವನಾಡಿಯೇ ಆಗಿದ್ದಾಳೆ. ಹಾಗಾದರೆ ಕೃಷ್ಣಾ ನದಿ ಹುಟ್ಟುವ ಪವಿತ್ರ ಕ್ಷಣದ (Krishna River Origin Video) ವಿಡಿಯೋವನ್ನು ನೀವೂ ನೋಡಿ ಧನ್ಯರಾಗಿ!


    ಕೃಷ್ಣಾ ನದಿ ಹುಟ್ಟುವ ಪಂಚಗಂಗೆ ಎಂದರೆ ರೈತರಿಗೆ ಭಕ್ತಿ ಭಾವ. ಕೃಷ್ಣ, ವೆನ್ನಾ, ಸಾವಿತ್ರಿ, ಕೊಯ್ನಾ ಮತ್ತು ಗಾಯತ್ರಿ ಎಂಬ ಐದು ನದಿಗಳ ಸಂಗಮದಲ್ಲಿ ಪಂಚಗಂಗಾ ದೇವಾಲಯವನ್ನು ನಿರ್ಮಿಸಲಾಗಿದೆ.


    ಪಂಚಗಂಗಾ ಎಂಬ ಹೆಸರು ಬಂದಿದ್ದೇಗೆ?
    ಈ ದೇವಾಲಯದ ಗೋವಿನ ಪ್ರತಿಮೆಯ ಬಾಯಿಯಿಂದ ಎಲ್ಲಾ ನದಿಗಳು ಹೊರಬರುತ್ತವೆ, ಆದ್ದರಿಂದ ಈ ಸ್ಥಳವನ್ನು ಪಂಚಗಂಗಾ ಎಂದು ಕರೆಯಲಾಗುತ್ತದೆ. ಈ ಮಹಾಬಲೇಶ್ವರ ದೇವಸ್ಥಾನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.


    ಬಾಗಿನ ಅರ್ಪಿಸಿ ಪ್ರಾರ್ಥನೆ
    ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಕಳೆದ 15 ವರ್ಷಗಳಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಬಾಗಲಕೋಟೆ ರೈತರೊಂದಿಗೆ ಕಡ್ಲಿಗರ ಹುಣ್ಣಿಮೆಯಂದು (ಗುರು ಪೂರ್ಣಿಮೆ) ಇಲ್ಲಿಗೆ ಆಗಮಿಸಿ ಭಕ್ತಿಪೂರ್ವಕವಾಗಿ ಗಂಗಾಪೂಜೆ ನೆರವೇರಿಸಿ ನಾಡಿಗೆ ಮಳೆ, ಬೆಳೆ ಸಮೃದ್ಧವಾಗಿ ಬರಲಿ ಎಂದು ಬಾಗಿನ ಅರ್ಪಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಆದರೆ ಕೊರೊನಾ ಈ ಪೂಜೆಗೆ ತಡೆ ಒಡ್ಡಿತ್ತು. ಸದ್ಯ ಈ ವರ್ಷ ಕೋವಿಡ್ ಇಳಿಮುಖವಾಗಿದ್ದರಿಂದ ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಬಾಗಿನ ಬಿಡುವುದರೊಂದಿಗೆ ಪೂಜೆ ಸಲ್ಲಿಸಿದ್ದಾರೆ.


    ಇದನ್ನೂ ಓದಿ: Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ ನೋಡಿ


    ಕೃಷ್ಣೆ ಸುಮಾರು 1,392 ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ಸೇರುತ್ತಾಳೆ. ಕರ್ನಾಟಕದಲ್ಲಿ ಸರಿಸುಮಾರು 483 ಕಿ.ಮಿ. ಹರಿಯುತ್ತಾಳೆ ಕೃಷ್ಣೆ. ಈ ನದಿಗೆ ಅಡ್ಡಲಾಗಿ ಆಲಮಟ್ಟಿಯಲ್ಲಿ ಲಾಲ್ ಬಹದ್ದೂರ ಶಾಸ್ತ್ರಿ ಸಾಗರವನ್ನ ನಿರ್ಮಿಸಲಾಗಿದೆ. ಹೇಳಿಕೇಳಿ ಬರದ ಜಿಲ್ಲೆಯಂದು ಹಣೆಪಟ್ಟಿ ಕಟ್ಟಿಕೊಂಡಿರುವ ಈ ವಿಜಯಪುರ ಜಿಲ್ಲೆಯ ಜನರಿಗೆ ಕೃಷ್ಣಾ ನದಿನೀರೆ ಆಧಾರವಾಗಿದ್ದು. ರೈತರಿಗೆ, ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಮಾಯವಾದಂತಾಗಿದೆ.


    ಇದನ್ನೂ ಓದಿ: Krishna River Origin: ಕೃಷ್ಣಾ ನದಿ ಹುಟ್ಟೋದೆಲ್ಲಿ? ಇಲ್ಲೇ ಎನ್ನುತ್ತವೆ ಈ ಫೋಟೋಗಳು!


    Mahabaleshwar, Maharashtra 412806
    ಮಹಾಬಲೇಶ್ವರ ದೇವಾಲಯಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಹೀಗಾಗಿ ಅವಳಿ ಜಿಲ್ಲೆಯ ರೈತರು, ಮಹಿಳೆಯರು ಸೇರಿದಂತೆ ಸಾಕಷ್ಟು ಜನರು ಅತೀವ ಮಳೆ ಲೆಕ್ಕಿಸದೇ ಮಹಾಬಳೇಶ್ವರಕ್ಕೆ ಆಗಮಿಸಿದ್ದರು. ಕೃಷ್ಣಾನದಿ ಉಗಮಸ್ಥಾನದಲ್ಲಿ ಬಾಗಿನ ನೀಡಿದರು. ವಿಶೇಷ ಪೂಜೆ ಸಲ್ಲಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:guruganesh bhat
    First published: