ವಿಜಯಪುರ : ವಿಜಯಪುರ ನಗರದ (Vijayapura News) ಹಿಟ್ನಳ್ಳಿ ಬಳಿ ಇರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜನವರಿ 1 ರಿಂದ 3ರವರೆಗೆ ಕೃಷಿ ಮೇಳ (Krishi Mela) ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ ಧಾರವಾಡ-ವಿಜಯಪುರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಈ ಕೃಷಿ ಮೇಳ ನಡೆಯಲಿದೆ. ಬರ, ನೆರೆ, ಹವಾಮಾನ ವೈಪರಿತ್ಯದಿಂದಾಗಿ ಸಂಕಷ್ಟದಲ್ಲಿರುವ ಅನ್ನದಾತರಿಗೆ ಮಣ್ಣು, ನೀರು, ಪರಿಸರ ಸಂರಕ್ಷಣೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಬೆಳೆ ರಕ್ಷಣೆ ತಂತ್ರ ಹೇಳಿಕೊಡಲು ವಿಜಯಪುರದಲ್ಲಿ ನಡೆಯುವ ಕೃಷಿ ಮೇಳದ ವೇದಿಕೆಯಾಗಲಿದೆ.
ಹಲವು ರೈತರಿಗೆ ವರದಾನವಾಗುವ ನಿರೀಕ್ಷೆ
ವಿಜಯಪುರ ಜಿಲ್ಲೆಯಲ್ಲಿ ಸದ್ಯ ಹವಾಮಾನ ವೈಪರಿತ್ಯದಿಂದಾಗಿ ಜೋಳ, ಕಡಲೆ, ಈರುಳ್ಳಿ, ತೊಗರಿ, ಮೆಕ್ಕೆ ಜೋಳದ ಸೇರಿದಂತೆ ಹಲವಾರು ಬೆಳೆಗಳಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಕೃಷಿ ಮೇಳ ಉತ್ತರವಾಗಬಹುದು ಎಂಬ ನಿರೀಕ್ಷೆಯಿದೆ.
ಲಕ್ಷಾಂತರ ಅನ್ನದಾತರು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ
ಜನವರಿ 1 ರಿಂದ ಜನವರಿ 3ರ ವರೆಗೆ ಮೂರು ದಿನಗಳವರೆಗೆ ಕೃಷಿ ಮೇಳ ನಡೆಯಲಿದ್ದು ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಅನ್ನದಾತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಮೇಳದಲ್ಲಿ ವಿಜಯಪುರ ಜಿಲ್ಲೆಯ ರೈತರು ಭಾಗಿಯಾಗಿ ತಮ್ಮ ಕೃಷಿಗೆ ಸಂಭಂದಿಸಿದ ಮಾಹಿತಿಯನ್ನ ವಿಜ್ಞಾನಿಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೃಷಿ ಮೇಳದ ವಿಶೇಷತೆಗಳು
ಇದರ ಜೊತೆಗೆ ತಜ್ಞರೊಂದಿಗೆ ಚರ್ಚೆ, ಪ್ರಯೋಗ ಕೈಗೊಂಡವರ ಭೇಟಿ, ಕೃಷಿ ಹವಾಮಾನ ಶಾಸ್ತ್ರ, ಒಣಬೇಸಾಯ ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸಲಾಗಿತ್ತದೆ.
ಇದನ್ನೂ ಓದಿ: Uttara Kannada: ಕಂಬಳದ ಬಾರುಕೋಲು ಇಲ್ಲೇ ತಯಾರಾಗುತ್ತೆ!
ಹಿಂಗಾರಿನ ಜೋಳದ ತಳಿಯ ಅಭಿವೃದ್ಧಿ, ಮಳೆ ನೀರು ಕೊಯ್ದು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಕೃಷಿ ಹವಾಮಾನ ಮಾಹಿತಿ, ಬೀಜೋತ್ಪಾದನೆ ಹಾಗೂ ಬೀಜ ಸಂಸ್ಕರಣೆ, ಕೃಷಿ ಗೃಹ ವಿಜ್ಞಾನ ಕುರಿತಂತೆ ಮಾಹಿತಿ ನೀಡಲಾಗುವದು.
ಕೃಷಿ ಪರಿಕರ ಮಾರಾಟ ಮಳಿಗೆಯೂ ಇರಲಿದೆ
ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಿ ಅದರಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆ ಏರ್ಪಡಿಸಲಾಗಿದೆ. ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಳಿಗೆ, ವಿವಿಧ ಸಂಶೋಧನಾ ಕೇಂದ್ರಗಳ ಮಳಿಗೆ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Vijayapura: ಮನೆಯ ಹಿರಿಯರಿಗೆ ಜೀವ ತರಿಸುವ ಬೆಚ್ಚಗಿನ ಕೌದಿ! ಚಳಿಗಾಲದಲ್ಲಿ ಇದು ಬಾರೀ ಬೆಸ್ಟ್
ಕೃಷಿ ಸಲಹಾ ಕೇಂದ್ರ ಏರ್ಪಡಿಸಿ ಇದರಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಲಭ್ಯವಿದ್ದು, ಮೇಳಕ್ಕೆ ಬರುವ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ