• Home
  • »
  • News
  • »
  • vijayapura
  • »
  • Krishi Mela: ಬಾಗಲಕೋಟೆಯಲ್ಲಿ ಕೃಷಿಕರ ಖುಷಿ! ಫಲಪುಷ್ಪ ಪ್ರದರ್ಶನದಲ್ಲಿ ಮಹಾನ್ ನಾಯಕರು

Krishi Mela: ಬಾಗಲಕೋಟೆಯಲ್ಲಿ ಕೃಷಿಕರ ಖುಷಿ! ಫಲಪುಷ್ಪ ಪ್ರದರ್ಶನದಲ್ಲಿ ಮಹಾನ್ ನಾಯಕರು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಾಗಲಕೋಟೆಯ ಫಲಪುಷ್ಪ ಪ್ರದರ್ಶನ ಹತ್ತು ಹಲವು ವಿಶೇಷ ಕಾರಣಗಳಿಗಾಗಿ ಜನರನ್ನ ಕೈ ಬೀಸಿ ಕರೆಯಿತು.

  • News18 Kannada
  • Last Updated :
  • Bagalkot, India
  • Share this:

    ವಿಜಯಪುರ: ಜಗಜ್ಯೋತಿ ಬಸವೇಶ್ವರರು, ವಚನಕಾರ್ತಿ ಅಕ್ಕಮಹಾದೇವಿ, ನೇತಾಜಿ ಸುಭಾಸ್ ಚಂದ್ರ ಬೋಸ್, ಕ್ರಾಂತಿಕಾರಿ ಭಗತ್ ಸಿಂಗ್, ವರಕವಿ ಬೇಂದ್ರೆ, ರಾಷ್ಟ್ರಕವಿ ಕುವೆಂಪು, ಭಾರತದ ಮಹಾನ್ ಪುರುಷ ಸ್ವಾಮಿ ವಿವೇಕಾನಂದ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಹೌದು, ಇವರೆಲ್ಲರೂ ಬಾಗಲಕೋಟೆಯ ತೋಟಗಾರಿಕಾ ಮೇಳದಲ್ಲಿ (University of Horticultural Sciences, Bagalkot) ಒಂದೇ ವೇದಿಕೆಯಲ್ಲಿ ಕಾಣಸಿಕೊಂಡರು. ಜನರಂತೂ ಅವರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು. ಇವ್ರೆಲ್ಲ ನಮ್ಮನ್ನ ಅಗಲಿದರೂ ನಮ್ಮ ನಡುವೆ ಪ್ರತಿ ವೇದಿಕೆಯಲ್ಲೂ ಹೀಗೆ ಮರುಜನ್ಮ ಪಡೆಯುತ್ತಲೇ ಇರೋದು ವಿಶೇಷ.


    ಯೆಸ್, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನದಲ್ಲಿ ದೇಶದ ಮಹಾನ್ ನಾಯಕರುಗಳು ಸಾಕ್ಷಿಯಾದರು. ನೆರೆದವರಂತೂ ಈ ಮಹಾನ್ ಚೇತನಗಳ ಮುಂದೆ ನಿಂತು ನೆನಪುಗಳನ್ನು ಮೆಲುಕು ಹಾಕಿದರು.


    ಆಕರ್ಷಿತರಾದ ಅತಿಥಿಗಳು
    ಜೊತೆಗೆ ಇತರೆ ಅಲಂಕಾರಿಕಾ ಹೂಗಳು, ಹಣ್ಣು ತರಕಾರಿಗಳು ಗಮನಸೆಳೆದವು. ತೋಟಗಾರಿಕೆ ಆವರಣದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳ ಕೈಚಳಕದಲ್ಲಿ ಈ ಸಂತರು, ಶರಣರು, ಹೋರಾಟಗಾರರು, ಕವಿಗಳು, ಸಾಹಿತಿಗಳು ಇವರೆಲ್ಲ  ಮರುಹುಟ್ಟು ಪಡೆದು ಈ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಜನರು ಕೂಡಾ ಕಲ್ಲಂಗಡಿ ಮೇಲೆ ಅರಳಿದ ನಾಯಕರತ್ತ ಹೆಚ್ಚು ಆಕರ್ಷಿತರಾದರು.


    ಹತ್ತು ಹಲವು ತರಕಾರಿಗಳ ಆಕರ್ಷಣೆ
    ಇನ್ನುಳಿದಂತೆ ಗಜ್ಜರಿ, ಕೆಂಪುಮೂಲಂಗಿ, ಮೆಂತೆ, ಹಾಗಲಕಾಯಿ, ಹೀರೇಕಾಯಿ, ಆಲೂಗಡ್ಡೆ, ಸೌತೆಕಾಯಿ, ಬೀನ್ಸ್, ಚೌಳಿಕಾಯಿ, ಬದನೆಕಾಯಿ, ಎಲೆಕೋಸು, ಪಾಲಕ, ಪುದೀನ, ಕರಿಬೇವು, ಕಲರ್ ಕಲರ್ ಟೊಮ್ಯಾಟೊ, ಬೆಂಡೆಕಾಯಿ, ಡೊಣ್ಣ ಮೆಣಸಿನಕಾಯಿ ಹೀಗೆ ಹತ್ತು ಹಲವು ಬಗೆಯ ತರಕಾರಿಗಳೂ ಇದ್ದವು.


    ಇದನ್ನೂ ಓದಿ: Vijayapura: ಬಬಲಾದಿ ಮಠದ ಕೊರೊನಾ ಭವಿಷ್ಯ!


    ವಿದೇಶದ ಹೂಗಳೂ ಇದ್ದವು
    ಇವುಗಳೆಲ್ಲವೂ ಸಾವಯವ ಪದ್ಧತಿಯನ್ನ ಅಳವಡಿಸಿಕೊಂಡು ರೈತರು ಬೆಳೆದ ತರಕಾರಿಯಾಗಿದ್ದವು. ವಿದೇಶದ ಜರ್ಬೆರಾ, ಬ್ಲೂ ಡಿಜೆ, ಪಿಲಿಕಾನ್, ಟೈಟಾನ್ ಅರಮ್, ಕರ್ನಾಟಕದ ಗುಲಾಬಿ, ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಚೆಂಡು ಹೂವು, ಸುಗಂಧರಾಜ ಹೂಗಳೂ ಇದ್ದವು. ಮಹಿಳೆಯರಂತೂ ಹೂವುಗಳನ್ನ ಕಂಡು ಹಿರಿಹಿರಿಯಾಗಿ ಹಿಗ್ಗಿದರು. ಇನ್ನುಳಿದಂತೆ ತೋಟಗಾರಿಕೆ ಸಂಬಂಧಿತ ಮಾಹಿತಿಯನ್ನೂ ನೀಡಲಾಯಿತು.


    ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!


    ಒಟ್ಟಿನಲ್ಲಿ ಬಾಗಲಕೋಟೆಯ ಫಲಪುಷ್ಪ ಪ್ರದರ್ಶನ ಹತ್ತು ಹಲವು ವಿಶೇಷ ಕಾರಣಗಳಿಗಾಗಿ ಜನರನ್ನ ಕೈ ಬೀಸಿ ಕರೆಯಿತು.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: